Advertisement

ಕರೋಪಾಡಿ : ಸಿಡಿಲು ಬಡಿದು ವ್ಯಕ್ತಿ ಸಾವು ; ಮನೆಗೆ ಹಾನಿ

10:31 AM Dec 11, 2020 | sudhir |

ವಿಟ್ಲ: ಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮದಲ್ಲಿ ಸಿಡಿಲು ಬಡಿದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಕರೋಪಾಡಿ ಗ್ರಾಮದ ಸಾರ್ಥಕೋಡಿ ಎಂಬಲ್ಲಿ ಗುರುವಾರ ರಾತ್ರಿ ಈ ಘಟನೆ ಸಂಭವಿಸಿದೆ. ಚಂದಪ್ಪ ಮೂಲ್ಯ ಮೃತಪಟ್ಟವರು.

Advertisement

ರಾತ್ರಿ 12 ಗಂಟೆ ಮೇಲೆ ಭಾರೀ ಮಿಂಚು, ಗುಡುಗು ಸಿಡಿಲಿನ ಆರ್ಭಟವಿತ್ತು. ಈ ಸಂದರ್ಭದಲ್ಲಿ ಮನೆಗೆ ಸಿಡಿಲು ಬಡಿದಿದೆ. ಆಗ ಚಂದಪ್ಪ ಮೂಲ್ಯ ಅವರು ಆಘಾತದಿಂದ ತೀವ್ರ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಇದೇ ಸಂದರ್ಭ ಮನೆಗೂ ಸಿಡಿಲು ಬಡಿತದಿಂದ ಹಾನಿಯುಂಟಾಗಿದೆ. ವಿದ್ಯುತ್ ವಯರಿಂಗ್ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳು ಸುಟ್ಟುಹೋಗಿವೆ.

ಇದನ್ನೂ ಓದಿ:ರಾಜಸ್ಥಾನ್ ಸರ್ಕಾರಿ ಆಸ್ಪತ್ರೆ: ಒಂದೇ ಗಂಟೆಯಲ್ಲಿ ಒಂಬತ್ತು ನವಜಾತ ಶಿಶುಗಳ ಸಾವು

Advertisement

Udayavani is now on Telegram. Click here to join our channel and stay updated with the latest news.

Next