Advertisement

ಕೆಲವೆಡೆ ಹದ ಮಳೆ: ಕೃಷಿ ಕಾರ್ಯ ಚುರುಕು

10:42 AM Jun 23, 2019 | Suhan S |

ಮುಂಡರಗಿ: ತಾಲೂಕಿನ ಹಳ್ಳಿಕೇರಿ, ವೆಂಕಟಾಪುರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದಾಗಿ ಭೂಮಿ ಹದವಾಗಿದೆ.

Advertisement

ಕಳೆದ ಮೂರನಾಲ್ಕು ದಿನಗಳಿಂದ ಮೋಡ ಕವಿದ ವಾತಾವರಣವಿತ್ತು. ಆದರೆ ಮಳೆಯ ದರ್ಶನ ಮಾತ್ರ ಆಗಿರಲಿಲ್ಲ. ಹೀಗಾಗಿ ರೈತರು, ಜನ ಜಾನುವಾರಗಳು ಸಂಕಷ್ಟದಲ್ಲಿದ್ದರು. ಆದರೆ ಶುಕ್ರವಾರ ರಾತ್ರಿ ಸುರಿದ ಮಳೆ ರೈತರ ಮೊಗದಲ್ಲಿ ನೆಮ್ಮದಿ ನೀಡಿದ್ದು, ಕೃಷಿ ಚಟುವಟಿಕೆಗಳು ಗರಿಗೇದರಿವೆ.

ಮಳೆಯಾಗಿದ್ದರಿಂದ ಕೃಷಿ ಕೇಂದ್ರಕ್ಕೆ ಹೋಗಿ ಬೀಜ ಗೊಬ್ಬರ ಖರೀದಿಸುತ್ತಿದ್ದಾರೆ. ಕುರಿ ಆಡುಗಳು ದನಕರಗಳು ಕುಡಿಯುವ ನೀರಿಗಾಗಿ ಪರಿತಪಿಸುವುದು ತಪ್ಪಿದೆ. ಜೊತೆಗೆ ಮಳೆ ನೀರು ಹಳ್ಳದಲ್ಲಿ ತಗ್ಗು ಪ್ರದೇಶದಲ್ಲಿ ಸಂಗ್ರಹವಾಗುವುದರಿಂದ ಜಾನುವಾರುಗಳಿಗೂ ಅನುಕೂಲವಾಗಿದೆ.

ಈಗಾಗಲೆ ಬಿತ್ತನೆಯಾಗಿ ಜಮೀನಿನಲ್ಲಿ ಹಸಿರು ಕಾಣಬೇಕಿತ್ತು. ಆದರೆ ಮಳೆಯ ಅಭಾವದಿಂದ ಜಮೀನುಗಳಲ್ಲಿ ಬಿತ್ತನೆಯು ಆಗಿಲ್ಲ. ನಿನ್ನೆ ಸುರಿದ ಮಳೆಯಿಂದಾಗಿ ಭೂಮಿ ಹದವಾಗಿದ್ದು, ರೈತರು ಕೃಷಿ ಚಟುವಟಿಕೆಯಲ್ಲಿ ನಿರತರಾಗುವ ಸಾಧ್ಯತೆಗಳು ಹೆಚ್ಚಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next