Advertisement

ಹಳೆಯಂಗಡಿ ಸಿಡಿಲಿನ ಅಘಾತ: ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟ ಮತ್ತೋರ್ವ ಬಾಲಕ

09:08 AM Apr 22, 2021 | Team Udayavani |

ಹಳೆಯಂಗಡಿ : ಇಲ್ಲಿನ ಬೊಳ್ಳೂರಿನ ಇಂದಿರಾ ನಗರದಲ್ಲಿ ಆಟವಾಡುತ್ತಿದ್ದ ಪುಟ್ಟ ಮಕ್ಕಳು  ಸಿಡಿಲಿನ ಅಘಾತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ಹೋರಾಟ ನಡೆಸುತ್ತಿದ್ದ ಮತ್ತೋರ್ವ ಬಾಲಕ ಮಾರುತೇಶ್ (6 ವ) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ಗುರುವಾರ ಮುಂಜಾನೆ ನಡೆದಿದೆ.

Advertisement

ಇಂದಿರಾ ನಗರದ ಬೊಳ್ಳೂರು ಮಸೀದಿ ಹಿಂಭಾಗದ ಮನೆಯ ಮುಂಭಾಗದಲ್ಲಿ ಖಾಸಗಿ ಜಮೀನಿನಲ್ಲಿ ಆಟವಾಡುತ್ತಿದ್ದ ಮನ್ಸೂರ್ ಎಂಬುವರ ಎರಡನೇ ಪುತ್ರ ನಿಹಾನ್ (6 ವ) ಗಂಗಾವತಿ ಮೂಲದ ದುರ್ಗಪ್ಪ ಎಂಬುವವರ ಮಗ ಮಾರುತೇಶ್ (6 ವ) ತೀವ್ರ ನಿಗಾ ಘಟಕದಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬುಧವಾರ ನಿಹಾನ್ ಮೃತಪಟ್ಟಿದ್ದನು.

ಇದನ್ನೂ ಓದಿ:ಸೋಂಕಿತರು ಮತ್ತು ಶವ ಸಾಗಾಟ ಮಾಡುವ ಆ್ಯಂಬುಲೆನ್ಸ್ ಗಳಿಗೆ ಸರ್ಕಾರದಿಂದಲೇ ದರ ನಿಗದಿ: ಸುಧಾಕರ್

ಮಂಗಳವಾರ ಸಂಜೆ ಮನೆಯ ಹತ್ತಿರ ಆಟವಾಡುತ್ತಿದ್ದಾಗ ಸಿಡಿಲು ಬಡಿದ ಪರಿಣಾಮ ಮಕ್ಕಳು ಸ್ಥಳದಲ್ಲಿಯೇ ಮೂರ್ಛೆ ಹೋಗಿದ್ದರು. ನಂತರ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next