Advertisement
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಬಾರಿ ಗೌರವ ಡಾಕ್ಟರೇಟ್‌ಗಾಗಿ 12 ಪ್ರಸ್ತಾವನೆಗಳಲ್ಲಿ ಮೂವರ ಹೆಸರನ್ನು ಕುಲಾಧಿಪತಿಗಳು ಆಯ್ಕೆ ಮಾಡಿದ್ದಾರೆ ಎಂದರು.
ಮಂಗಳೂರು ವಿ.ವಿ.ಯ 155 ಮಂದಿಗೆ ಪಿಎಚ್‌ಡಿ. ಡಾಕ್ಟರೇಟ… ಪದವಿ (ಕಲೆ 51, ವಿಜ್ಞಾನ 73, ವಾಣಿಜ್ಯ 26, ಶಿಕ್ಷಣ 5) ನೀಡಲಾಗುವುದು. ಇವರಲ್ಲಿ 60 ಮಹಿಳೆಯರು ಮತ್ತು 95 ಪುರುಷರು. ಈ ಪೈಕಿ 18 ಅಂತಾ ರಾಷ್ಟ್ರೀಯ ವಿದ್ಯಾರ್ಥಿಗಳು ಹಾಗೂ 4 ಅಂತಾರಾಷ್ಟ್ರೀಯ ಮಹಿಳಾ ವಿದ್ಯಾ ರ್ಥಿನಿಯರು ಪಿಎಚ್‌ಡಿ ಪದವಿ ಪಡೆಯುವರು. 58 ಚಿನ್ನದ ಪದಕ ಮತ್ತು 57 ನಗದು ಬಹುಮಾನಗಳಿದ್ದು, ವಿವಿಧ ಕೋರ್ಸ್‌ಗಳ ಒಟ್ಟು 168 ರ್‍ಯಾಂಕ್‌ಗಳಲ್ಲಿ ಪ್ರಥಮ ರ್‍ಯಾಂಕ್ ಪಡೆದ 72 ಮಂದಿಗೆ ರ್‍ಯಾಂಕ್ ಪ್ರಮಾಣ ಪತ್ರ ನೀಡುವುದಾಗಿ ತಿಳಿಸಿದರು.
Related Articles
Advertisement
ವಿ.ವಿ. ಕುಲಸಚಿವ (ಆಡಳಿತ) ರಾಜು ಮೊಗವೀರ, ಪರೀಕ್ಷಾಂಗ ಕುಲಸಚಿವ ಡಾ| ದೇವೇಂದ್ರಪ್ಪ, ಹಣಕಾಸು ವಿಭಾಗದ ಪ್ರೊ| ಸಂಗಪ್ಪ, ವಿ.ವಿ. ಪ್ರಾಂಶುಪಾಲರಾದ ಗಣಪತಿ ಗೌಡ ಉಪಸ್ಥಿತರಿದ್ದರು.
ಕೆ. ಪ್ರಕಾಶ್ ಶೆಟ್ಟಿ ಉಡುಪಿಯ ಕೊರಂಗ್ರಪಾಡಿ ಗ್ರಾಮದಲ್ಲಿ ಹುಟ್ಟಿ ಬೆಂಗಳೂರಿಗೆ ಹೋಗಿ ಬಂಜಾರ ರೆಸ್ಟೋರೆಂಟ್ ಆರಂಭಿಸಿದ ಕೆ. ಪ್ರಕಾಶ್ ಶೆಟ್ಟಿ ಅವರು ಎಂಆರ್‌ಜಿ ಹಾಸ್ಪಿಟಾಲಿಟಿ ಮತ್ತು ಇನ್‌ಫ್ರಾಸ್ಟ್ರಕ್ಚರ್ ಪ್ರೈ.ಲಿ. ಸ್ಥಾಪಿಸಿ ದೇಶ-ವಿದೇಶದಲ್ಲಿ ಹೊ ಟೇಲ್ ಉದ್ಯಮವನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಎಂಆರ್‌ಜಿ ಸಂಸ್ಥೆಯ ಹೊಟೇಲ್‌ಗಳು ದೇಶ-ವಿದೇಶ
ಗಳಲ್ಲೂ ಮಾನ್ಯತೆ ಪಡೆದಿವೆ. ಇದರೊಂದಿಗೆ ತಾವು ಗಳಿಸಿದ ಸಂಪತ್ತನ್ನು ಅನಾಥಾಶ್ರಮ, ವೃದ್ಧಾಶ್ರಮ, ಶಿಕ್ಷಣ ಸಂಸ್ಥೆಗಳು, ಸಮಾಜದ ಅಶಕ್ತರಿಗೆ ನೀಡುವ ಮೂಲಕ ಅವರು ಸಾಮಾಜಿಕ ಸೇವೆ ಸಲ್ಲಿಸಿದ್ದಾರೆ. ಕೋಟ್ಯಾಂತರ ರೂ. ವಿದ್ಯಾರ್ಥಿ ವೇತನ ನೀಡುತ್ತಿದ್ದಾರೆ. ಡಾ| ತುಂಬೆ ಮೊಯ್ದಿನ್
ಮಂಗಳೂರಿನ ಪ್ರಸಿದ್ಧ ಉದ್ಯಮ ಕುಟುಂಬದ 3ನೆ ತಲೆಮಾರಿನ ಉದ್ಯಮಿ. ತಂದೆ ಸ್ಥಾಪಿಸಿದ ವ್ಯಾಪಾರದ ಚುಕ್ಕಾಣಿ ಹಿಡಿದಅವರು, ತುಂಬೆ ಗ್ರೂಪ್‌ನ ಸಂಸ್ಥಾಪಕ ಅಧ್ಯಕ್ಷರು. 20 ವಲಯಗಳಲ್ಲಿನ ಅಂತಾರಾಷ್ಟ್ರೀಯ ಉದ್ಯಮ ಸಮೂಹ ತುಂಬೆ ಗ್ರೂಪ್, ದುಬಾೖ ಇಂಟರ್‌ನ್ಯಾಶನಲ್ ಫೈನಾನ್ಷಿಯಲ್ ಸೆಂಟರ್‌ನಲ್ಲಿ ಪ್ರಧಾನ ಕಚೇರಿ ಹೊಂದಿದೆ. ಯುಎಇನಲ್ಲಿ 5,000 ಉದ್ಯೋಗಿಗಳನ್ನು ಹೊಂದಿದೆ. ತುಂಬೆ ಮೊಯ್ದಿನ್ ಅರಬ್ ರಾಷ್ಟ್ರಗಳಲ್ಲಿನ ಭಾರತೀಯ ಉದ್ಯ ಮಿಗಳಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ವೈದ್ಯಕೀಯ ಶಿಕ್ಷಣ, ಉದ್ಯಮ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಡಾ| ರೊನಾಲ್ಡ್ ಕೊಲಾಸೊ
ಮೂಲತಃ ಮೂಡು ಬಿದಿರೆಯ ಡಾ| ರೊನಾಲ್ಡ್ ಕೊಲಾಸೊಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಉದ್ಯಮಿ. ಬೆಂಗಳೂರು ಏರ್‌ಪೋರ್ಟ್ ಬಳಿ “ಹಾಲಿ ವುಡ್ ಟೌನ್ ಹಾಗೂ ಸ್ವಿಸ್ ಟೌನ್’ ಎಂಬ ವಿಶೇಷ ಟೌನ್‌ಶಿಪ್ ನಿರ್ಮಿಸಿದ್ದಾರೆ. ದೇವನಹಳ್ಳಿಯಲ್ಲಿ ಅಂತಾರಾಷ್ಟ್ರೀಯ ದರ್ಜೆಯ ರೆಸಾರ್ಟ್, ವಸತಿ ಸಮುಚ್ಚಯ ನಿರ್ಮಿಸಿದ್ದಾರೆ. ರಾಜ್ಯದವಿವಿ ಧೆಡೆ ಶಿಕ್ಷಣ ಸಂಸ್ಥೆಗಳ ಪ್ರಗತಿಗ ಅವರು ದೇಣಿಗೆ ನೀಡಿದ್ದಾರೆ. ಆರೋಗ್ಯ, ಧಾರ್ಮಿಕ,ಸಾಮಾಜಿಕ ಸಹಿತ ಎಲ್ಲ ಕ್ಷೇತ್ರಗಳಿಗೂ ನೆರವು ನೀಡಿ ದ್ದಾರೆ. ವಿದೇಶಗಳಲ್ಲೂ ಉದ್ಯಮ ವಿಸ್ತರಿಸಿರುವ ಕೀರ್ತಿ ಇವರದ್ದು.