ತುಮಕೂರು: ಮನುಷ್ಯನಿಗೆ ಆರೋಗ್ಯವೇ ಮಹಾಭಾಗ್ಯ. ಯೋಗಾಸನದಿಂದ ನಮ್ಮ ಆರೋಗ್ಯಕಾಪಾಡಿಕೊಳ್ಳಬಹುದಾಗಿದೆ ಎಂದು ಜಿಲ್ಲಾ ಆಯುಷ್‌ಅಧಿಕಾರಿ ಡಾ.ಎಚ್.ಸಂಜೀವ್‌ಮೂರ್ತಿ ತಿಳಿಸಿದರು.
ಕೋವಿಡ್ ಹಿನ್ನೆಲೆ ಸರ್ಕಾರದ ನಿರ್ದೇಶನದಂತೆಕೋವಿಡ್ ನಿಯಮಾವಳಿ ಕಾಪಾಡಿಕೊಂಡು ಜಿಲ್ಲಾಡಳಿತ, ಜಿಪಂ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ತಾಲೂಕಿನ ಮಂಚಕಲ್‌ಕುಪ್ಪೆ ಗ್ರಾಮದ ಶನೇಶ್ವರ ಸ್ವಾಮಿ ದೇವಸ್ಥಾನದ ಸಮುದಾಯಭವನದಲ್ಲಿ ಅಂತಾರಾಷ್ಟ್ರೀಯ ಯೋಗ ದಿನದಪ್ರಯುಕ್ತ ಹಮ್ಮಿಕೊಂಡಿದ್ದ ಆನ್‌ಲೈನ್ ಯೋಗದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದಅವರು, ಜಿಲ್ಲೆಯಲ್ಲಿರುವ 6 ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಪ್ರತಿದಿನ ಯೋಗಾಭ್ಯಾಸನಡೆಯುತ್ತದೆ.ಅಲ್ಲದೆ, ಪ್ರತಿ ಕೋವಿಡ್ ಕೇರ್ ಸೆಂಟರ್‌ಗಳಲ್ಲಿಯೋಗ ತಜ್ಞರನ್ನು ನೇಮಿಸಿ ಕೋವಿಡ್ ಸೋಂಕಿತರಿಗೆಯೋಗಾಭ್ಯಾಸ ಮಾಡಿಸಲಾಗುತ್ತಿದೆ.
ಇದರಿಂದಸಾಕಷ್ಟು ಸೋಂಕಿತರಿಗೆ ಅವರಆರೋಗ್ಯ ದೃಷ್ಟಿಯಿಂದ ಅನುಕೂಲವಾಗಿದೆ. ಇದಲ್ಲದೆತಮ್ಮಮನೆಗಳಲ್ಲಿಯೂ ಸೋಂಕಿತರು ಯೋಗಾಭ್ಯಾಸಮಾಡುತ್ತಿದ್ದಾರೆಎಂದರು.
ಜಿಲ್ಲೆಯಲ್ಲಿ 20 ರಿಂದ 25 ಕೋವಿಡ್ ಕೇರ್‌ಸೆಂಟರ್‌ಗಳಿದ್ದು, ಪ್ರತಿ ಸೆಂಟರ್‌ನಲ್ಲಿಯೂ ಯೋಗತಜ್ಞರಿದ್ದು, ಸೋಂಕಿತರಿಗೆ ಯೋಗಾಭ್ಯಾಸ ಮತ್ತುಪ್ರಾಣಾಯಾಮ ಕಲಿಸಿಕೊಡಲಾಗುತ್ತಿದೆ. ಇದರಿಂದಸೋಂಕಿತರಲ್ಲಿ ಧನಾತ್ಮಕ ಶಕ್ತಿ ಮತ್ತು ಉಸಿರಾಟದಸಮಸ್ಯೆ ಕಡಿಮೆಯಾಗಿದೆ ಎಂಬುದನ್ನು ಸೋಂಕಿತರೇತಮ್ಮ ಅಭಿಪ್ರಾಯದಲ್ಲಿ ವ್ಯಕ್ತಪಡಿಸಿದ್ದಾರೆ. ಈಯೋಗಾಭ್ಯಾಸವನ್ನು ಸೋಂಕಿತರು ಸೇರಿದಂತೆಸಾರ್ವಜನಿಕರೂ ಸಹ ತಮ್ಮ ದಿನಚರಿಯಲ್ಲಿ ರೂಢಿಸಿಕೊಳ್ಳಬೇಕು.
ಜಿಲ್ಲೆಯಲ್ಲಿ ಇನ್ನಷ್ಟು ಆರೋಗ್ಯ ಮತ್ತುಕ್ಷೇಮ ಕೇಂದ್ರಗಳನ್ನು ತೆರೆಯುವಂತೆ ಸರ್ಕಾರಕ್ಕೆಮನವಿ ಮಾಡಲಾಗಿದೆ ಎಂದು ಹೇಳಿದರು.ಆಯುಷ್ ಇಲಾಖೆ ಸಹಾಯಕ ಆಡಳಿತಾಧಿಕಾರಿಎಂ.ಕೆ. ಮೈಲಾರಯ್ಯ, ವೈದ್ಯಾಧಿಕಾರಿ ಡಾ.ಪಿ.ಎ.ಗುರುಪ್ರಸಾದ್, ಡಾ. ವಿ.ಎಂ.ಪ್ರಭಾಕರ್, ಡಾ. ಎಚ್.ಬಿ. ಭವ್ಯಾ, ಯೋಗಪಟು ಪಾಂಡುರಂಗಪ್ಪ, ಯೋಗತರಬೇತಿದಾರ ರಾಮಕೃಷ್ಣ, ಸಾರ್ವಜನಿಕರು ಇದ್ದರು.ಆನ್‌ಲೈನ್ ಜೂಮ್ ಆಪ್ ಮೂಲಕ ಜಿಪಂಸಿಇಒ ಡಾ. ವಿದ್ಯಾಕುಮಾರಿ, ಅಶ್ವಿನಿ ಆಯುರ್ವೇದಕಾಲೇಜು ವಿದ್ಯಾರ್ಥಿಗಳು, ಎನ್‌ಸಿಸಿ, ಗಂಗಾನಸಿಂìಗ್ ಹೋಂ, ಪದವೀಧರ ವೈದ್ಯರ ಸಂಘ,ಎಎಫ್ ಎಫ್, ಪತಂಜಲಿ ಯೋಗ ಕೇಂದ್ರ, ನೆಹರುಯುವ ಕೇಂದ್ರ, ಬ್ರಹ್ಮಕುಮಾರಿ ಸಮಾಜ, ವಿವಿಧಇಲಾಖೆ ಅಧಿಕಾರಿ, ಸಿಬ್ಬಂದಿ, ಸಂಘ-ಸಂಸ್ಥೆಗಳುಸೇರಿದಂತೆ 100 ಮಂದಿ ಮನೆಯಿಂದಲೇ ಯೋಗಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.