Advertisement

ಗ್ರಾಪಂ ಕಾರ್ಯದರ್ಶಿ ಮತ್ತು ಕಂಪ್ಯೂಟರ್ ಅಪರೇಟರ್ ಎಸಿಬಿ ಬಲೆಗೆ

04:36 PM Aug 23, 2021 | Team Udayavani |

ತುಮಕೂರು: ಕೊರಟಗೆರೆ   ತಾಲ್ಲೂಕಿನ ಕೋಳಾಲ ಹೋಬಳಿಯ ಕೋಳಾಲ ಗ್ರಾಪಂನಲ್ಲಿ, ಖಾತೆ ಮಾಡಿ ಕೊಡಲು ವ್ಯಕ್ತಿಯೊರ್ವರಿಂದ 3500 ರೂ. ಲಂಚ ಪಡೆಯುವಾಗ ಗ್ರಾಪಂ ಕಾರ್ಯದರ್ಶಿ ತಿಮ್ಮಯ್ಯ ಮತ್ತು ಕಂಪ್ಯೂಟರ್‌ ಅಪರೇಟರ್ ಲಕ್ಕಣ್ಣ  ಇಬ್ಬರೂ ರೆಡ್ ಹ್ಯಾಂಡ್ ಆಗಿ ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳ ಬಲೆಗೆ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ‌.

Advertisement

ಇದನ್ನೂ ಓದಿ:ಲಂಚ ಪಡೆದಿದ್ದರೆ ರಾಜಕೀಯ ನಿವೃತ್ತಿ; ಹಾಲಪ್ಪ ಹರತಾಳು ಸವಾಲು

ಎಸಿಬಿ ಡಿವೈಎಸ್ಪಿ ಮಲ್ಲಿಕಾರ್ಜುನ್ ಚುಕ್ಕಿ ಹಾಗೂ ಇನ್ಸ್‌ಪೆಕ್ಟರ್ ಗಳಾದ ವಿಜಯಲಕ್ಷ್ಮಿ, ವಿರೇಂದ್ರ ಮತ್ತು ಸಿಬ್ಬಂದಿ ವರ್ಗ ಬೀಸಿದ ಬಲೆಗೆ ಸಿಕ್ಕಿಬಿದ್ದಿದ್ದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next