Advertisement

ಕಲ್ಪತರು ನಾಡಿನಲ್ಲಿ ಕಪ್ಪು ಶಿಲೀಂಧ್ರದ ಭೀತಿ!

06:36 PM May 22, 2021 | Team Udayavani |

ತುಮಕೂರು: ಕೊರೊನಾರ್ಭಟದ ನಡುವೆಯೇ ಬ್ಲ್ಯಾಕ್‌ ಫ‌ಂಗಸ್‌ಜಿಲ್ಲೆಯ ಜನರನ್ನು ಕಾಡುತ್ತಿದೆ. ಕೋವಿಡ್‌ ಬಾಧೆಯಿಂದ ತತ್ತರಿಸುತ್ತಿರುವ ಜಿಲ್ಲೆಗೆ ಬ್ಲ್ಯಾಕ್‌ ಫ‌ಂಗಸ್‌ನ ಕರಿನೆರಳು ಆವರಿಸಿದೆ.

Advertisement

ಜಿಲ್ಲೆಯಹತ್ತು ಜನರಲ್ಲಿ ಬ್ಲ್ಯಾಕ್‌ ಫ‌ಂಗಸ್‌ ಲಕ್ಷಣಗಳು ಕಂಡುಬಂದಿದ್ದು,ಕೋವಿಡ್‌ನಿಂದ ಗುಣಮುಖರಾಗಿ ಹೋಂ ಕ್ವಾರಂಟೈನ್‌ನಲ್ಲಿದ್ದ ಇಬ್ಬರು ಈ ಹೆಮ್ಮಾರಿಗೆ ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಕೊರೊನಾ ಸೋಂಕು ಜಿಲ್ಲೆಯಲ್ಲಿ ದಿನೇ ದಿನೆ ವ್ಯಾಪಿಸುತ್ತಿದೆ.ಇದುವರೆಗೂ ನಗರ ಪ್ರದೇಶದಲ್ಲಿ ರಣಕೇಕೆ ಹಾಕುತ್ತಿದ್ದ ಕೊರೊನಾಈಗ ಹಳ್ಳಿಹಳ್ಳಿಗೆ ಹೆಚ್ಚು ವ್ಯಾಪಿಸುತ್ತಲೇ ಇದೆ. ಹಳ್ಳಿಯಲ್ಲಿ ಕೊರೊನಾಕಟ್ಟಿ ಹಾಕಲು ಪ್ರಯತ್ನ ನಡೆಯುತ್ತಿರುವ ವೇಳೆಯಲ್ಲಿ ಜಿಲ್ಲೆಯಲ್ಲಿಕರಿಹೆಮ್ಮಾರಿಯಕಾಟ ಈಗ ಆರಂಭವಾಗಿದೆ.

ಜಿಲ್ಲೆಯಲ್ಲಿ ಮೊದಲ ಬಾರಿಗೆ ಕೊರೊನಾ ಸೋಂಕುಗೋಚರಗೊಂಡಿದ್ದ ಶಿರಾ ತಾಲೂಕಿನಲ್ಲಿಯೇ ಬ್ಲ್ಯಾಕ್‌ ಫ‌ಂಗಸ್‌ಕಂಡು ಬಂದಿದೆ. ಇಲ್ಲಿಯ ನಿವಾಸಿಯೊಬ್ಬರು ಮತ್ತು ಕುಣಿಗಲ್‌ತಾಲೂಕಿನಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದ್ದು, ಕುಣಿಗಲ್‌ ತಾಲೂಕು ಆರೋಗ್ಯ ಅಧಿಕಾರಿ ಆರೋಗ್ಯ ಸಚಿವರ ಸಭೆಯಲ್ಲಿಯೇ ತಾಲೂಕಿನಲ್ಲಿ ಒಬ್ಬರು ಬ್ಲ್ಯಾಕ್‌ ಫ‌ಂಗಸ್‌ಗೆ ಬಲಿಯಾಗಿದ್ದಾರೆ ಎಂದು ಹೇಳಿದ್ದಾರೆ.

ಆದರೆ, ಡಿಎಚ್‌ಒ ಜಿಲ್ಲೆಯಲ್ಲಿ ಯಾರೂಮೃತಪಟ್ಟಿಲ್ಲ ಎನ್ನುತ್ತಿದ್ದಾರೆ. ಆದರೆ, ಈ ಸೋಂಕಿಗೆ ಬಲಿಯಾಗಿರುವುದಂತು ಖಚಿತವಾಗಿದೆ ಎನ್ನಲಾಗಿದೆ.ಏನಿದು ಬ್ಲ್ಯಾಕ್‌ ಫ‌ಂಗಸ್‌(ಕಪ್ಪುಶಿಲೀಂಧ್ರ): ಕೊರೊನಾ ರೋಗಿಗಳು ಚಿಕಿತ್ಸೆ ಮುಗಿಸಿ ಹೊರಬಂದಾಗ ರೋಗ ನಿರೋಧಕಶಕ್ತಿ ಕಡಿಮೆಯಿರುತ್ತದೆ. ಅದರಲ್ಲೂ ಸ್ಟಿರಾಯ್ಡ ಬಳಸಿದವರಲ್ಲಿ ಮಧುಮೇಹದ ಜೊತೆಗೆದೇಹ ಇನ್ನಷ್ಟು ಬಳಲಿರುತ್ತದೆ.ಇಂಥ ಸಂದರ್ಭದಲ್ಲಿ ದೇಹಸಣ್ಣ ಸಣ್ಣ ಬಾಹ್ಯಾಕ್ರಮಣಕ್ಕೂತಲ್ಲಣಗೊಳ್ಳುತ್ತದೆ.

Advertisement

ಬ್ಲ್ಯಾಕ್‌ಫ‌ಂಗಸ್‌ ಕೂಡ ಇಂತಹದ್ದೇ ಒಂದುಸಮಸ್ಯೆ. ಈ ಕಪ್ಪು ಶಿಲೀಂಧ್ರ ಗಾಳಿ ಮತ್ತುಮಣ್ಣಿನಲ್ಲಿರುತ್ತವೆ. ಗಾಳಿಯಲ್ಲಿರುವ ಕಪ್ಪುಶಿಲೀಂಧ್ರ ಕಣಗಳು ಮೂಗಿಗೆ ಪ್ರವೇಶಿಸುತ್ತವೆ. ರೋಗನಿರೋಧಕ ಶಕ್ತಿ ಕಡಿಮೆಯಿರುವವರಲ್ಲಿ ಇದು ದೊಡ್ಡ ಸಮಸ್ಯೆಉಂಟು ಮಾಡು ತ್ತದೆ.

ಸಾಮಾನ್ಯ ಅಲರ್ಜಿಗೂ ತೊಂದರೆಗೆ ಒಳಗಾಗುವವರಲ್ಲಿ ಈ ಸಾಧ್ಯತೆ ಇನ್ನೂ ಹೆಚ್ಚು, ಶ್ವಾಸಕೋಶದ ಮೂಲಕಸಾಗುವ ಶಿಲೀಂಧ್ರ ಕಣ ಸೈನಸ್‌ ಮೂಲಕ ಕಣ್ಣುಗಳನ್ನು ತಲಪುತ್ತದೆ.ಮುಂದೆ ಅದು ಮೆದಳನ್ನೂ ಸೇರುವ ಅಪಾಯವಿದೆ. ಶಿಲೀಂಧ್ರದ ಪರಿಣಾಮ ವಿಪರೀತವಾದರೆ ಮೂಗು ಕತ್ತರಿಸಬೇಕಾದ, ಇಲ್ಲವೆ ಕಣ್ಣನ್ನೇ ತೆಗೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗುವ ಅಪಾಯವಾಗಿದೆ.

ಹಾಗಾಗಿ ಸೋಂಕಿನಿಂದ ಗುಣಮುಖರಾದವರು ಸೂಕ್ತಮುನ್ನೆಚ್ಚರಿಕೆ ವಹಿಸಬೇಕು. ರೋಗ ಲಕ್ಷಣಗಳು ಕಂಡುಬಂದಕೂಡಲೇ ತುರ್ತು ಚಿಕಿತ್ಸೆ ಪಡೆಯಬೇಕಿದೆ.

ಅನಿಯಂತ್ರಿತ ಮಧುಮೇಹಿಗಳಲ್ಲಿ ರೋಗ ಉಲ್ಬಣ: ಕೋವಿಡ್‌ಪಾಸಿಟಿವ್‌ ಆಗಿ ಆಸ್ಪತ್ರೆಯಿಂದ ಡಿಸಾcರ್ಜ್‌ ಆದ ಅನಿಯಂತ್ರಿತಮಧುಮೇಹಿಗಳಲ್ಲಿ ಈ ಬ್ಲ್ಯಾಕ್‌ ಫ‌ಂಗಸ್‌ ರೋಗ ಲಕ್ಷಣಗಳುಕಂಡುಬರುವ ಸಾಧ್ಯತೆಯಿದ್ದು, ರೋಗ ನಿರೋಧಕ ಶಕ್ತಿ ಕಡಿಮೆಯಿರುವವರಿಗೆ ಮಾರಣಾಂತಿಕವಾಗಿ ಪರಿಣಮಿಸುತ್ತದೆ. ಪ್ರಮುಖವಾಗಿ ಕಣ್ಣು ದಪ್ಪವಾಗುವುದು, ವಿಪರೀತಕಣ್ಣು ನೋವು, ಮೂಗಿನಿಂದ ರಕ್ತಸೋರುವಿಕೆ, ಈ ರೋಗ ಲಕ್ಷಣವಾಗಿದ್ದು, ಕೂಡಲೇ ಸಿಟಿಸ್ಕ್ಯಾನ್ ಮಾಡಿಸಿ ರೋಗ ಪತ್ತೆ ಮಾಡಬೇಕು. ಫ‌ಂಗಸ್‌ ಪತ್ತೆಯಾದ ಕೂಡಲೇ6 ವಾರಗಳ ಕಾಲ ಆಂಪೊಟೆರಿಸಿನ್‌-ಬಿ ಎಂಬ ಇಂಜೆಕ್ಸನ್‌ ಅನ್ನು ನಿಯಮಿತವಾಗಿ ಪಡೆಯಬೇಕು. ತೀರಾಉಲ್ಬಣವಾದರೆ ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ. ಕೋವಿಡ್‌ ಚಿಕಿತ್ಸೆಬಳಸುವ ಸ್ಟಿರಾಯಿಡ್‌ ಗುಣುಮುಖರಾದ ಬಳಿಕ ರೋಗ ನಿರೋಧಕ ಶಕ್ತಿಕಡಿಮೆಯಿರುವವರಲ್ಲಿ ಬ್ಲಾಕ್‌ಫ‌ಂಗಸ್‌ಗೆ ಕಾರಣವಾಗುತ್ತಿದೆ.

ಹಾಗಾಗಿ ಸೋಂಕಿನಿಂದ ಗುಣಮುಖರಾದವರು ಅಲಕ್ಷ Â ವಹಿಸದೆರೋಗ ನಿರೋಧಕ ಶಕ್ತಿ ಹೆಚ್ಚುವ ಆಹಾರ ಸೇವನೆ ಜೊತೆಗೆ ಮಧುಮೇಹ ಇದ್ದವರು ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚದಂತೆ ನೋಡಿಕೊಳ್ಳಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಚಿ.ನಿ.ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next