ಜಿಲ್ಲೆಯ ಹುಳಿಯಾರು ಹೋಬಳಿಯ ಸಿಂಗಾಪುರ ಗ್ರಾಮ ಸೀಲ್ಡೌನ್ ಆದ ಹಿನ್ನೆಲೆ ಶ್ರೀದೇವಿವೈದ್ಯಕೀಯ ವಿದ್ಯಾಲಯ ಮತ್ತು ಸಂಶೋಧನಾಆಸ್ಪತ್ರೆಯ ವತಿಯಿಂದ ತುಮಕೂರು ಜಿಲ್ಲಾಡಳಿತಸಹಯೋಗದೊಂದಿಗೆ ವೈದ್ಯರ ತಂಡ ಮನೆ ಮನೆಭೇಟಿ ನೀಡಿ ಜನರ ಆರೋಗ್ಯ ತಪಾಸಣೆ ವೇಳೆಮಾತನಾಡಿದ ಅವರು, ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಹೋಬಳಿ ಸಿಂಗಾಪುರ ಗ್ರಾಮದಲ್ಲಿ ಕೊರೊನಾ ಸೋಂಕು ಹೆಚ್ಚಾದ ಹಿನ್ನೆಲೆ ಸೀಲ್ಡೌನ್ ಮಾಡಲಾಗಿದೆ.
ಈ ಕಾರಣ ಜನರು ಸರ್ಕಾರದ ಮಾರ್ಗಸೂಚಿಗಳಾದ ಸ್ಯಾನಿಟೈಸರ್, ಮಾಸ್ಕ್ಧರಿಸಬೇಕು. ಆರೋಗ್ಯದಲ್ಲಿ ಏರುಪೇರು ಕಂಡರೆತಕ್ಷಣ ಪರೀಕ್ಷೆಗೆ ಒಳಗಾಗಬೇಕು ಎಂದರು.
ನಮ್ಮ ಆಸ್ಪತ್ರೆಯ ವೈದ್ಯರ ತಂಡ ಸಿಂಗಾಪುರಗ್ರಾಮದ ಜನರ ಆರೋಗ್ಯ ತಪಾಸಣೆ ಮಾಡಿ,ಮನೆಯಲ್ಲಿಯೇ ಪ್ರತ್ಯೇಕವಾಗಿದ್ದ ಕೋವಿಡ್ರೋಗಿಗಳ ಜ್ವರ, ಕೆಮ್ಮು ಮತ್ತು ನೆಗಡಿ ಹಾಗೂಉಸಿರಾಟಕ್ಕೆ ಸಮಸ್ಯೆಯ ಬಗ್ಗೆ ವಿಚಾರಿಸಿ ದೇಹದಉಷ್ಣಾಂಶ, ರಕ್ತದಲ್ಲಿ ಆಮ್ಲಜನಕದ ಪರೀಕ್ಷೆ ಹಾಗೂಇತರೆ ಅವಶ್ಯಕವಿರುವ ಪರೀಕ್ಷೆಗಳನ್ನು ನಡೆಸಿ ಸೂಕ್ತಚಿಕಿತ್ಸೆಯನ್ನು ನೀಡಲಾಗಿದೆ ಎಂದರು.
ಕಾರ್ಯ ಶ್ಲಾಘನೀಯ: ಶ್ರೀದೇವಿ ವೈದ್ಯಕೀಯಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆಯ ವೈದ್ಯರ ತಂಡದಲ್ಲಿ ಡಾ.ಧೀರಜ್, ಡಾ.ಸುಪ್ರೀತ್, ಡಾ.ಮಂಜುಷಾ, ಡಾ.ಶ್ರೀನಿಧಿ, ಡಾ.ಶಾರದಾ, ಡಾ.ಪ್ರಭು, ಡಾ.ರಜತ, ಡಾ.ಶಶಿಧರ,ಡಾ.ಮೃನಳಿನಿ, ಡಾ.ರತಿಕಾ ಸೀಲ್ಡೌನ್ ಪ್ರದೇಶವಾದ ಸಿಂಗಾಪುರ ಗ್ರಾಮದಲ್ಲಿ ಆರೋಗ್ಯ ತಪಾಸಣೆಜೊತೆಗೆ ಗಂಟಲು ದ್ರವ ಪರೀಕ್ಷೆ ಹಾಗೂ ಲಸಿಕಾಕಾರ್ಯಕ್ರಮದಲ್ಲಿ ಆರೋಗ್ಯ ಸಿಬ್ಬಂದಿ ಜೊತೆಕೈಗೂಡಿಸಿ ತಮ್ಮನ್ನೂ ತೊಡಗಿಸಿಕೊಂಡಿರುವುದುನಿಜಕ್ಕೂ ಶ್ಲಾಘನೀಯ ಎಂದರು.
ಲಸಿಕೆ ಪಡೆಯಿರಿ: ಶ್ರೀದೇವಿ ವೈದ್ಯಕೀಯ ವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ಪಿ.ಎಂ.ರವೀಶ್ಮಾತನಾಡಿ, ಸಿಂಗಾಪುರ ಗ್ರಾಮದಲ್ಲಿ ಕೋವಿಡ್ರೋಗದಿಂದ ಬಳಲಿ, ಆರೋಗ್ಯ ಕೇಂದ್ರಗಳಿಂದಆರೈಕೆ ಪಡೆದು ವಾಪಸಾದ ಜನರು ಕನಿಷ r ಒಂದುವಾರವಾದರೂ ಮನೆಯಲ್ಲಿಯೇ ಪ್ರತ್ಯೇಕವಾಗಿರುವುದು ಅವಶ್ಯಕ. ಇದರಿಂದ ಇತರರಿಗೆ ರೋಗವು ಹರಡುವುದಿಲ್ಲ. ಉಳಿದ ಜನರು ಕೋವಿಡ್ ರೋಗ ಬರದಂತೆ ಅವಶ್ಯಕವಾಗಿ ಲಸಿಕೆ ಪಡೆಯಬೇಕು ಎಂದರು.
3 ತಿಂಗಳಿಂದ ವೈದ್ಯರ ನಡೆ ಹಳ್ಳಿ ಕಡೆ ಶೀರ್ಷಿಕೆಯಲ್ಲಿಚಿಕ್ಕನಾಯಕ್ಕನಹಳ್ಳಿ, ಶಿರಾ ತಾಲೂ ಕುಗಳಲ್ಲಿ ವೈದ್ಯಕೀಯ ತಂಡ ಮನೆ ಮನೆ ಭೇಟಿ ನೀಡಿ ಆರೋಗ್ಯತಪಾಸಣೆ, ಕೋವಿಡ್ ನಿಯಂತ್ರಣದ ಜಾಗೃತಿಮೂಡಿಸುವುದರ ಜೊತೆಗೆ ಗಂಟಲು ದ್ರವ ಪರೀಕ್ಷೆಹಾಗೂ ಲಸಿಕಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ವೈದ್ಯರ ತಂಡದ ಶ್ರಮವು ಕೋವಿಡ್ನ ತಡೆಯುವಲ್ಲಿ ಉಪಯುಕ್ತವಾಗಲಿದೆ ಎಂದು ವೈದ್ಯಕೀಯ ನಿರ್ದೇಶಕರಾದ ಡಾ. ರಮಣ್ ಆರ್ ಹುಲಿನಾಯ್ಕರ್ ಅಭಿಪ್ರಾಯ ವ್ಯಕ್ತಪಡಿಸಿದರು.
Advertisement