Advertisement

ಸಂಘದ ಲಾಭಾಂಶ ಸದ್ಬಳಕೆ ಮಾಡಿಕೊಳ್ಳಿ

11:10 PM Jul 09, 2021 | Team Udayavani |

ತಿಪಟೂರು: ಶ್ರೀ ಕ್ಷೇತ್ರ ಧರ್ಮಸ್ಥಳಗ್ರಾಮಾಭಿವೃದ್ಧಿ ಯೋಜನೆ ಗ್ರಾಮೀಣರಿಗೆಅನುಕೂಲ ಆಗುವಂತಹ ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಮಹಿಳೆಯರು, ರೈತರು ಇದರ ಸದುಪಯೋಗಪಡಿಸಿಕೊಂಡು ಆರ್ಥಿಕಸದೃಢರಾಗಬೇಕು ಎಂದು ಧರ್ಮಸ್ಥಳಗ್ರಾಮೀಣಾಭಿವೃದ್ಧಿ ಯೋಜನೆ ಜಿಲ್ಲಾನಿರ್ದೇಶಕಿ ದಯಾಶೀಲಾ ತಿಳಿಸಿದರು.

Advertisement

ನಗರದ ಕೋಟೆಯ ಸಾರ್ವಜನಿಕಗ್ರಂಥಾಲಯ ಭವನದಲ್ಲಿ ಧರ್ಮಸ್ಥಳಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದಕಸಬಾ ವಲಯದ ಸ್ವ-ಸಹಾಯ ಸಂಘಗಳಲಾಭಾಂಶ ವಿತರಣೆ ಕಾರ್ಯಕ್ರಮದಲ್ಲಿಮಾತನಾಡಿದ ಅವರು, ಕೋವಿಡ್‌ಸಂದರ್ಭದಲ್ಲಿ ಸಂಘದ ಸದಸ್ಯರುಸಂಕಷ್ಟದಲ್ಲಿ ಇರುವುದನ್ನು ಮನಗಂಡಪೂಜ್ಯರು ಸಂಘಗಳ ಲಾಂಭಾಂಶವನ್ನುಸಂಘಗಳಿಗೆ ಮಂಜೂರು ಮಾಡಿದ್ದಾರೆ.

ಈಮೊತ್ತವನ್ನು ಪಡೆದ ಸದಸ್ಯರು ಸರಿಯಾಗಿಸದ್ಬಳಕೆ ಮಾಡಿಕೊಳ್ಳಬೇಕು ಎಂದರು.ನಗರಸಭಾ ಮಾಜಿ ಸದಸ್ಯ ತರಕಾರಿಗಂಗಾಧರ್‌ ಮಾತನಾಡಿ, ಧರ್ಮಸ್ಥಳಯೋಜನೆ ಎಲ್ಲ ಸಮುದಾಯಗಳಿಗೆಆರ್ಥಿಕ ನೆರವನ್ನು ನೀಡಿ ಸಮಾಜದಸ್ವಾಸ್ಥ್ಯವನ್ನು ಕಾಪಾಡುತ್ತಿದೆ.ವಯೋವೃದ್ದರಿಗೆ, ನಿರ್ಗತಿಕರಿಗೆ ಮಾಸಾಶನನೀಡುತ್ತಿರುವ ಕಾರ್ಯ ಶ್ಲಾಘನೀಯ.ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿ ಉನ್ನತವ್ಯಾಸಂಗಕ್ಕೆ ಅನುಕೂಲ ಮಾಡುತ್ತಿದೆ.

ಸಂಘದ ಮಹಿಳಾ ಸದಸ್ಯರಿಗೆ ಸಾಲ ಸೌಲಭ್ಯಒದಗಿಸುವ ಜೊತೆಗೆ ಅವರ ಸಾಮಾಜಿಕಸ್ಥಿತಿ ಸುಧಾರಿಸಲು ಸ್ವಯಂ ಉದ್ಯೋಗದಮೂಲಕ ಆಸರೆ ಒದಗಿಸಿದೆ ಎಂದು ಶ್ಲಾಘಿಸಿದರು. ತಾಲೂಕು ಯೋಜನಾಧಿಕಾರಿಪ್ರವೀಣ್‌ಕುಮಾರ್‌ ಮಾತನಾಡಿ,ಗ್ರಾಮೀಣ ಭಾಗಗಳಲ್ಲಿ ಸಂಘಗಳನ್ನು ರಚಿಸಿಸಂಘಟನೆ ಮೂಲಕ ಆರ್ಥಿಕ ವ್ಯವಹಾರನಡೆಸಿ ವ್ಯವಹಾರ ಲಾಭಾಂಶವನ್ನು ಸಂಘದಸದಸ್ಯರಿಗೆ ವಿತರಿಸಲಾಗಿದೆ.

ಕಸಬಾವಲಯದ 300 ಸಂಘಗಳಿಗೆ 2 ಕೋಟಿಲಾಭಾಂಶ ವಿತರಿಸಲಾಗುವುದು ಎಂದರು.ಈ ಸಂದರ್ಭದಲ್ಲಿ ವಲಯ ಅಧ್ಯಕ್ಷೆಮಹದೇವಮ್ಮ, ಒಕ್ಕೂಟದ ಅಧ್ಯಕ್ಷೆಜಯಲಕ್ಷ್ಮೀ, ವಲಯದ ಮೇಲ್ವಿಚಾರಕಸಂತೋಷ್‌, ಸೇವಾಪ್ರತಿನಿಧಿಗಳು, ಸಂಘದಸದಸ್ಯರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next