Advertisement

ಕಾಮಗಾರಿ ಹೆಸರಲ್ಲಿ ಕೋಟಿ ಲೂಟಿ

04:27 PM Aug 15, 2019 | Team Udayavani |

ತುಮಕೂರು: ನಗರಕ್ಕೆ ಕುಡಿಯುವ ನೀರೊ ದಗಿಸುವ ಬುಗಡನಹಳ್ಳಿ ಕೆರೆಯ ಹೂಳೆತ್ತುವ ಕಾಮಗಾರಿ ಒಣಗಿದ್ದಾಗ ಮಾಡದೇ ನೀರು ಬರುತ್ತಿ ರುವಾಗ ನಡೆಸುತ್ತಿರುವುದು ಕೋಟ್ಯಾಂತರ ರೂ. ಲೂಟಿ ಮಾಡಲು ಅವಕಾಶ ನೀಡಿದಂತಾಗಿದೆ ಎಂದು ಮಾಜಿ ಸಚಿವ ಸೊಗಡು ಎಸ್‌. ಶಿವಣ್ಣ ಕಿಡಿಕಾರಿದರು. ನಗರದ ಸಮೀಪ ಇರುವ ಬುಗಡನಹಳ್ಳಿ ಕೆರೆಯಲ್ಲಿ ಹೂಳು ತೆಗೆಯುತ್ತಿರುವ ಕಾಮಗಾರಿ ಸ್ಥಳಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿದರು.

Advertisement

60. ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದ್ದು, ಅಭಿವೃದ್ಧಿ ಹೆಸರಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿರುವ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಟೆಂಡರ್‌ದಾರರ ವಿರುದ್ಧ ಜಿಲ್ಲೆಯ ನಾಗರಿ ಕರು ದಂಗೆ ಏಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕೆಲಸ ಪೂರ್ಣಗೊಳಿಸಿಲ್ಲ: ಅಮಾನಿಕೆರೆ ಮತ್ತು ಬುಗಡನಹಳ್ಳಿ ಕೆರೆ ಅಭಿವೃದ್ಧಿಪಡಿಸಲು ಸುಮಾರು 100 ಕೋಟಿ ರೂ. ಟೆಂಡರ್‌ ಕಾಮಗಾರಿ ನಡೆ ಯುತ್ತಿದೆ. ಬುಗಡನಹಳ್ಳಿ ಕೆರೆ ಹೂಳೆತ್ತಲು ಮಂಗಳೂರಿನ ಮಾಜಿ ಶಾಸಕರಿಗೆ ಟೆಂಡರ್‌ ಆಗಿದೆ. ಆದರೆ ಬೆಂಗಳೂರಿನ ವ್ಯಕ್ತಿ ನಿರ್ವಹಿಸುತ್ತಿದ್ದಾರೆ. ಇನ್ನೂ ಕೆಲಸ ಪೂರ್ಣಗೊಳಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜಕಾರಣಿಗಳು ಜಾತಿ ಹೆಸರಲ್ಲಿ ಅಭಿವೃದ್ಧಿ ಯಾದರೆ, ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಪಕ್ಷ, ಜಾತಿ ಮರೆತು ಕೆಲಸ ಮಾಡಿದಾಗ ಅಭಿವೃದ್ಧಿ ನಡೆಯುತ್ತವೆ. ಇದಕ್ಕೆ ನಾಗರಿಕರು ಒಗ್ಗಟ್ಟಾಗುವ ಅವಶ್ಯಕತೆ ಇದೆ. ಕಳೆದ ಎರಡು ತಿಂಗಳ ಹಿಂದೆಯೇ ಬುಗಡನಹಳ್ಳಿ ಕೆರೆಯಲ್ಲಿ ನೀರು ಖಾಲಿಯಾಗಿತ್ತು ಆಗ ಸಮಾರೋ ಪಾದಿಯಲ್ಲಿ ಅಭಿವೃದ್ಧಿ ಮಾಡಬೇಕಿತ್ತು. ಅದನ್ನು ಮಾಡದೆ ನೀರು ಬಿಟ್ಟಾಗ ಕೆಲಸ ಪ್ರಾರಂಭಿಸಿದ್ದಾರೆ. ಇದೆಲ್ಲಾ ಅವೈಜ್ಞಾನಿಕ ಕಾಮಗಾರಿ. ತಿಳಿವಳಿಕೆ ಇಲ್ಲದ ಅಧಿಕಾರಿಗಳು ಜನಪ್ರತಿನಿಧಿಗಳ ಮಾತಿಗೆ ಮರಳಾಗುತ್ತಿದ್ದಾರೆ ಎಂದು ಆರೋಪಿಸಿದರು.

ದುಡ್ಡು ತಿನ್ನಲು ಕಾಮಗಾರಿ: ಬುಗಡನಹಳ್ಳಿ ಕೆರೆಯಲ್ಲಿ 66 ಕೋಟಿ ರೂ. ಕಾಮಗಾರಿ ನಡೆ ಯುತ್ತಿದೆ. 3.40 ಲಕ್ಷ ಕ್ಯುಬಿಕ್‌ ಮೀಟರ್‌ ಹೂಳು ತೆಗೆಯಬೇಕಿದೆ. ಕೇವಲ 70 ಸಾವಿರ ಮೀಟರ್‌ ಅಂದರೆ ಶೇ. 20 ಹೂಳು ತೆಗೆಯಲಾಗಿದೆ. ಇನ್ನೂ 2 ಲಕ್ಷ ಕ್ಯುಬಿಕ್‌ ಮೀಟರ್‌ ಹೂಳು ತೆಗೆಯುವುದು ಬಾಕಿ ಇದೆ. ದುಡ್ಡು ತಿನ್ನಲು ಕಾಮಗಾರಿ ಆರಂಭಿಸಿದ್ದಾರೆ ಎಂದು ದೂರಿದರು.

Advertisement

ಬಿಜೆಪಿ ಮುಖಂಡರಾದ ಎಂ.ಬಿ. ನಂದೀಶ್‌, ಕೆ.ಪಿ. ಮಹೇಶ್‌, ಕೆ.ಆರ್‌. ಸದಾಶಿವಯ್ಯ, ರಂಗಾನಾಯ್ಕ, ಆಟೋ ನವೀನ್‌, ಬನಶಂಕರಿ ಬಾಬು ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next