ತುಮಕೂರು: ಜಿಲ್ಲೆಯ ಕುಣಿಗಲ್ ಸಮೀಪ ಬ್ಯಾಲಕೆರೆ ಬಳಿ ಭೀಕರವಾದ ಅಫಘಾತ ಸಂಭವಿಸಿದ್ದು ಒಂದು ವರ್ಷದ ಮಗು ಸೇರಿದಂತೆ ಸುಮಾರು 13 ಜನ ಮೃತಪಟ್ಟಿದ್ದಾರೆ. ವೇಗವಾಗಿ ಬಂದ ಕಾರು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಪಲ್ಟಿಯಾದ ಕಾರಿಗೆ ಎದುರಿನಿಂದ ವೇಗವಾಗಿ ಬಂದ ಮತ್ತೊಂದು ಕಾರು ಡಿಕ್ಕಿಯಾಗಿದೆ. ಪರಿಣಾಮ ಎರಡೂ ಕಾರುಗಳಲ್ಲಿದ್ದ 13 ಮಂದಿ ದುರಂತ ಸಾವನ್ನಪ್ಪಿದ್ದಾರೆ.
ಇಂದು ಮುಂಜಾನೆ 3 ಗಂಟೆ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಹೋಗುತ್ತಿದ್ದ ಬ್ರಿಝಾ ಕಾರು ಹಾಗೂ ಧರ್ಮಸ್ಥಳದಿಂದ ತಮಿಳುನಾಡಿಗೆ ಹಿಂದಿರುಗುತ್ತಿದ್ದ ಟವೇರಾ ಕಾರು ನಡುವೆ ಅಪಘಾತ ಸಂಭವಿಸಿದೆ. ಬ್ರಿಝಾ ಕಾರಿನಲ್ಲಿದ್ದವರು ಬೆಂಗಳೂರಿನ ದೊಡ್ಡಾಲದ ಮರದ ಬಳಿಯ ರಾಮಹಳ್ಳಿಯವರಾಗಿದ್ದು, ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಟವೇರಾದಲ್ಲಿರುವರು ತಮಿಳುನಾಡಿನ ಹೊಸೂರು ಮೂಲದವರಾಗಿದ್ದು, ಟವೇರಾದಲ್ಲಿ 13 ಜನರಲ್ಲಿ 10 ಜನ ಸ್ಥಳದಲ್ಲೇ ಸಾವಿಗೀಡಾಗಿ, 3 ಜನರಿಗೆ ಗಂಭೀರ ಗಾಯಗಳಾಗಿವೆ.
ಟವೇರಾದಲ್ಲಿ ಮೃತಪಟ್ಟವರು; ಮಂಜುನಾಥ್ (35)
, ತನುಜ (25) ಒಂದು ವರ್ಷದ ಹೆಣ್ಣು ಮಗು
, ಗೌರಮ್ಮ (60)
, ರತ್ನಮ್ಮ (52)
, ಸೌಂದರರಾಜ್ (48)
, ರಾಜೇಂದ್ರ 27)
, ಸರಳ (32)
, ಪ್ರಶನ್ಯಾ (14)
ಕಾರಿನಲ್ಲಿ ಮೃತಪಟ್ಟವರು: ಲಕ್ಷ್ಮಿ ಕಾಂತ್ (24)
, ಸಂದೀಪ (36)
, ಮಧು (28)
, ಮಾಲಾಶ್ರೀ (4)
ಗಾಯಗೊಡ ಟವೇರಾ ಪ್ರಯಾಣಿಕರು, ಶ್ವೇತಾ (32)
, ಹರ್ಪಿತಾ (12)
, ಗಂಗೋತ್ರಿ (14)
ಈ ಮೂರು ಮಂದಿಯಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಅವರನ್ನು ಬೆಂಗಳೂರಿನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಅಮೃತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.