ಚೆನ್ನೈ: 2023ರಲ್ಲಿ ಸಿನಿಮಾದಲ್ಲೂ ಕಾಣಿಸಿಕೊಳ್ಳದ ಕಮಲ್ ಹಾಸನ್ ಈ ವರ್ಷ ಬಹು ನಿರೀಕ್ಷಿತ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಮುಂದಿನ ಸಿನಿಮಾಗಳ ಬಗ್ಗೆ ಹೆಚ್ಚಿನ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.
ʼಇಂಡಿಯನ್ -2ʼ ಹಾಗೂ ʼಥಗ್ ಲೈಫ್ʼ ಸಿನಿಮಾದಲ್ಲಿ ಕಮಲ್ ಹಾಸನ್ ಕಮಾಲ್ ಮಾಡಲಿದ್ದಾರೆ ಎನ್ನುವ ಮಾತುಗಳು ಅಭಿಮಾನಿಗಳ ವಲಯದಲ್ಲಿ ಕೇಳಿ ಬರುತ್ತಿದೆ.
36 ವರ್ಷದ ಬಳಿಕ ಕಮಲ್ ಹಾಸನ್ – ಮಣಿರತ್ನಂ ಜೊತೆಯಾಗುತ್ತಿದ್ದಾರೆ. ಈ ಸಿನಿಮಾಕ್ಕೆ ʼಥಗ್ ಲೈಫ್ʼ ಎನ್ನುವ ಟೈಟಲ್ ಇಡಲಾಗಿದೆ. ಫಸ್ಟ್ ಲುಕ್ ಟೀಸರ್ ನಿಂದ ಸದ್ದು ಮಾಡಿರುವ ಸಿನಿಮಾದ ಬಗ್ಗೆ ಮತ್ತೊಂದು ಅಪ್ಡೇಟ್ ಹೊರಬಿದ್ದಿದೆ. ಇಬ್ಬರು ಸ್ಟಾರ್ ನಟರು ಸಿನಿಮಾ ತಂಡಕ್ಕೆ ಎಂಟ್ರಿ ಆಗಿದ್ದಾರೆ.
ʼಥಗ್ ಲೈಫ್ʼ ನಲ್ಲಿ ತ್ರಿಶಾ ಕೃಷ್ಣನ್, ಜಯಂ ರವಿ ಮತ್ತು ದುಲ್ಕರ್ ಸಲ್ಮಾನ್ ಇರುವುದನ್ನು ಚಿತ್ರತಂಡ ಈಗಾಗಲೇ ರಿವೀಲ್ ಮಾಡಿದೆ. ಇದೀಗ ಜೋಜು ಜಾರ್ಜ್ ಮತ್ತು ಗೌತಮ್ ಕಾರ್ತಿಕ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಚಿತ್ರತಂಡ ಹೇಳಿದೆ.
ಮಣಿರತ್ನಂ – ಕಮಲ್ ಹಾಸನ್ ʼನಾಯಕನ್ʼ(1987) ಬಳಿಕ ಎರಡನೇ ಬಾರಿ ʼಥಗ್ ಲೈಫ್ʼ ಮೂಲಕ ಜೊತೆಯಾಗುತ್ತಿದ್ದಾರೆ.