Advertisement

ತನಿಕೋಡಿ ಗೇಟ್‌ ಮೂಲಕ ಎಸ್‌.ಕೆ. ಬಾರ್ಡರ್‌; ಭಾರೀ ವಾಹನಗಳ ಸಂಚಾರ ನಿಷೇಧ: ಡಿ.ಸಿ

12:32 AM Jul 24, 2024 | Team Udayavani |

ಉಡುಪಿ: ರಾ.ಹೆ. 169ರ ಮಾಳದಿಂದ ತನಿಕೋಡಿ ಗೇಟ್‌ ಮೂಲಕ ಎಸ್‌.ಕೆ. ಬಾರ್ಡರ್‌ವರೆಗೆ ಸುಮಾರು 30 ಕಿ.ಮೀ. ವ್ಯಾಪ್ತಿಯಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಅವರು ಆದೇಶಿಸಿದ್ದಾರೆ.

Advertisement

ಈ ಮಾರ್ಗದ ಕೊರ್ಕನಹಳ್ಳ, ಗುಲ್ಗುಂಜಿ ಮನೆ ಸಮೀಪದ ಸೇತುವೆ ಶಿಥಿಲಾವಸ್ಥೆಯಲ್ಲಿ ಇರುವುದರಿಂದ ಘನ ವಾಹನ ಸಂಚಾರ ನಿಷೇಧಿಸಿ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ಹೊರಡಿಸಿರುವ ಆದೇಶವನ್ನು ಅನುಷ್ಠಾನಗೊಳಿಸಿ ಈ ರಸ್ತೆಯಲ್ಲಿ ಉಡುಪಿ ಜಿಲ್ಲೆಯಿಂದ ಬರುವ ವಾಹನಗಳು ಸಹ ಸಂಚಾರ ಮಾಡುವುದರಿಂದ ತನಿಕೋಡ್‌ ಗೇಟ್‌ನಿಂದ ಎಸ್‌.ಕೆ. ಬಾರ್ಡರ್‌ವರೆಗೆ ಅಧಿಕ ಭಾರದ ಸರಕು ಸಾಗಣಿಕೆ ವಾಹನಗಳ ಸಂಚಾರವನ್ನು ನಿಷೇಧಿಸಿ ಆದೇಶಿಸಲಾಗಿದೆ.

ಬದಲಿ ಮಾರ್ಗದ ವಿವರ

ಚಿಕ್ಕಮಗಳೂರಿನಿಂದ ಬರುವ ಭಾರೀ ವಾಹನಗಳು ಬಾಳೆ ಹೊನ್ನೂರು- ಮಾಗುಂಡಿ- ಕಳಸ- ಕುದುರೆಮುಖ-ಎಸ್‌.ಕೆ. ಬಾರ್ಡರ್‌ ಮಾರ್ಗವಾಗಿ ಹಾಗೂ ನರಸಿಂಹರಾಜಪುರ ಕಡೆಯಿಂದ ಬರುವ ಭಾರಿ ವಾಹನಗಳು ಕೊಪ್ಪ-ಜಯಪುರ- ಬಾಳೆಹೊಳೆ-ಕಳಸ-ಕುದುರೆಮುಖ-ಎಸ್‌.ಕೆ.ಬಾರ್ಡರ್‌ ಮಾರ್ಗವಾಗಿ ಸಂಚರಿಸುವಂತೆ ಡಿಸಿ ಕಚೇರಿ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next