Advertisement

ಗಂಟಲು-ಮೂಗಿನ ದ್ರವ ಮಾದರಿ ಸಂಗ್ರಹ

07:10 AM May 29, 2020 | Suhan S |

ನಾರಾಯಣಪುರ: ಮಹಾರಾಷ್ಟ್ರದಿಂದ ಮರಳಿ ಬಂದು ಇಲ್ಲಿನ ಬಿಸಿಎಂ ಹಾಸ್ಟೆಲ್‌, ಪದವಿ ಪೂರ್ವ ಕಾಲೇಜು, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಸಾಂಸ್ಥಿಕ ಕ್ವಾರಂಟೈನ್‌ ಕೇಂದ್ರಗಳಲ್ಲಿ ವಾಸ್ತವ್ಯ ಹೂಡಿದ್ದ 269 ಜನ ವಲಸೆ ಕಾರ್ಮಿಕರ ಗಂಟಲು ಹಾಗೂ ಮೂಗಿನ ದ್ರವದ ಮಾದರಿಯನ್ನು ಗುರುವಾರ ಸಂಜೆ ಆರೋಗ್ಯ ಇಲಾಖೆ ಸಿಬ್ಬಂದಿ ಸಂಗ್ರಹಿಸಿದರು.

Advertisement

ಇಲ್ಲಿನ ಬಿಸಿಎಂ ಹಾಸ್ಟೆಲ್‌ 82, ಪದವಿಪೂರ್ವ ಕಾಲೇಜಿನ 127 ಮತ್ತು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿನ 60 ಜನ ವಾಸ್ತವ್ಯ ಹೂಡಿದ್ದು, ಕ್ವಾರಂಟೈನ್‌ನಲ್ಲಿನ ಎಲ್ಲಾ ಮಹಿಳೆಯರು, ಪುರುಷರು, ಮಕ್ಕಳ ಎಸ್‌. ಎರ್‌.ಎಫ್‌ ಐಡಿಯನ್ನು ತಯಾರಿಸಿ, ಆರೋಗ್ಯ ಇಲಾಖೆಯ ಮಾರ್ಗಸೂಚಿಯಂತೆ ಪ್ರತಿಯೊಬ್ಬರ ಗಂಟಲು ಹಾಗೂ ಮೂಗಿನ ದ್ರವದ ಮಾದರಿ ಸಂಗ್ರಹಿಸಲಾಗಿದೆ. ಎಲ್ಲಾ ಮಾದರಿಗಳನ್ನು ಬೆಂಗಳೂರಿನ ಕೊರೊನಾ ಪರೀಕ್ಷಾ ಲ್ಯಾಬ್‌ಗ ಕಳುಹಿಸಿಕೊಡಲಾಗುವುದು. ಎರಡು, ಮೂರು ದಿನಗಳಲ್ಲಿ ವರದಿ ಬರುತ್ತದೆ ಎಂದು ನೇತೃತ್ವ ವಹಿಸಿದ್ದ ಡಾ.ಅಂಬೋರೆ, ಡಾ. ಹರ್ಷವರ್ಧನ ಪತ್ರಿಕೆಗೆ ತಿಳಿಸಿದರು.

ಪಿಡಿಒ ಶರಣಬಸವ ಬಿರಾದಾರ, ಗ್ರಾಪಂ ಅಧ್ಯಕ್ಷ  ಧೀರಪ್ಪ, ಆರೋಗ್ಯ ಇಲಾಖೆಯ ಆನಂದ ಮಠ, ರಾಜಮಹ್ಮದ್‌, ರಾಮಚಂದ್ರ, ಗ್ರಾಪಂ ಕಾರ್ಯದರ್ಶಿ ಸಂತೋಷ, ಹುಸೇನ್‌ ಸಾಬ್‌ ಸೇರಿದಂತೆ ಗ್ರಾಪಂ, ಕಂದಾಯ, ಆರೋಗ್ಯ, ಶಿಕ್ಷಣ, ಪೊಲೀಸ್‌, ಹಾಸ್ಟೆಲ್‌ ಸಿಬ್ಬಂದಿ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next