ತ್ರಿಶೂರ್: ಮೊಬೈಲ್ ಗೇಮ್ ಆಡುತ್ತಿರುವಾಗ ಮೊಬೈಲ್ ಸ್ಫೋಟಗೊಂಡು ಬಾಲಕಿಯೊಬ್ಬಳು ಮೃತಪಟ್ಟಿರುವ ದುರಂತ ಘಟನೆ ತ್ರಿಶೂರ್ ನ ತಿರುವಿಲ್ವಾಮಲ ನಡೆದಿರುವುದು ವರದಿಯಾಗಿದೆ.
ಪಟ್ಟಿಪರಂಬುವಿನ ಆದಿತ್ಯಶ್ರೀ (8) ಮೃತ ಬಾಲಕಿ.
ಸೋಮವಾರ (ಎ.24 ರಂದು) ರಾತ್ರಿ 10:30 ರ ವೇಳೆಗೆ ಬಾಲಕಿ ಆದಿತ್ಯಶ್ರೀ ಮೊಬೈಲ್ ನಲ್ಲಿ ಗೇಮ್ ಆಡುತ್ತಿರುವಾಗ ಮೊಬೈಲ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಮುಖ,ಕೈಗೆ ಗಂಭೀರ ಗಾಯಗೊಂಡ ಪರಿಣಾಮ ಮೃತಪಟ್ಟಿದ್ದಾಳೆ.
ಮೊಬೈಲ್ ನಲ್ಲಿ ಗೇಮ್ ಹಾಗೂ ವಿಡಿಯೋವನ್ನು ಹೆಚ್ಚಿನ ಸಮಯದಿಂದ ನೋಡುತ್ತಿದ್ದ ಪರಿಣಾಮ ಮೊಬೈಲ್ ನ ಬ್ಯಾಟರಿ ಬಿಸಿಯಾಗಿದೆ ಇದರಿಂದ ಮೊಬೈಲ್ ಸ್ಫೋಟಿಸಿರಬಹುದು ಎಂದು ಪೊಲೀಸರು ಹೇಳಿದ್ದಾರೆ.
ಮೂರು ವರ್ಷದ ಹಿಂದೆ ಮೊಬೈಲ್ ಫೋನನ್ನು ಖರೀದಿಸಲಾಗಿತ್ತು. ಕಳೆದ ವರ್ಷವಷ್ಟೇ ಮೊಬೈಲ್ ಗೆ ಹೊಸ ಬ್ಯಾಟರಿಯನ್ನು ಹಾಕಲಾಗಿತ್ತು. ಘಟನೆ ನಡೆಯುವಾಗ ಆದಿತ್ಯಶ್ರೀ ಅಜ್ಜಿಯೊಂದಿಗೆ ಇದ್ದರು. ಅಜ್ಜಿ ಅಡುಗೆ ಕೋಣೆಗೆ ಹೋಗುವಾಗ ಈ ಘಟನೆ ನಡೆದಿದೆ ಎಂದು ತಿಳಿದು ವರದಿ ತಿಳಿಸಿದೆ.
ಬಾಲಕಿ ಆದಿತ್ಯಶ್ರೀ ಮೂರನೇ ತರಗತಿಯಲ್ಲಿ ಓದುತ್ತಿದ್ದಳು. ಮೊಬೈಲ್ ಸ್ಫೋಟಕ್ಕೆ ನಿಖರವಾದ ಕಾರಣ ಏನೆಂದು ಫಾರೆನಿಕ್ಸ್ ವರದಿ ಬಳಿಕವಷ್ಟೇ ತಿಳಿದು ಬರಲಿದೆ ಎಂದು ಪೊಲೀಸರು ಹೇಳಿದ್ದಾರೆ.