Advertisement

ತ್ರಾಸಿ-ಮರವಂತೆ ಕಡಲ ತೀರದ ಗೂಡಂಗಡಿಗಳ ತೆರವಿಗೆ ಸೂಚನೆ

06:45 AM Aug 07, 2017 | Team Udayavani |

ಮರವಂತೆ (ಉಪ್ಪುಂದ): ದಿನನಿತ್ಯ ನಡೆಸುವ ವ್ಯಾಪಾರದಲ್ಲಿ ಸಿಗುವ ಲಾಭಾಂಶದಲ್ಲಿ ತಮ್ಮ ಸಂಸಾರ ನಡೆಸುತ್ತಿರುವವರ ಜೀವನದಲ್ಲಿ ಸುನಾಮಿಯೇ ಬಂದು ಅಪ್ಪಳಿಸಿದಂತ ಅನುಭವ. ದಿನಕಳೆದರೆ ಬದುಕೆ ಬೀದಿಗೆ ಬರುತ್ತಿದೆಯೋ ಎಂಬ ಆತಂಕ ಇದು ಮರವಂತೆ-ತ್ರಾಸಿ ಬೀಚ್‌ನಲ್ಲಿ ಗೂಡಂಗಡಿ ಗಳನ್ನಿಟ್ಟು  ಜೀವನ ಸಾಗುತ್ತಿರುವರ ದುಃಸ್ಥಿತಿ.

Advertisement

ಮರವಂತೆಯ ಸೊಬಗನ್ನು ಸವಿಯಲು ಬರುವ ಪ್ರವಾಸಿಗರಿಗೆ ತಿಂಡಿ-ತಿನಿಸು, ತಂಪು ಪಾನಿಯಗಳನ್ನು ಕೊಂಡುಕೊಳ್ಳಲು ಸಹಾಯಕ ವಾಗಿದ್ದ ಗೂಡಂಗಡಿಗಳನ್ನು ತೆರವುಗೊಳಿಸ ಬೇಕೆಂಬ ಸೂಚನೆಯಿಂದಾಗಿ ಇಲ್ಲಿನ ವ್ಯಾಪಾರಸ್ಥರು ಸಂಕಷ್ಟ ಎದುರಿಸುವಂತಾಗಿದೆ.

ರಾ.ಹೆ. ಕಾಮಗಾರಿ
ರಾ. ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಯಬೇಕಿರುವುದರಿಂದ ಸಮುದ್ರ ತೀರದ ಗೂಡಂಗಡಿಗಳು ಅಡ್ಡಿಯಾಗಿದ್ದು, ತೆರವುಗೊಳಿ ಸುವಂತೆ ತಿಳಿಸಿದರೂ ತೆರವು ಗೊಳಿಸಿಲ್ಲ ಆದ್ದರಿಂದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಐಆರ್‌ಬಿ ಕಂಪೆನಿ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಕುಂದಾಪುರ ತಹಶೀಲ್ದಾರ ಜಿ.ಎಂ. ಬೋರ್ಕರ್‌ ಸ್ಥಳಕ್ಕಾಗಮಿಸಿ ವ್ಯಾಪಾರಸ್ಥರಿಗೆ ತೆರವುಗೊಳಿಸಲು ಸೂಚನೆ ನೀಡಿರುತ್ತಾರೆ.

ಸಂಕಷ್ಟದಲ್ಲಿ ವ್ಯಾಪಾರಿಗಳು
ಹಲವಾರು ವರ್ಷಗಳಿಂದ ಕಡಲ ತೀರದಲ್ಲಿ ವ್ಯಾಪಾರವನ್ನೇ ನಂಬಿಕೊಂಡು ಜೀವನ ವನ್ನು ಕಟ್ಟಿಕೊಂಡಿರುವ ವ್ಯಾಪಾರಸ್ಥರು, ಅವರ ಕುಟುಂಬಗಳು ಅತಂತ್ರ ಸ್ಥಿತಿ ಎದುರಿ ಸುಂತಾಗಿದ್ದು, ಅಧಿಕಾರಿಗಳ ಸೂಚನೆ ಯಿಂದ ತೀವ್ರ ತಳಮಳಗೊಂಡಿದ್ದಾರೆ.

ನಿರುದ್ಯೋಗಿಗಳಾಗುವ ಆತಂಕ
ಸಣ್ಣ ಸಣ್ಣ ಗೂಡಂಗಡಿಯಾದರು ಸ್ವದೋಗ್ಯವಾಗಿ ಇದನ್ನೆ ಮಾಡಿಕೊಂಡು ಬಂದಿರುವ ಇಲ್ಲಿ 30ಕ್ಕೂ ಹೆಚ್ಚಿನ ಗೂಡಂಡಿಗಳ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೇ ತೆರವು ಮಾಡಲು ಮುಂದಾದಲ್ಲಿ ಅವರು ನಿರುದ್ಯೋಗಿಗಳಾಗಿ ತಮ್ಮ ಜೀವನ ನಿರ್ವಹಣೆಗೆ ಪರದಾಡುವಂತಾಗಬಹುದು.

Advertisement

ಶಾಸಕರ ಮೊರೆ
ಗೂಡಂಗಡಿಗಳನ್ನು ತೆರವುಗೊಳಿಸಬೇಕೆಂಬ ಸೂಚನೆಯು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಟ್ಟಂ ತಾಗಿದ್ದು, ಈ ಕುರಿತು ವ್ಯಾಪಾರಿಗಳು, ಶಾಸಕ, ರಾಜ್ಯ ರಸ್ತೆ ಸಾರಿಗೆ ನಿಗಮ ಅಧ್ಯಕ್ಷ  ಕೆ. ಗೋಪಾಲ ಪೂಜಾರಿ ಅವರ ನಿವಾಸಕ್ಕೆ ತೆರಳಿ ತಮ್ಮ ನೋವನ್ನು ಹೇಳಿಕೊಂಡಿದ್ದು, ವ್ಯಾಪಾರಸ್ಥರ ಅಹವಾಲು ಆಲಿಸಿದ ಶಾಸಕರು ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ನಿಧಾರ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಪರ್ಯಾಯ ವ್ಯವಸ್ಥೆ ಅತ್ಯಗತ್ಯ
ರಾ.ಹೆದ್ದಾರಿ ಕಾಮಗಾರಿಯಿಂದಾಗಿ ಅಂಗಡಿಗಳ ತೆರವುಗೊಳಿಸುವುದು  ಅನಿವಾರ್ಯತೆ ಇದ್ದರು ಸಹ ಸಂಬಂಧಪಟ್ಟ ಇಲಾಖೆಗಳು ವ್ಯಾಪಾರಸ್ಥರಿಗೆ ವ್ಯಾಪಾರ ನಡೆಸಲು ಸೂಕ್ತ ಪರ್ಯಾಯ ವ್ಯವಸ್ಥೆ ಒದಗಿಸಿದ ಅನಂತರ ಕಾಮಗಾರಿ ನಡೆಸಲು ಅನುಮಾಡಿಕೊಡಬಹುದು. ಇದರಿಂದ ಬಡಪಾಯಿ ವ್ಯಾಪಾರಸ್ಥರ ಹೊಟ್ಟೆ ಮೇಲೆ ಹೊಡೆಯುವುದನ್ನು ತಪ್ಪಿಸಿದಂತಾಗುತ್ತದೆ, ಅವರ ಕುಟುಂಬಗಳನ್ನು ಬೀದಿಗೆ ಬರುವುದನ್ನು ತಡೆಯಬಹುದಾಗಿದೆ. 

ಇಲ್ಲಿನ ವ್ಯಾಪಾರವೇ ನಂಬಿಕೊಂಡು ಜೀವನ ನಡೆಸುತ್ತಿರುವವರು ನಾವು, ಬದಲಿ ಅವಕಾಶ ಮಾಡಿಕೊಡದೆ ತೆರವುಗೊಳಿಸಿದರೆ ನಮ್ಮ ಊಟವನ್ನು ಕಸಿದುಕೊಂಡಂತಾಗುತ್ತದೆ. ಆದರಿಂದ ಬದಲಿ ಸ್ಥಳಾವಕಾಶ ಮಾಡಿಕೊಡಬೇಕು.
– ತ್ರಾಸಿ – ಮರವಂತೆ ಬೀಚ್‌ ಗೂಡಂಗಡಿ ವ್ಯಾಪಾರಸ್ಥರು
 
ಕಡಲ ತೀರದ ವ್ಯಾಪಾರಸ್ಥರಿಗೆ ಬದಲಿ ವ್ಯವಸ್ಥೆ ಮಾಡದೆ ತೆರವುಗೊಳಿಸಲು ಆಗುವುದಿಲ್ಲ ಅವರು ನೀರುದ್ಯೋಗಿಗಳಾಗುತ್ತಾರೆ. ಅವರನ್ನು ಬೀದಿಪಾಲು ಮಾಡಿದಂತಾಗುತ್ತದೆ, ಸೂಕ್ತ ಸ್ಥಳಾವಕಾಶ ಮಾಡದೆ ಅವರನ್ನು ಮುಟ್ಟಲು ಸಾಧ್ಯವಿಲ್ಲ ಅಲ್ಲಿಯವರೆಗೆ ಅವರು ಅಲ್ಲಿಯೇ ಇರುತ್ತಾರೆ. ಈ ಕುರಿತು ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿದ್ದೇನೆ.
– ಕೆ. ಗೋಪಾಲ ಪೂಜಾರಿ, ಶಾಸಕ ಮತ್ತು ರಾಜ್ಯ ರಸ್ತೆ ಸಾರಿಗೆ ನಿಗಮ ಅಧ್ಯಕ್ಷ

– ಕೃಷ್ಣ  ಬಿಜೂರು

Advertisement

Udayavani is now on Telegram. Click here to join our channel and stay updated with the latest news.

Next