Advertisement

ಅಮೆಜಾನ್ ಪ್ರೈಮ್‌ನಲ್ಲಿ ಥ್ರಿಲ್ಲರ್ “ಸ್ಟ್ರೈಕರ್’ರಿಲೀಸ್

07:26 AM Jul 06, 2020 | Lakshmi GovindaRaj |

“ಸ್ಟ್ರೈಕರ್ʼ‌ ಗರುಡಾದ್ರಿ ಫಿಲಮ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡು, ಪವನ್ ತ್ರಿವಿಕ್ರಮ್ ನಿರ್ದೇಶನ ಮಾಡಿದ್ದ ಚಿತ್ರ.  ಇದೀಗ ಅಮೆಜಾನ್ ಪ್ರೈಮ್‌ನಲ್ಲಿ ವಿಶ್ವಾದ್ಯಂತ ತೆರೆ ಕಂಡಿದ್ದು, ಕೋವಿಡ್‌ 19 ದಾಳಿಯಿಂದ ಮನೆಯಲ್ಲಿ ಕುಳಿತಿರುವವರಿಗೆ ಮನರಂಜನೆಯ ಸುಗ್ಗಿ! ಈಗಾಗಲೇ ಕನ್ನಡದ ಒಂದಷ್ಟು ಸಿನಿಮಾಗಳು ಅಮೆಜಾನ್ ಪ್ರೈಮ್ ಮೂಲಕ ಲಾಕ್‍ಡೌನ್ ಕಾಲವನ್ನು ಸಹನೀಯವಾಗಿಸಿವೆ.

Advertisement

ಚಿತ್ರದ ನಾಯಕ ಇದೇ ಮೊದಲ ಬಾರಿಗೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಹುಡುಗನ ಪಾತ್ರ ಮಾಡಿದ್ದು, ಇದೊಂದು ಸೈಕಲಾಜಿಕಲ್‌ ಸಸ್ಪೆನ್ಸ್‌, ಥ್ರಿಲ್ಲರ್‌ ಚಿತ್ರ. ಕನಸನ್ನೇ ನಿಜ ಎಂದುಕೊಳ್ಳುವ ನಾಯಕ, ಅವನ ಜೀವನದಲ್ಲಿ ಬರುವ ಹಲವು ತಿರುವುಗಳು, ಜೊತೆಗೊಂದು ಲವ್‌ಸ್ಟೋರಿ, ಅದರ ನಡುವೆಯೇ ನಡೆಯುವ ಕ್ರೈಮ್‌ ಘಟನೆ. ಒಂದು ಕಮರ್ಷಿಯಲ್‌ ಸಿನಿಮಾದಲ್ಲಿರುವ ಎಂಟರ್‌ಟೈನ್ಮೆಂಟ್‌ ಎಲಿಮೆಂಟ್ಸ್‌ ಎಲ್ಲವೂ ಸ್ಟ್ರೈಕರ್‌ನಲ್ಲಿದೆ.

ಅಲ್ಲದೇ  ನಾಯಕ ಪ್ರವೀಣ್‌ ತೇಜ್‌ಗೆ ನಾಯಕಿಯಾಗಿ ಶಿಲ್ಪಾ ಮಂಜುನಾಥ್‌ ಜೋಡಿಯಾಗಿದ್ದಾರೆ. ಉಳಿದಂತೆ, ಸೌರವ್‌ ಲೋಕಿ (ಭಜರಂಗಿ ಲೋಕಿ), ಧರ್ಮಣ್ಣ ಕಡೂರ್‌, ಅಶೋಕ್‌ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು, ಭರತ್‌ ಬಿ.ಜೆ. ಸಂಗೀತ ನೀದ್ದಾರೆ. “ಗರುಡಾದ್ರಿ ಆರ್ಟ್ಸ್’ ಬ್ಯಾನರ್‌ ಅಡಿಯಲ್ಲಿ ಉದ್ಯಮಿ ಶಂಕರಪ್ಪ, ಸುರೇಶ್‌ ಬಾಬು ಹಾಗೂ ರಮೇಶ್‌ ಬಾಬು ಜಂಟಿಯಾಗಿ ಈ ಚಿತ್ರವನ್ನು  ನಿರ್ಮಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next