Advertisement

ಅವಂತಿಪೋರಾದಲ್ಲಿ ಸೇನೆಯ ಮಹತ್ವದ ಕಾರ್ಯಾಚರಣೆ; ಮೂವರು ಉಗ್ರರ ಹತ್ಯೆ

08:45 AM Feb 20, 2020 | Mithun PG |

ಜಮ್ಮು-ಕಾಶ್ಮೀರ: ಪುಲ್ವಾಮಾ ಜಿಲ್ಲೆಯ ಅವಂತಿಪೋರಾ ಬಳಿಯಿರುವ  ಟ್ರಾಲ್ ನಲ್ಲಿ ಇಂದು ಮುಂಜಾನೆ ನಡೆದ ಪೊಲೀಸರು ಮತ್ತು  ಭದ್ರತಾ ಪಡೆಗಳ ಜಂಟಿ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಹತ್ಯೆಗೈಯಲಾಗಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.

Advertisement

ಟ್ರಾಲ್ ನಲ್ಲಿ ಭದ್ರತಾ ಪಡೆಗಳು ಪಹರೆ ಕಾಯುತ್ತಿದ್ದ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಇದಕ್ಕೆ ಉತ್ತರವಾಗಿ ಭಾರತೀಯ ಯೋಧರು ಕೂಡ ದಾಳಿ ನಡೆಸಿದ್ದು ಅಡಗಿ ಕುಳಿತಿದ್ದ ಮೂವರು ಉಗ್ರರನ್ನು ಹತ್ಯೆಗೈಯುವಲ್ಲಿ ಯಶಸ್ವಿಯಾಗಿದೆ.

ಈ ಕುರಿತು ಕಾಶ್ಮೀರ ವಲಯದ ಪೊಲೀಸ್ ಅಧಿಕಾರಿ ಸ್ಪಷ್ಟನೆ ನೀಡಿದ್ದು, ಅವಂತಿಪೋರಾ ಪೊಲೀಸರು ಮತ್ತು ಭದ್ರತಾ ಪಡೆಗಳು 3 ಉಗ್ರರನ್ನು ಹತ್ಯೆಗೈದಿದ್ದಾರೆ ಎಂದು ಟ್ವೀಟ್ಟರ್ ನಲ್ಲಿ ತಿಳಿಸಿದ್ದಾರೆ.

ಸ್ಥಳದಲ್ಲಿ ಶೋಧ ಕಾರ್ಯಾಚರಣೆ  ಮುಂದುವರಿದಿದೆ ಎಂದು ವರದಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next