Advertisement

India ಸೆಮಿಫೈನಲ್ ಪ್ರತಿಸ್ಪರ್ಧಿ ಮೂವರೊಳು ಯಾರು?: ಮೂರು ದಿನಗಳು…

07:35 PM Nov 08, 2023 | Team Udayavani |

ಮುಂಬೈ: ಮಂಗಳವಾರ ರಾತ್ರಿ ಆಸ್ಟ್ರೇಲಿಯ ರೋಚಕ ವಿಜಯದ ನಂತರ ದಕ್ಷಿಣ ಆಫ್ರಿಕಾ ವಿರುದ್ಧ ಸೆಮಿಫೈನಲ್ ಹಣಾಹಣಿಯನ್ನು ಖಚಿತಪಡಿಸಿಕೊಂಡಿತು. ಅಗ್ರಸ್ಥಾನಿಯಾಗಿ ಅಜೇಯ ಯಾತ್ರೆ ಮುಂದುವರಿಸಿರುವ ಭಾರತದ ಸೆಮಿಫೈನಲ್ ಪ್ರತಿಸ್ಪರ್ಧಿ ಯಾರಾಗುತ್ತಾರೆ ಎನ್ನುವ ಕುತೂಹಲ ಇನ್ನೂ ಉಳಿದುಕೊಂಡಿದೆ.

Advertisement

ನ್ಯೂಜಿಲ್ಯಾಂಡ್ , ಪಾಕಿಸ್ಥಾನ ಮತ್ತು ಅಫ್ಘಾನಿಸ್ಥಾನದ ನಡುವೆ ಸೆಮಿ ಫೈನಲ್ ಗೆ ಏರಲು ತ್ರಿಕೋಣ ಹೋರಾಟ ನಡೆಯಲಿದೆ. ಮೂರೂ ತಂಡಗಳು ತಲಾ ಎಂಟು ಅಂಕಗಳನ್ನು ಹೊಂದಿದ್ದು, ನಿವ್ವಳ ರನ್-ರೇಟ್‌ನಿಂದ ಮಾತ್ರ ಪ್ರತ್ಯೇಕಿಸಲ್ಪಟ್ಟಿವೆ.

ಗುರುವಾರ ಬೆಂಗಳೂರಿನಲ್ಲಿ ಕಿವೀಸ್ ಕೊನೆಯ ಗುಂಪಿನ ಪಂದ್ಯದಲ್ಲಿ ಹೆಣಗಾಡುತ್ತಿರುವ ಶ್ರೀಲಂಕಾವನ್ನು ಎದುರಿಸಲಿದೆ. ಕಳೆದ ಆವೃತ್ತಿಯ ರನ್ನರ್-ಅಪ್‌ ನ್ಯೂಜಿಲ್ಯಾಂಡ್ ಭಾರೀ ಅಂತರದಿಂದ ಗೆಲ್ಲಬೇಕು ಮಾತ್ರವಲ್ಲದೆ 0.036 ರನ್ ರೇಟ್ ಹೊಂದಿರುವ ಪಾಕಿಸ್ಥಾನ ಮತ್ತು -0.038 ರನ್ ರೇಟ್ ಹೊಂದಿರುವ ಅಫ್ಘಾನಿಸ್ಥಾನ ತಂಡಗಳು ಮುಂದಿನ ಪಂದ್ಯಗಳಲ್ಲಿ ಗೆಲ್ಲಬಾರದು.

ಭಾರತ-ಪಾಕಿಸ್ಥಾನ ಸೆಮಿಫೈನಲ್?

ಭಾರತ-ಪಾಕಿಸ್ಥಾನ ಸೆಮಿಫೈನಲ್ ಹಣಾಹಣಿ ಇನ್ನೂ ಸಾಧ್ಯವಿದ್ದು. ಇದು ಸಂಭವಿಸಬೇಕಾದರೆ, ಪಾಕಿಸ್ಥಾನ ಶನಿವಾರ ಈಡನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಬೇಕಾಗಿದೆ.

Advertisement

ನಿಧಾನವಾಗಿ ತನ್ನ ಲಯವನ್ನು ಮರಳಿ ಪಡೆಯುತ್ತಿರುವ ಬಾಬರ್ ಅಜಮ್ ನೇತೃತ್ವದ ತಂಡ ದೊಡ್ಡ ಗೆಲುವು ಸಾಧಿಸಬೇಕಾಗಿದೆ ಮತ್ತು ನ್ಯೂಜಿಲ್ಯಾಂಡ್ ಮತ್ತು ಅಫ್ಘಾನಿಸ್ಥಾನದ ಆಟದ ನಂತರ ಫಲಿತಾಂಶ ನೋಡಿ ಆಡುವ (ನ 11) ಪ್ರಯೋಜನವನ್ನೂ ಹೊಂದಿದೆ.

ಪಂದ್ಯಾವಳಿಯ ಅತ್ಯಂತ ಸುಧಾರಿತ ಮತ್ತು ಅಪಾಯಕಾರಿ ತಂಡವಾದ ಅಫ್ಘಾನಿಸ್ಥಾನವು ಅನುಕೂಲಕರ ಸ್ಥಾನದಿಂದ ಸೋಲನ್ನು ಕಸಿದುಕೊಳ್ಳುವ ಮೊದಲು ಆಸ್ಟ್ರೇಲಿಯದ ಬೆವರಿಳಿಸಿತ್ತು. ಶುಕ್ರವಾರ ಅಹಮದಾಬಾದ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ದಕ್ಷಿಣ ಆಫ್ರಿಕಾ ನೆದರ್ ಲ್ಯಾಂಡ್ಸ್ ಎದುರು ಸೋಲು ಅನುಭವಿಸಿರುವದನ್ನು ಮರೆಯುವಂತಿಲ್ಲ. ದಕ್ಷಿಣ ಆಫ್ರಿಕಾ ಪ್ರತಿಷ್ಠೆಗಾಗಿ ಪಂದ್ಯ ಗೆಲ್ಲಬೇಕು ಹೊರತು ಸೋತರೂ ಪರಿಣಾಮವಿಲ್ಲ.ಅದು ಸೆಮಿ ಫೈನಲ್ ನಲ್ಲಿ ಆಸೀಸ್ ತಂಡವನ್ನು ಎದುರಿಸುವುದು ಬದಲಾಗುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next