Advertisement

ಶಿಯಾ ವಕ್ಫ್ ಬೋರ್ಡ್‌ ಅಧ್ಯಕ್ಷರ ಹತ್ಯೆಗೆ ಸಂಚು: ಮೂವರು ಅರೆಸ್ಟ್‌

11:41 AM Apr 13, 2018 | Team Udayavani |

ಹೊಸದಿಲ್ಲಿ : ಪಾಕಿಸ್ಥಾನದಲ್ಲಿ ಅಡಗಿಕೊಂಡಿರುವ ಭಾರತದ ಮೋಸ್ಟ್‌ ವಾಂಟೆಡ್‌ ಭೂಗತ ಜಗತ್ತಿನ ಪಾತಕಿ ದಾವೂದ್‌ ಇಬ್ರಾಹಿಂನ ಆಣತಿಯ ಮೇರೆಗೆ ಇಲ್ಲಿನ ಶಿಯಾ ವಕ್‌ಫ್ ಬೋರ್ಡ್‌ ಅಧ್ಯಕ್ಷ ವಸೀಂ ರಿಜ್ವಿ ಅವರನ್ನು ಹತ್ಯೆ ಗೈವ ಸಂಚಿನ ಆರೋಪದಲ್ಲಿ ಪೊಲೀಸರು ಇಂದು ಶುಕ್ರವಾರ ಇಲ್ಲಿ ಮೂವರು ಶಂಕಿತ ವ್ಯಕ್ತಿಗಳನ್ನು ಬಂಧಿಸಿದರು. 

Advertisement

ಮದ್ರಸಗಳ ಬಗ್ಗೆ ನೀಡಿದ್ದ ವಿವಾದಾತ್ಮಕ ಹೇಳಿಕೆಗಳನ್ನು ಹಿಂಪಡೆದುಕೊಂಡು ಮುಸ್ಲಿಂ ಉಲೇಮಾಗಳಲ್ಲಿ ಕ್ಷಮೆಯಾಚಿಸಬೇಕು; ಇಲ್ಲದಿದ್ದರೆ ನಿಮ್ಮನ್ನು ಮತ್ತು ನಿಮ್ಮ ಕುಟುಂಬದವರನ್ನು ಕೊಂದು ಹಾಕುತ್ತೇವೆ ಎಂಬ ಬೆದರಿಕೆಯ ಕರೆಗಳು ರಿಜ್ವಿ ಅವರಿಗೆ ಈ ವರ್ಷ ಜನವರಿಯಲ್ಲಿ ಬಂದಿದ್ದವು. ಈ ಜೀವ ಬೆದರಿಕೆಯ ಫೋನ್‌ ಕರೆಗಳ ವಿವರಗಳನ್ನು ರಿಜ್ವಿ ಅವರು ಪೊಲೀಸರಿಗೆ ನೀಡಿದ್ದರು. 

ಅಯೋಧ್ಯೆಯಲ್ಲಿನ ವಿವಾದಿತ ಸ್ಥಳದಲ್ಲಿ ರಾಮ ಮಂದಿರವನ್ನು ನಿರ್ಮಿಸುವುದಕ್ಕೆ ಸರಕಾರವನ್ನು ಬೆಂಬಲಿಸುವಂತೆ ರಿಜ್ವಿ ಅವರು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಕೇಳಿಕೊಂಡಿದ್ದರು. ಇದು ಅನೇಕ ಮುಸ್ಲಿಂ ಸಂಘಟನೆಗಳಿಗೆ ಪಥ್ಯವಾಗಿರಲಿಲ್ಲ. 

ಮುಸ್ಲಿಂ ಮೂಲಭೂತವಾದಿ ಮತ ಪಂಡಿತರು ಮತ್ತು ಮುಲ್ಲಾಗಳು ಭಾರತವನ್ನು ನಾಶ ಮಾಡಲು ಯತ್ನಿಸುತ್ತಿದ್ದಾರೆ; ಇವರು ಭಾರತದಲ್ಲಿ ಇರುವ ಬದಲು ಪಾಕಿಸ್ಥಾನ ಅಥವಾ ಅಫ್ಘಾನಿಸ್ಥಾನಕ್ಕೆ ಹೋಗುವುದೇ ಒಳ್ಳೆಯದು ಎಂದು ರಿಜ್ವಿ ಹೇಳಿಕೆ ನೀಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next