Advertisement

ಗ್ಯಾಸ್‌ ಸಿಲಿಂಡರ್‌ ಟ್ರಕ್ಕಿಗೆ ಬೈಕ್‌ ಢಿಕ್ಕಿ: 3 ವಿದ್ಯಾರ್ಥಿಗಳ ಸಾವ

04:08 PM Feb 03, 2018 | Team Udayavani |

ಕೊಯಮುತ್ತೂರು : ಗ್ಯಾಸ್‌ ಸಿಲಿಂಡರ್‌ ಸಾಗಿಸುತ್ತಿದ್ದ ಟ್ರಕ್ಕಿಗೆ ಬೈಕ್‌ ಢಿಕ್ಕಿಯಾಗಿ ಮೂವರು ವಿದ್ಯಾರ್ಥಿಗಳ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಈ ದುರ್ಘ‌ಟನೆ ಪಾಲಕ್ಕಾಡ್‌ ಬೈಪಾಸ್‌ ರಸ್ತೆಯಲ್ಲಿ ಸಂಭವಿಸಿತು.  ಇಂಜಿನಿಯರಿಂಗ್‌ ವಿದ್ಯಾರ್ಥಿಯೊಬ್ಬ ತನ್ನ ಇಬ್ಬರು ಸಹಪಾಠಿಗಳನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಮಳುಮಿಚಾಪಟ್ಟಿ ಎಂಬಲ್ಲಿ  ತಾನು ವಾಸವಾಗಿರುವ ಬಾಡಿಗೆ ಮನೆಗೆ ನಿನ್ನೆ ಮಧ್ಯ ರಾತ್ರಿ ಹೋಗುತ್ತಿದ್ದ. 

ತಮ್ಮ ಮುಂದುಗಡೆಯಲ್ಲಿ ಹೋಗುತ್ತಿದ್ದ ಕಬ್ಬಿಣದ ಶೀಟುಗಳ ಲಾರಿಯನ್ನು  ಓವರ್‌ಟೇಕ್‌ ಮಾಡುವ ಭರದಲ್ಲಿ ವಿದ್ಯಾರ್ಥಿಗಳ ಬೈಕು ಎದುರುಗಡೆಯಿಂದ ಬರುತ್ತಿದ್ದ ಗ್ಯಾಸ್‌ ಸಿಲಿಂಡರ್‌ ಟ್ರಕ್ಕಿಗೆ ಢಿಕ್ಕಿ ಹೊಡೆಯಿತು. 

ಪರಿಣಾಮವಾಗಿ ಎಲ್ಲ ಮೂರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next