ಗುರುಗ್ರಾಮ : ಹಳೆಯ ಕಟ್ಟಡವೊಂದು ಕುಸಿದುಬಿದ್ದು ಮೂವರು ಕಟ್ಟಡದ ಅಡಿಯಲ್ಲಿ ಸಿಲುಕಿರುವ ಘಟನೆ ಗುರುಗ್ರಾಮದ ಉದ್ಯೋಗ್ ವಿಹಾರ್ ಪ್ರದೇಶದಲ್ಲಿ ಸೋಮವಾರ ಮುಂಜಾನೆ ಸಂಭವಿಸಿದೆ.
ಉದ್ಯೋಗ್ ವಿಹಾರ್ ನ ಮೊದಲ ಹಂತದ ಪ್ಲಾಟ್ 257 ರಲ್ಲಿ ಈ ಘಟನೆ ನಡೆದಿದ್ದು, ರಕ್ಷಣಾ ತಂಡದಿಂದ ಕಟ್ಟಡದ ಅಡಿಯಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯ ನಡೆಯುತ್ತಿದೆ.
ಮಾಹಿತಿಗಳ ಪ್ರಕಾರ ಇದೊಂದು ಹಳೆಯದಾದ ಕಟ್ಟಡವಾಗಿದ್ದು ಕೆಡವಲು ಕಾರ್ಮಿಕರನ್ನು ಕರೆಸಿ ಕಟ್ಟಡ ಕೆಡಹುವ ವೇಳೆ ಏಕಾಏಕಿ ಇಡೀ ಕಟ್ಟಡ ಕುಸಿದು ಬಿದ್ದು ಮೂವರು ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ ಎನ್ನಲಾಗಿದೆ. ಘಟನೆ ನಡೆದ ಸ್ಥಳದಲ್ಲಿ ಬುಲ್ಡೋಜರ್ ಬಳಸಿ ಕಟ್ಟಡ ತೆರವು ಕಾರ್ಯಾಚರಣೆ ನಡೆಯುತ್ತಿದ್ದು,
ಈಗಾಗಲೇ ಒಬ್ಬ ಕಾರ್ಮಿಕನನ್ನು ರಕ್ಷಿಸಲಾಗಿದೆ ಎಂದು ಅಗ್ನಿಶಾಮಕ ಅಧಿಕಾರಿ ಲಲಿತ್ ಕುಮಾರ್ ತಿಳಿಸಿದ್ದಾರೆ.
ಘಟನೆ ಕುರಿತು ಮಾತನಾಡಿದ ಪಶ್ಚಿಮ ವಿಭಾಗದ ಡಿಸಿಪಿ ದೀಪಕ್ ಸಹರಾನ್ ಮೂರು ಅಂತಸ್ಥಿನ ಕಟ್ಟಡ ಇದಾಗಿದ್ದು ಈಗಾಗಲೇ ಎರಡು ಅಂತಸ್ಥಿನ ತೆರವು ಕಾರ್ಯಾಚರಣೆ ಪೂರ್ಣಗೊಡಿತ್ತು ಕೊನೆಯ ಹಂತದ ತೆರವು ಕಾರ್ಯಾಚರಣೆ ವೇಳೆ ಕಟ್ಟಡ ಕುಸಿದು ಬಿದ್ದಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಪಂಜಾಬಿ ಗಾಯಕ ಅಲ್ಫಾಜ್ ಮೇಲೆ ದಾಳಿ; ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲು