Advertisement

29.25 ಲಕ್ಷ ವೆಚ್ಚದಲ್ಲಿ ಮೂರು ಶಾಲೆ ಅಭಿವೃದ್ಧಿ

02:53 PM Jan 06, 2021 | Team Udayavani |

ಖಾನಾಪುರ: ಶಿಕ್ಷಣದಲ್ಲಿ ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳು ನಾವೇನುಕಮ್ಮಿ ಇಲ್ಲ ಎಂದು ತೋರಿಸುವುದಕ್ಕೆ ಸ್ಥಳೀಯಶಾಸಕಿ ಡಾ| ಅಂಜಲಿ ನಿಂಬಾಳಕರ ಕ್ಷೇತ್ರದಮೂರು ಶಾಲೆಗಳನ್ನು ದತ್ತು ಪಡೆದಿದ್ದಾರೆ.

Advertisement

ಈ ಮೂರು ಶಾಲೆಗಳಿಗೆ ಹೊಸ ರೂಪ ಬರಲಿದ್ದು, ಹಲವುಸೌಲಭ್ಯಗಳನ್ನು ಹೊಂದುವುದರ ಮೂಲಕಸುಸಜ್ಜಿತಗೊಳ್ಳಲಿವೆ. ಈ ಮೂರು ಹಿರಿಯಪ್ರಾಥಮಿಕ ಶಾಲೆಗಳಿಗೆ ಒಟ್ಟು 29.25 ಲಕ್ಷ ರೂ.ಕ್ರಿಯಾಯೋಜನೆ ಸಿದ್ಧವಾಗಿದೆ. ಕೆಪಿಎಸ್‌ಸಿ ಶಾಲೆ ಮುಗಳಿಹಾಳ 7.75 ಲಕ್ಷ, ಕಣಕುಂಬಿಹಿರಿಯ ಮರಾಠಿ ಪ್ರಾಥಮಿಕ ಶಾಲೆ 7 ಲಕ್ಷ,ಪ್ರಭುನಗರ ಶಾಲೆ 14.5 ಲಕ್ಷ ರೂ. ಅಂದಾಜುವೆಚ್ಚ ಸಿದ್ಧಪಡಿಸಿ ಅನುಮೋದನೆಗೆ ಸರ್ಕಾರಕ್ಕೆ ಕಳುಹಿಸಲಾಗಿದೆ. ಎರಡು ಕನ್ನಡ ಹಾಗೂಒಂದು ಮರಾಠಿ ಶಾಲೆಗಳನ್ನು ಶಾಸಕರು ಆಯ್ಕೆ ಮಾಡಿದ್ದು, ಈ ಶಾಲೆಗಳಿಗೆ ಹೊಸ ಸ್ಪರ್ಷ ದೊರೆಯಲಿದೆ.

ಕರ್ನಾಟಕ ಪಬ್ಲಿಕ್‌ ಶಾಲೆ, ಮುಗಳಿಹಾಳ :

ಒಂದರಿಂದ ಪಿಯುವರೆಗೆ ಕ್ಲಬ್‌ ಮಾಡಲಾಗಿದ್ದು, 821ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಶಾಲೆ ಅಭಿವೃದ್ಧಿಗೆ7.75 ಲಕ್ಷ ರೂ. ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಶೌಚಾಲಯ,ಶಿಕ್ಷಕರ ಕೊಠಡಿ, ಮೇಲ್ಛಾವಣಿ ರಿಪೇರಿ, ಕೊಠಡಿಗಳಿಗೆಹಾಸಲು, ಕುಡಿಯುವ ನೀರಿಗೆ ಓವರ್‌ಹೆಡ್‌ ಟ್ಯಾಂಕ್‌, ಸ್ಮಾರ್ಟ್ ಬೋರ್ಡ್‌, ಪ್ರಯೋಗಾಲಯ, ಹೂದೋಟ, ಮಕ್ಕಳಿಗೆಕ್ರೀಡಾ ಸೌಲಭ್ಯ ದೊರೆಯಬೇಕಿದೆ. ಇಲ್ಲಿನ ಶಿಕ್ಷಣ ಗುಣಮಟ್ಟದಲ್ಲಿದ್ದು, ಇನ್ನಷ್ಟು ಸೌಲಭ್ಯಗಳಿಂದ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಲು ಸಾಧ್ಯವಿದೆ.

ಕೆಪಿಎಸ್‌ಸಿ ಶಾಲೆಗೆ ಅಗತ್ಯ ಸೌಲಭ್ಯಗಳು ದೊರೆತಲ್ಲಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ದೊರೆಯುತ್ತದೆ. ಮಕ್ಕಳಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಿದಲ್ಲಿ ಮಕ್ಕಳು ಇತ್ತ ಇನ್ನಷ್ಟು ಆಕರ್ಷಿತರಾಗುತ್ತಾರೆ.- ರಾಜಶೇಖರಯ್ನಾ ಹಿರೇಮಠ, ಮುಖ್ಯ ಶಿಕ್ಷಕ

Advertisement

ಹಿರಿಯ ಪ್ರಾಥಮಿಕ ಮರಾಠಿ ಶಾಲೆ,ಕಣಕುಂಬಿ :

ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಕಣಕುಂಬಿ ಹಿರಿಯ ಪ್ರಾಥಮಿಕ ಮರಾಠಿ ಶಾಲೆಯಲ್ಲಿ 190 ವಿದ್ಯಾರ್ಥಿಗಳುಇದ್ದಾರೆ. ಶಾಲೆಗೆ ಡೆಸ್ಕ್, ಹೊಸ ಕಂಪ್ಯೂಟರ್‌, ನೀರಿನಸೌಲಭ್ಯ ಆಗಬೇಕಿದೆ. ಶೌಚಾಲಯಗಳು ಹಳೆಯದಾಗಿದ್ದುಹೊಸ ಶೌಚಾಲಯ ನಿರ್ಮಿಸಬೇಕಿದೆ. ಇಲ್ಲಿ ಅಭಿವೃದ್ಧಿಗೆ 7 ಲಕ್ಷ ರೂ. ಪ್ರಸ್ತಾವನೆ ಸಿದ್ಧಪಡಿಸಲಾಗಿದೆ.

ಅಗತ್ಯ ಸೌಲಭ್ಯಗಳ ಪ್ರಸ್ತಾವನೆ ನೀಡಲಾಗಿದ್ದು,ಸೌಲಭ್ಯಗಳು ದೊರೆತಲ್ಲಿ ಶಾಲೆಯ ಅಭಿವೃದ್ಧಿಗೆಸಹಾಯವಾಗುತ್ತದೆ. ಮಕ್ಕಳಿಗೆ ಸೌಲಭ್ಯಗಳುಅತ್ಯಗತ್ಯವಾಗಿದ್ದು ಮಕ್ಕಳ ಭವಿಷ್ಯ ದೃಷ್ಟಿಯಿಂದ ಹೆಚ್ಚು ಅನುಕೂಲವಾಗಲಿದೆ.- ಶಾಂತಕುಮಾರ ಅವತಾಡೆ, ಮುಖ್ಯ ಶಿಕ್ಷಕ

ಪ್ರಭುನಗರ ಸರ್ಕಾರಿ ಶಾಲೆ :  ಖಾನಾಪುರದಿಂದ 10 ಕಿಮೀ ದೂರದಲ್ಲಿ ಬೆಳಗಾವಿಹೆದ್ದಾರಿಯಲ್ಲಿರುವ ಪ್ರಭುನಗರ ಸರ್ಕಾರಿ ಶಾಲೆ 222ವಿದ್ಯಾರ್ಥಿಗಳನ್ನು ಹೊಂದಿದೆ. ಎರಡು ಕೊಠಡಿಗಳಅಗತ್ಯವಿದೆ. ಶಾಲೆಯ ಮೇಲ್ಚಾವಣಿ ಹಾಳಾಗಿದ್ದು,ತರಗತಿಗಳಿಗೆ ಸುಣ್ಣ ಬಣ್ಣ ಅಗಲಿದೆ. ಕೊಠಡಿಗೆ ಸ್ಲ್ಯಾಬ್‌ನಿರ್ಮಾಣ, ಹೊಸ ಶೌಚಾಲಯ ನಿರ್ಮಾಣ, ಶಾಲೆ ಆವರಣದಲ್ಲಿ ತೋಟಗಾರಿಕೆ 14.5 ಯೋಜನೆಗೆ ಮುಂಜೂರಾತಿ ಪ್ರಸ್ತಾವನೆ ನೀಡಲಾಗಿದೆ.

ಶಾಲೆ ದತ್ತು ಪಡೆಯುವುದರಿಂದಮೂಲಸೌಲಭ್ಯಗಳ ಕೊರತೆ ನೀಗುತ್ತಿದೆ. ಮಕ್ಕಳಿಗೆಅಗತ್ಯ ಸೌಕರ್ಯಗಳು ದೊರೆಯುತ್ತಿರುವುದು ಶಾಲೆಅಭಿವೃದ್ಧಿಗೆ ಸಹಕಾರಿಯಾಗಲಿದೆ. –ಆರ್‌.ಬಿ. ಚೋಬಾರಿ, ಮುಖ್ಯ ಶಿಕ್ಷಕ

ಕ್ಷೇತ್ರದಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಅಗತ್ಯಸೌಲಭ್ಯಗಳನ್ನು ಮಕ್ಕಳಿಗೆನೀಡಲಾಗುತ್ತಿದೆ. ಮೂರು ಶಾಲೆಗಳನ್ನು ದತ್ತು ಪಡೆದಿದ್ದುಸೌಲಭ್ಯ ಕಲ್ಪಿಸುವುದರಮೂಲಕ ಮಕ್ಕಳ ಉತ್ತಮಭವಿಷ್ಯ ರೂಪಿಸಲಾಗುವುದು.  -ಅಂಜಲಿ ನಿಂಬಾಳಕರ, ಖಾನಾಪುರ ಶಾಸಕಿ

 

­ಜಗದೀಶ ಹೊಸಮನಿ

Advertisement

Udayavani is now on Telegram. Click here to join our channel and stay updated with the latest news.

Next