Advertisement

ಕುಂದಾಪುರ: ಇಬ್ಬರು ಪೊಲೀಸರು ಓರ್ವ ಚಾಲಕನಿಗೆ ಕೋವಿಡ್-19 ಸೋಂಕು ದೃಢ

05:06 PM Jul 13, 2020 | keerthan |

ಕುಂದಾಪುರ: ಜನರ ಸುರಕ್ಷತೆಗಾಗಿ ದುಡಿಯುವ ಪೊಲೀಸ್ ಸಿಬ್ಬಂದಿಗೆ ಕೋವಿಡ್ ಸೋಂಕಿನ ಕಾಟ ಮುಂದುವರಿದಿದೆ. ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಇಂದು ಇಬ್ಬರು ಪೊಲೀಸರಿಗೆ ಕೋವಿಡ್-19 ಸೋಂಕು ದೃಢವಾಗಿದೆ.

Advertisement

ಕುಂದಾಪುರ ಉಪವಿಭಾಗದ ಓರ್ವ ಪೊಲೀಸ್ ಸಿಬ್ಬಂದಿಗೆ ಇಂದು ಕೋವಿಡ್-19 ಸೋಂಕು ಇರುವುದು ಧೃಢವಾಗಿದೆ. ರೋಗಲಕ್ಷಣಗಳು ಕಂಡುಬಂದ ಹಿನ್ನಲೆಯಲ್ಲಿ ಕಳೆದ ಜುಲೈ 2ರಿಂದ ಇವರು ಹೋಂ ಕ್ವಾರಂಟೈನ್ ಆಗಿದ್ದರು. ಇಂದು ಇವರಿಗೆ ಸೋಂಕು ದೃಢವಾದ ಹಿನ್ನಲೆಯಲ್ಲಿ ಉಪವಿಭಾಗದ ಕಚೇರಿಯನ್ನು ಎರಡು ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿದೆ. ಸ್ಯಾನಿಟೈಸ್ ಮಾಡಿದ ಬಳಿಕ ಮತ್ತೆ ಕರ್ತವ್ಯಕ್ಕೆ ತೆರೆದುಕೊಳ್ಳುತ್ತದೆ ಎಂದು ವರದಿಯಾಗಿದೆ.

ಕುಂದಾಪುರ ಸಂಚಾರ ಠಾಣೆಯ ಹೈವೇ ಪ್ಯಾಟ್ರೋಲ್ ಕರ್ತವ್ಯದಲ್ಲಿದ್ದ ಎಎಸ್ ಐ ಮತ್ತು ಅವರ ಕಾರು ಚಾಲಕ(ಜಿಲ್ಲಾ ಸಶಸ್ತ್ರ ಪಡೆಯ ಸಿಬಂದಿ)  ಗೂ ಕೋವಿಡ್-19 ಸೋಂಕು ದೃಢವಾಗಿದೆ. ಇವರಿಬ್ಬರೂ ಜುಲೈ 5ರಿಂದ ಕ್ವಾರಂಟೈನ್ ನಲ್ಲಿದ್ದರು.

ಎಎಸ್‌ಪಿ ಕಚೇರಿಯನ್ನು ಎರಡು ದಿನಗಳ ಕಾಲ ಮುಚ್ಚಿ ಸ್ಯಾನಿಟೈಸ್ ಮಾಡಲಾಗುವುದು.‌ ಕಚೇರಿ ತಾತ್ಕಾಲಿಕವಾಗಿ ಸರ್ಕಲ್ ಇನ್ಸ್‌ಪೆಕ್ಟರ್ ಕಚೇರಿಯಲ್ಲಿ ಕಾರ್ಯ ನಿರ್ವಹಿಸಲಿದೆ. ಉಡುಪಿ‌ ಡಿವೈಎಸ್‌ಪಿ ಅವರು ಕುಂದಾಪುರ ವಿಭಾಗದ ಪ್ರಭಾರ ಹೊಣೆ ಹೊತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next