ಬೆಂಗಳೂರು: ಕೋವಿಡ್ 19 ಪೊಲೀಸರನ್ನು ಬೆಂಬಿಡದೆ ಕಾಡುತ್ತಿದ್ದು, ಮಂಗಳವಾರ ಹೆಡ್ ಕಾನ್‌ಸ್ಟೆàಬಲ್ ಹಾಗೂ ಸಿಸಿಬಿಯ ಇಬ್ಬರು ಸೇರಿ ಮೂವರಿಗೆ ಸೋಂಕು ತಗುಲಿದೆ. ಮತ್ತೂಂದೆಡೆ ಕೊಲೆ, ಕೊಲೆ ಯತ್ನ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಇಬ್ಬರು ಆರೋಪಿಗಳಿಗೆ ಸೋಂಕು ಇದ್ದ ಹಿನ್ನೆಲೆಯಲ್ಲಿ ಪುಟ್ಟೇನಹಳ್ಳಿ, ಡಿ.ಜೆ. ಹಳ್ಳಿ, ಹಲಸೂರು ಗೇಟ್ ಠಾಣೆಯನ್ನು ಸೀಲ್‌ಡೌನ್ ಮಾಡಲಾಗಿದೆ.
ಕೇಂದ್ರ ಅಪರಾಧ ವಿಭಾಗ (ಸಿಸಿಬಿ)ದ ವಾಹನ ಚಾಲಕ ಸೇರಿ ಇಬ್ಬರಿಗೆ ಸೋಂಕು ತಗುಲಿದ್ದು, ಇದುವರೆಗೂ ಆರು ಮಂದಿಯಲ್ಲಿ ಕೋವಿಡ್ 19 ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಸಿಸಿಬಿಯನ್ನು ತಾತ್ಕಾಲಿಕವಾಗಿ ಮತ್ತೂಮ್ಮೆ ಸೀಲ್ ಡೌನ್ ಮಾಡಲಾಗಿದೆ. ಜತೆಗೆ ಇನ್‌ಸ್ಪೆಕ್ಟರ್, ಸಬ್ ಇನ್ ಸ್ಪೆಕ್ಟರ್ ಸೇರಿ 15 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.
ಮೂರು ಠಾಣೆ ಸೀಲ್‌ಡೌನ್: ಹಲಸೂರು ಗೇಟ್ ಠಾಣೆಯ 48 ವರ್ಷದ ಹೆಡ್ ಕಾನ್ ಸ್ಟೇಬಲ್‌ವೊಬ್ಬರಿಗೆ ಸೋಂಕು ದೃಢಪಟ್ಟಿದೆ. ಹತ್ತು ದಿನಗಳಿಂದ ಹೆಡ್ ಕಾನ್‌ಸ್ಟೆàಬಲ್ ರಜೆ ಯಲ್ಲಿದ್ದರು. ಕಳೆದ 3 ದಿನಗಳಿಂದ ಕರ್ತವ್ಯಕ್ಕೆ ಹಾಜರಾಗಿದ್ದರು. ಶನಿವಾರ ಪರೀಕ್ಷೆಗೊಳಪಡಿಸಿ ದಾಗ ಸೋಂಕು ದೃಢಪಟ್ಟಿದೆ. ಹೀಗಾಗಿ ಇಡೀ ಠಾಣೆಯನ್ನು ಸೀಲ್‌ಡೌನ್ ಮಾಡ ಲಾಗಿದ್ದು, 12 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.
ಪುಟ್ಟೇನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ತ್ತೀಚೆಗೆ ನಡೆದಿದ್ದ ಕೊಲೆ ಪ್ರಕರಣದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಪೈಕಿ ಒಬ್ಬನಿಗೆ ಸೋಂಕು ತಗುಲಿದ್ದು, ಈತನ ಪ್ರಾಥಮಿಕ ಸಂಪರ್ಕದಲ್ಲಿದ್ದ ಇನ್‌ಸ್ಪೆಕ್ಟರ್ ಸೇರಿ 17 ಮಂದಿ ಕ್ವಾರಂಟೈನ್ ಮಾಡಲಾಗಿದೆ. ಜತೆಗೆ ಠಾಣೆ ಸೀಲ್‌ಡೌನ್ ಮಾಡಲಾಗಿದ್ದು, ಕೋಣನ ಕುಂಟೆ ಠಾಣೆಗೆ ಕಾರ್ಯನಿರ್ವಹಣೆಯನ್ನು ವರ್ಗಾಯಿಸಲಾಗಿದೆ. ಇನ್ನು ಡಿ.ಜೆ. ಹಳ್ಳಿ ಪೊಲೀಸರು ಇತ್ತೀಚೆಗೆ ನಡೆದಿದ್ದ ಕೊಲೆ ಯತ್ನ ಪ್ರಕರಣದಲ್ಲಿ ಬಂಧಿಸಿದ್ದ ಆರೋಪಿಗೆ ಕೋವಿಡ್ 19 ಪತ್ತೆಯಾಗಿತ್ತು.
ಹೀಗಾಗಿ ಆತನ ಸಂಪರ್ಕದಲ್ಲಿದ್ದ ಪಿಎಸ್‌ಐ ಸೇರಿ 13 ಮಂದಿ ಕ್ವಾರಂಟೈನ್ ಮಾಡಲಾಗಿದ್ದು, ಠಾಣೆ ಸೀಲ್‌ಡೌನ್ ಮಾಡಲಾಗಿದೆ. ಠಾಣಾ ಮುಂಭಾಗದಲ್ಲಿಯೇ ತಾತ್ಕಾಲಿಕ ಶೆಡ್ ನಿರ್ಮಿಸಿ ಕಾರ್ಯನಿರ್ವಹಣೆಗೆ ಅವಕಾಶ ನೀಡಲಾಗಿದೆ. ಮೂರು ಠಾಣೆಗಳ ಒಳ ಮತ್ತು ಹೊರಭಾಗದಲ್ಲಿ ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.