ಶಿಯೋಮಿ ಕಂಪೆನಿ ಮೊನ್ನೆ, ಭಾರತೀಯ ಮಾರುಕಟ್ಟೆಗೆ 6 ಸಾವಿರದಿಂದ 13 ಸಾವಿರದವರೆ ರೆಡ್‌ಮಿ 6ಎ, ರೆಡ್‌ಮಿ 6 ಹಾಗೂ ರೆಡ್‌ಮಿ 6 ಪ್ರೊ ಎಂಬ ಮೂರು ಮಾಡೆಲ್‌ಗಳನ್ನು ಬಿಡುಗಡೆ ಮಾಡಿದೆ.
ಬದಲಾಗುತ್ತಲೇ ಇರುವ ವಿನ್ಯಾಸ, ಕ್ಯಾಮರಾ ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು ಕಂಪೆನಿಗಳು 3-4 ತಿಂಗಳಿಗೊಮ್ಮೆ ಹೊಸ ಮೊಬೈಲ್‌ಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತವೆ. ಅದೇ ರೀತಿ ಶಿಯೋಮಿ ಕಂಪೆನಿ ಮೊನ್ನೆ, ಭಾರತೀಯ ಮಾರುಕಟ್ಟೆಗೆ 6 ಸಾವಿರದಿಂದ ಮೊದಲುಗೊಂಡು 13 ಸಾವಿರದವರೆಗೆ ರೆಡ್‌ಮಿ 6ಎ, ರೆಡ್‌ಮಿ 6 ಹಾಗೂ ರೆಡ್‌ಮಿ 6 ಪ್ರೊ ಎಂಬ ಮೂರು ಮಾಡೆಲ್‌ಗಳನ್ನು ಬಿಡುಗಡೆ ಮಾಡಿದೆ.
ರೆಡ್‌ಮಿ 6ಎ: ರೆಡ್‌ಮಿ 6ಎ 5.45 ಇಂಚಿನ ಎಚ್‌ಡಿ ಪ್ಲಸ್ (720*1440 ಪಿಕ್ಸೆಲ್), 18:9 ಅನುಪಾತ ಹೊಂದಿರುವ ಸ್ಕ್ರೀನ್ ಹೊಂದಿದೆ. ಮೀಡಿಯಾಟೆಕ್ ಹೀಲಿಯೋ ಎ22 ನಾಲ್ಕು ಕೋರ್‌ಗಳ 2ಗಿಗಾ ಹರ್r$j ಪ್ರೊಸೆಸರ್ ಹೊಂದಿದೆ. 2 ಜಿಬಿ ರ್ಯಾಮ್ 16 ಜಿಬಿ ಅಂತರ್ಗತ ಮೆಮೋರಿ ಹಾಗೂ 2 ಜಿಬಿ ರ್ಯಾಮ್ ಮತ್ತು 32 ಜಿಬಿ ಅಂತರ್ಗತ ಮೆಮೋರಿಯುಳ್ಳ ಎರಡು ವರ್ಷನ್ ಇವೆ. ಎರಡು ನ್ಯಾನೋ ಸಿಮ್ ಜೊತೆ 256 ಜಿಬಿವರೆಗೂ ಮೈಕ್ರೋ ಎಸ್‌ಡಿ ಕಾರ್ಡ್ ಹಾಕಿಕೊಳ್ಳಬಹುದು. ಎರಡೂ ಸಿಮ್ ಸ್ಲಾಟ್‌ಗಳಲ್ಲೂ 4ಜಿ ನೆಟ್‌ವರ್ಕ್ ಏಕಕಾಲದಲ್ಲಿ ಕೆಲಸ ಮಾಡುತ್ತದೆ.. 13 ಮೆ.ಪಿ. ಹಿಂಬದಿಯ ಕ್ಯಾಮರಾ ಹಾಗೂ 5 ಮೆ.ಪಿ. ಸೆಲ್ಫಿà ಕ್ಯಾಮರಾ ಇದೆ. ಸುರಕ್ಷತೆಗಾಗಿ ಮುಖದ ಗುರುತಿನ ಮೂಲಕ ಫೋನ್ ತೆರೆಯುವ (ಫೇಸ್ ಅನ್‌ಲಾಕ್) ಸೌಲಭ್ಯ ಇದೆ. ಆದರೆ ಬೆರಳಚ್ಚು (ಫಿಂಗರ್ ಪ್ರಿಂಟ್) ಅನ್‌ಲಾಕ್ ಇಲ್ಲ. 3000 ಮಿಲಿ ಆ್ಯಂಪ್ ಅವರ್ (ಎಂಎಎಚ್) ಬ್ಯಾಟರಿ ಹೊಂದಿದೆ. ಅಂದರೆ ಈ ವರ್ಗದಲ್ಲಿ 1 ರಿಂದ ಒಂದೂವರೆ ದಿನ ಬ್ಯಾಟರಿ ಬರುತ್ತದೆ. ಇದರ ದರ 2ಜಿಬಿ +16 ಜಿಬಿ ಗೆ 5999 ರೂ. ಮತ್ತು 2 ಜಿಬಿ+32 ಜಿಬಿಗೆ 6999 ರೂ. ಅಮೇಜಾನ್ ಮತ್ತು ಎಂಐ.ಕಾಮ್ ನಲ್ಲಿ ಸೆಪ್ಟೆಂಬರ್ 19 ರಿಂದ ಲಭ್ಯ.
ರೆಡ್‌ಮಿ 6: ಈ ಮೊಬೈಲ್‌ನಲ್ಲಿ ಮೀಡಿಯಾಟೆಕ್ ಹೀಲಿಯೋ ಪಿ 22 ಶಕ್ತಿಶಾಲಿಯಾದ 8 ಕೋರ್‌ಗಳ (2 ಗಿಗಾ ಹರ್ಟ್j) ಪ್ರೊಸೆಸರ್ ಅಳವಡಿಸಲಾಗಿದೆ. ಸ್ಕ್ರೀನ್ ಅಳತೆ ರೆಡ್‌ಮಿ 6ಎ ಯಲ್ಲಿರುಷ್ಟೇ.ಬಹುತೇಕ ವೈಶಿಷ್ಟéಗಳು ರೆಡ್‌ಮಿ 6ಎ ದಲ್ಲಿರುವಂಥದ್ದೇ. ಆದರೆ ಕ್ಯಾಮರಾ ವಿಭಾಗದಲ್ಲಿ ಮೇಲ್ದರ್ಜೆಗೇರಿಸಲಾಗಿದೆ. 12 ಮೆ.ಪಿ.+5 ಮೆ.ಪಿ. ಡುಯಲ್ ಹಿಂಬದಿಯ ಕ್ಯಾಮರಾ ಹೊಂದಿದೆ. ಸೆಲ್ಫಿà 5 ಮೆ.ಪಿ. ಇದೆ. ಸುರಕ್ಷತೆಗೆ ಬೆರಳಚ್ಚು ಸ್ಕಾ°ನರ್ ಮತ್ತು ಫೇಸ್ ಅನ್‌ಲಾಕ್ ಎರಡೂ ಇವೆ.ಬ್ಯಾಟರಿ 3000 ಎಂಎಎಚ್. ಇದರಲ್ಲಿ 3 ಜಿಬಿ ರ್ಯಾಮ್, 32 ಜಿಬಿ ಅಂತರ್ಗತ ಮೆಮೋರಿ (7,999 ರೂ.) ಮತ್ತು 3ಜಿಬಿ+64 ಜಿಬಿ (9,499 ರೂ.) ಎರಡು ವರ್ಷನ್‌ಗಳಿವೆ. ಇದು ಸೆಪ್ಟೆಂಬರ್ 10 ರಿಂದ ಫ್ಲಿಪ್‌ಕಾರ್ಟ್ ಮತ್ತು ಎಂಐ.ಕಾಮ್‌ನಲ್ಲಿ ಲಭ್ಯ.
ರೆಡ್‌ಮಿ 6 ಪ್ರೊ: ಇದು ಶಿಯೋಮಿ ಭಾರತದಲ್ಲಿ ಬಿಡುತ್ತಿರುವ ಮೊದಲ ನಾಚ್ ಡಿಸ್‌ಪ್ಲೇ ಮೊಬೈಲ್. ಅಂದರೆ ಸ್ಕ್ರೀನ್‌ನ ಮೇಲ್ಭಾಗದಲ್ಲಿ ಮಧ್ಯದಲ್ಲಿರುವ ಕ್ಯಾಮರಾ ಮತ್ತು ಸ್ಪೀಕರ್ ಹೊರತುಪಡಿಸಿ ಪೂರ್ತಿ ಡಿಸ್‌ಪ್ಲೇ ಇರುತ್ತದೆ. 5.84 ಇಂಚಿನ್ ಫುಲ್‌ಎಚ್‌ಡಿಪ್ಲಸ್ (1080*2280) ಡಿಸ್‌ಪ್ಲೇ (19:9 ಅನುಪಾತ) ಸ್ನಾಪ್‌ಡ್ರಾಗನ್ 625 ಶಕ್ತಿಶಾಲಿ 8 ಕೋರ್‌ಗಳ ಪ್ರಸಿದ್ಧ ಪ್ರೊಸೆಸರ್ ಹೊಂದಿದೆ. 3ಜಿಬಿ ರ್ಯಾಮ್ ಮತ್ತು 32 ಜಿಬಿ ಅಂತರ್ಗತ ಮೆಮೊರಿ, (10999 ರೂ.) ಮತ್ತು 4ಜಿಬಿ ರ್ಯಾಮ್ ಮತ್ತು 64 ಜಿಬಿ ಅಂತರ್ಗತ ಮೆಮೊರಿಯ 12,999ರೂ.) ಎರಡು ವರ್ಷನ್‌ಗಳಿದ್ದು, 4000 ಎಂಎಎಚ್ ಬ್ಯಾಟರಿ ಇದೆ. ಬೆರಳಚ್ಚು ಮತ್ತು ಫೇಸ್ ಅನ್‌ಲಾಕ್ ಸೌಲಭ್ಯ ಇದೆ. ಎರಡು ಸಿಮ್‌ಗಳ ಜೊತೆ ಮೈಕ್ರೋ ಎಸ್‌ಡಿ ಕಾರ್ಡ್ ಕೂಡ ಹಾಕಿಕೊಳ್ಳಬಹುದು. ಅಮೇಜಾನ್ ಮತ್ತು ಎಂಐ.ಕಾಮ್‌ನಲ್ಲಿ ಸೆಪ್ಟೆಂಬರ್ 11ರಿಂದ ಲಭ್ಯ.
ಕೆ.ಎಸ್. ಬನಶಂಕರ ಆರಾಧ್ಯ