Advertisement
480 ಕಿ.ಮೀ. ದೂರದ ಈ ಸೈಕಲ್ ಜಾಥಾದಲ್ಲಿ ಪಾಲ್ಗೊಳ್ಳುವ ಇವರು, ಮೇ 3 ರಂದು ಕಾಸರಗೋಡು ತಲುಪುವ ಗುರಿ ಹೊಂದಿದ್ದಾರೆ. ಮತದಾನ ಜನತೆಯ ಹಕ್ಕು, ಜನತೆಯ ಶಕ್ತಿ ಎಂಬ ಅರಿವು ಮೂಡಿಸುವುದು ನಮ್ಮ ಮೂಲ ಉದ್ದೇಶ. ಯಾವುದೇ ಆಮಿಷಕ್ಕೆ ಒಳಗಾಗದೆ ಮತ ಚಲಾಯಿಸುವ ಮೊದಲು ಯೋಚಿಸಿ ಮುಂದುವರಿಯುವುದು ಅಗತ್ಯ ಎಂಬ ಸತ್ಯದ ಅರಿವು ಮಾಡಿ ಕೊಡುವುದು. ರಾಜ್ಯದ ಹಾಗೂ ದೇಶದ ಬೆಳವಣಿಗೆಯಲ್ಲಿ ಮತದಾನದ ಮಹತ್ವ ಹಾಗೂ ಅದರ ಅಗತ್ಯದ ಬಗ್ಗೆ ತಿಳಿ ಹೇಳುವುದು. ಹೆಣ್ಣಿನ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೆಣ್ಣಿನರಕ್ಷಣೆ ಮತ್ತು ಸ್ವಾತಂತ್ರ್ಯದ ಬಗ್ಗೆ ತಿಳಿವಳಿಕೆ ಮೂಡಿಸಲು ಈ ಜಾಥಾ ಕೈಗೊಂಡಿರುವುದಾಗಿ ವಿನಯಕುಮಾರ ಪಾಟೀಲ, ವೈಶಾಖ ಮೆಹೆಂದಳೆ ಹಾಗೂ ರೋಹಿತ ಜಾಡರ ತಿಳಿಸಿದರು.