ಸಿರವಾರ: ಪಟ್ಟಣದ ಹೊರವಲಯದ ಹೊಲವೊಲಯದ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮೂವರು ಕೆರೆಯಲ್ಲಿ ಸಾವನ್ನಪ್ಪಿದ ಘಟನೆ ಸೋಮವಾರ ಮಧ್ಯಾಹ್ನ ಜರುಗಿದೆ.
Advertisement
ತಾಲೂಕಿನ ಲಕ್ಕಂದಿನ್ನಿ ಗ್ರಾಮದ ಮುದುಕಪ್ಪ ( 60), ಮಕ್ಕಳಾದ ಶಿವು (35), ಬಸವ (30) ಮೃತ ದುರ್ದೈವಿಗಳು. ಕುಟುಂಬ ಕಲಹ ಹಿನ್ನೆಲೆ ಘಟನೆ ಜರುಗಿರಬಹುದು ಎಂಬ ಸಂಶಯವಿದ್ದು ಇದಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ದಳದವರು ಆಗಮಿಸಿ ಶವಗಳನ್ನು ಹೊರ ತೆಗೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.
ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ.