Advertisement

ಮೂರು ಜೋಡಿ ಅವಳಿಗಳು!

12:08 PM Jul 08, 2018 | |

ಸುಳ್ಯ : ಇಲ್ಲಿ ಅದೆಷ್ಟೋ ವೈಶಿಷ್ಟಗಳಿವೆ, ವೈಚಿತ್ರಗಳಿವೆ. ಅದರಲ್ಲಿ ಅವಳಿ ಜನನವು ಒಂದು. ಇಲ್ಲಿನ ವಿದ್ಯಾಸಂಸ್ಥೆಯೊಂದರಲ್ಲಿ ಮೂರು ಜೋಡಿ ಅವಳಿಗಳಿದ್ದಾರೆ. ಕೆವಿಜಿ ಶಿಕ್ಷಣ ಸಂಸ್ಥೆಯ ನೆಹರು ಮೆಮೋರಿಯಲ್‌ ಪ.ಪೂ. ಕಾಲೇಜಿನಲ್ಲಿ 2018-19ನೇ ಶೈಕ್ಷಣಿಕ ವರ್ಷದಲ್ಲಿ ಮೂವರು ಜೋಡಿ ಅವಳಿ ಶಿಕ್ಷಣಾರ್ಥಿಗಳಿದ್ದಾರೆ. ಒಂದಷ್ಟು ವ್ಯತ್ಯಾಸ ಇರದ ಇವರನ್ನು ಗುರುತಿ ಸುವುದೇ ಒಂದು ಸವಾಲು. ಈ ಜೋಡಿಗಳು ಇತರ ವಿದ್ಯಾರ್ಥಿಗಳ ಕೌತುಕದ ಕೇಂದ್ರವೂ ಹೌದು. ಅದರಲ್ಲೂ ಇವರು ತದ್ರೂಪಿ ಅವಳಿ ಗಳು ಅನ್ನುವುದು ವಿಶೇಷ.

Advertisement

ಸುನಯನಾ ಕೆ.ಕೆ ಮತ್ತು ಸುಚರಿತಾ ಕೆ.ಕೆ (ಎಡದಿಂದ ಬಲಕ್ಕೆ). ದ್ವಿತೀಯ ವಾಣಿಜ್ಯ (ಎಸ್‌ಇಬಿಎ) ವಿಭಾಗದಲ್ಲಿ ವಿದ್ಯಾರ್ಜನೆಗೈದು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಸದಾ ಹಸನ್ಮುಖೀಗಳು. ಜಯನಗರ ನಿವಾಸಿಗಳು. ಸುಳ್ಯದಲ್ಲಿ ಹೊಟೇಲ್‌ ಉದ್ಯಮಿ ಪೆರಾಜೆ ಕುಂದಲ್ಪಾಡಿ ಕುಸುಮಾಧರ ಕೆ.ಜೆ. ಮತ್ತು ಪಾರ್ವತಿ ಕೆ.ಕೆ. ದಂಪತಿಯ ಪುತ್ರಿಯರು.

ಸಾತ್ವಿಕ್‌ ಬಿ. ಮತ್ತು ಸಾರ್ಥಕ್‌ ಬಿ. ಇವರು ದ್ವಿತೀಯ ವಾಣಿಜ್ಯ (ಸಿಇಬಿಎ) ವಿಭಾಗದಲ್ಲಿ ಅಧ್ಯಯನ ಮಾಡುತ್ತಿರುವ ಅವಳಿ ಸಹೋದರರು. ಬೆಳ್ಳಾರೆಯ ನೇಲ್ಯಮಜಲಿನ ಕೃಷಿಕ ದಂಪತಿ ಪ್ರಸನ್ನ ಶಂಕರ ಬಿ.ಕೆ. ಮತ್ತು ವಿಂಧ್ಯಾ ಇವರ ಪುತ್ರರು. ರಶ್ಮಿ ಕೆ.ಎಂ. ಮತ್ತು ರೇಶ್ಮಾ ಕೆ.ಎಂ. ಇವರು ದ್ವಿತೀಯ ವಿಜ್ಞಾನ (ಪಿಸಿಎಂಸಿ) ವಿಭಾಗ ವಿದ್ಯಾರ್ಥಿನಿಯರು. ದೊಡ್ಡತೋಟ ಕೀಲಾರ್‌ ಕಜೆಯ ಕೃಷಿಕ ಮಹಾಲಿಂಗೇಶ್ವರ ಭಟ್‌ ಮತ್ತು ಸರಸ್ವತಿ ದಂಪತಿ ಪುತ್ರಿಯರು.

ಒಂದೇ ತರಹ
ಎರಡು ಮಕ್ಕಳು ಒಂದೇ ಗರ್ಭಚೀಲದಲ್ಲಿ ಬೆಳೆಯುವುದನ್ನು ಅವಳಿಗಳೆಂದು ಕರೆಯುತ್ತಾರೆ. ಒಂದೇ ಅಂಡಾಣುವಿನ ಅವಳಿ ಸ್ವರೂಪಿಗಳು. ಇವು ಒಂದೇ ರೂಪದ ಒಂದೇ ಅಂಗದ ಅವಳಿಗಳು ಆಗುವುವು. ರೂಪ, ಆಕಾರ, ಬಣ್ಣ, ಆಂತರಿಕ ಶಕ್ತಿ, ಮನೋಭಾವ ಎಲ್ಲದರಲ್ಲಿಯೂ ಹೋಲಿಕೆ ಇರುತ್ತದೆ. ಒಂದೇ ರಕ್ತನಾಳಗಳು ಎರಡು ಶಿಶುಗಳಿಗೆ ರಕ್ತ ಪೂರೈಕೆ ಮಾಡುತ್ತವೆ.
– ಡಾ| ಗೀತಾ ದೊಪ್ಪ,ವಿಭಾಗ ಮುಖ್ಯಸ್ಥರು, ಸ್ತ್ರೀರೋಗ
ಪ್ರಸೂತಿ ವಿಭಾಗ, ಕೆವಿಜಿ ವೈದ್ಯಕೀಯ ಮಹಾವಿದ್ಯಾಲಯ

ಗುರುತಿಸುವುದು ಕಷ್ಟ
ಒಬ್ಬರಂತೆ ಇನ್ನೊಬ್ಬರಿದ್ದು, ಸುಲಭದಲ್ಲಿ ಅವರನ್ನು ಗುರುತಿಸುವುದು ಕಷ್ಟ. ಎಲ್ಲಾ ಸಂದರ್ಭಗಳಲ್ಲೂ ಜತೆಯಾಗಿ ಇರುತ್ತಾರೆ. ಪಠ್ಯ ಚಟುವಟಿಕೆಗಳಲ್ಲಿಯು ಮುಂದಿದ್ದಾರೆ. 
 - ಮಮತಾ ಕೆ.
ಪ್ರಾಂಶುಪಾಲರು, ಎನ್ನೆಂಪಿಯುಸಿ, ಸುಳ್ಯ

Advertisement
Advertisement

Udayavani is now on Telegram. Click here to join our channel and stay updated with the latest news.

Next