Advertisement

ಡೆಂಘೀಗೆ ರಾಜ್ಯದ ಸೈನಿಕ ಸೇರಿ ಮೂವರ ಬಲಿ

03:55 AM Jul 10, 2017 | |

ಬೆಂಗಳೂರು: ಪ್ರತ್ಯೇಕ ಪ್ರಕರಣದಲ್ಲಿ ಮಹಾಮಾರಿ ಡೆಂಘೀಗೆ ಯೋಧ ಸೇರಿದಂತೆ ಮೂವರು ಬಲಿಯಾಗಿದ್ದಾರೆ. ಜಮ್ಮು-ಕಾಶ್ಮೀರದ ಸಿಆರ್‌ಪಿಎಫ್‌ ತುಕಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಜಮಖಂಡಿ ತಾಲೂಕಿನ ಚಿಮ್ಮಡ ಗ್ರಾಮದ ಸೈನಿಕ ಮಂಜುನಾಥ ಮೇತ್ರಿ (30) ಡೆಂಘೀ ಜ್ವರಕ್ಕೆ ಬಲಿಯಾದ ಯೋಧ.

Advertisement

ಅನಾರೋಗ್ಯದಿಂದ ದೆಹಲಿಯ ಸೈನಿಕರ ಮೀಸಲು ಸೇನಾ ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆದಿದ್ದ ಮೇತ್ರಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಪಾರ್ಥಿವ ಶರೀರವನ್ನು ದೆಹಲಿಯಿಂದ ಬೆಳಗಾವಿಗೆ ವಿಮಾನದ ಮೂಲಕ ತರಲು ವ್ಯವಸ್ಥೆ ಮಾಡಿದ್ದು, ಅಲ್ಲಿಂದ ಚಿಮ್ಮಡ ಗ್ರಾಮಕ್ಕೆ ಬರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಕನಕಪುರ ತಾಲೂಕಿನ ತೇರಿನದೊಡ್ಡಿ ಗ್ರಾಮದ ಮಹೇಶ್‌ ಪುತ್ರಿ ಗೀತಾ(5) ಡೆಂಘೀಗೆ ಬಲಿಯಾಗಿದ್ದಾಳೆ. ಮಳವಳ್ಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಶುಕ್ರವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮತ್ತೂಂದು ಪ್ರಕರಣದಲ್ಲಿ ಮಳವಳ್ಳಿ ತಾಲೂಕಿನ ಗೌಡಗೆರೆ ಗ್ರಾಮದ ಸುಶ್ಮಿತಾ (19) ಡೆಂಘೀಗೆ ಬಲಿಯಾಗಿದ್ದಾರೆ.

ಭಾರತೀನಗರದ ಭಾರತಿ ಕಾಲೇಜಿನಲ್ಲಿ ಬಿಎ ವ್ಯಾಸಂಗ ಮಾಡುತ್ತಿದ್ದ ಸುಶ್ಮಿತಾ, ಕಳೆದ ಮೂರು ದಿನಗಳಿಂದ ಜ್ವರದಿಂದ ಬಳಲುತ್ತಿದ್ದಳು.

Advertisement

Udayavani is now on Telegram. Click here to join our channel and stay updated with the latest news.

Next