Advertisement

ಭವಿಷ್ಯದ ನಾಯಕರಲ್ಲಿ ಮೂವರು ಭಾರತೀಯರು

09:41 PM Oct 19, 2021 | Team Udayavani |

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷರ ಕಚೇರಿಯಾದ ವೈಟ್‌ಹೌಸ್‌, 19 ಮಂದಿ ಯುವಕರನ್ನು ಉದಯೋನ್ಮುಖ ನಾಯಕರೆಂದು ಗುರುತಿಸಿದೆ.

Advertisement

ಅದರಲ್ಲಿ ಮೂವರು ಭಾರತೀಯ ಮೂಲದ ಯುವಕರಿದ್ದಾರೆ. ಈ ಅಷ್ಟೂ ಮಂದಿ 2021-22ರ ಅವಧಿಯಲ್ಲಿ ವೈಟ್‌ಹೌಸ್‌ನ ವಿವಿಧ ವಿಭಾಗಗಳಲ್ಲಿ ಫೆಲೋಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.

ಇವರಿಗೆ ವೈಟ್‌ಹೌಸ್‌ನಿಂದ ಹಣವನ್ನೂ ನೀಡಲಾಗುತ್ತದೆ. ಕ್ಯಾಲಿಫೋರ್ನಿಯದ ಜಾಯ್‌ ಬಸು, ಸನ್ನಿ ಪಟೇಲ್‌ ಹಾಗೂ ನ್ಯೂಜೆರ್ಸಿಯ ಆಕಾಶ್‌ ಶಾ ಅವರೇ ಈ ಪ್ರತಿಷ್ಠಿತ ಗೌರವವನ್ನು ಪಡೆದಿರುವ ಭಾರತೀಯ ಮೂಲದ ವ್ಯಕ್ತಿಗಳು.

ಈ ಪೈಕಿ ಜಾಯ್‌ ಬಸುಗೆ ವೈಟ್‌ಹೌಸ್‌ನ ಲಿಂಗ ನೀತಿ ಆಯೋಗದಲ್ಲಿ ಜಾಗ ನೀಡಲಾಗಿದೆ.

ಇದನ್ನೂ ಓದಿ:ದಸರಾ ಹಾಗೂ ನಂತರದ ಹಿಂಸಾಚಾರ ಪ್ರಕರಣ : ಬಾಂಗ್ಲಾದಲ್ಲಿ 450 ಮಂದಿ ಅರೆಸ್ಟ್‌ 

Advertisement
Advertisement

Udayavani is now on Telegram. Click here to join our channel and stay updated with the latest news.

Next