Advertisement

ಇರಾನಿ ಗ್ಯಾಂಗ್‌ನ ಮೂವರು ಬಲೆಗೆ 

11:08 AM Sep 17, 2017 | |

ಬೆಂಗಳೂರು: ಇತ್ತೀಚೆಗೆ ಈಶಾನ್ಯ ವಿಭಾಗದಲ್ಲಿ ಹೆಚ್ಚಾಗಿ ನಡೆಯುತ್ತಿದ್ದ ಸರ ಕಳ್ಳತನ ಪ್ರಕರಣಗಳನ್ನು ಬೇಧಿಸುವಲ್ಲಿ ಕೊಡಿಗೆಹಳ್ಳಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಸಂಬಂಧ ಇರಾನಿ ಗ್ಯಾಂಗ್‌ನ ಮೂವರನ್ನು ಬಂಧಿಸಿದ್ದಾರೆ. ಕರಾರ್‌ ಹುಸೈನ್‌ ಸೈಯದ್‌(36), ಸಫ‌ìರಾಜ್‌(45), ಮಹಮೊದ್‌ ಸೈಯದ್‌ ಅಲಿ(31) ಬಂಧಿತರು.

Advertisement

ಮೊದಲ ಇಬ್ಬರು ಆರೋಪಿಗಳು ಮಹಾರಾಷ್ಟ್ರದ ಥಾಣೆ ಮೂಲದವರಾಗಿದ್ದು, ಕಲುºರ್ಗಿಯ ಮಹಮದ್‌ ಸೈಯದ್‌ ಅಲಿಯನ್ನು ಸಂಪರ್ಕಿಸಿ ಆಗಾಗ್ಗೆ ಕರ್ನಾಟಕಕ್ಕೆ ಬಂದು ಸರ ಕದ್ದು ಹೋಗುತ್ತಿದ್ದರು. ಕೊಡಿಗೇಹಳ್ಳಿ, ಯಲಹಂಕ ಉಪನಗರ, ವಿದ್ಯಾರಣ್ಯಪುರ, ಅಮೃತಹಳ್ಳಿ, ಕೊತ್ತನೂರು ಠಾಣಾ ವ್ಯಾಪ್ತಿಯಲ್ಲಿ ಬೈಕ್‌ನಲ್ಲಿ ಆರೋಪಿಗಳು, ಮುಂಜಾನೆ ಮತ್ತು ಸಂಜೆ ಒಂಟಿಯಾಗಿ ಓಡಾಡುತ್ತಿದ್ದ ಮಹಿಳೆಯರಿಗೆ ವಿಳಾಸ, ಅಪರಿಚಿತ ವ್ಯಕ್ತಿಯನ್ನು ಕೇಳುವ ನೆಪದಲ್ಲಿ ಸರ ಕಸಿದು ಪರಾರಿಯಾಗುತ್ತಿದ್ದರು. 

ಇರಾನಿ ಗ್ಯಾಂಗ್‌ ಸದಸ್ಯರ ಪತ್ತೆಗಾಗಿ ಈಶಾನ್ಯ ವಿಭಾಗದ ಡಿಸಿಪಿ ಗಿರೀಶ್‌ ವಿಶೇಷ ತಂಡ ರಚಿಸಿದ್ದರು. ಈ ತಂಡ ಮೊದಲಿಗೆ ಕರಾರ್‌ ಹುಸೈನ್‌ ಸೈಯದ್‌ ಮತ್ತು ಸಫ‌ìರಾಜ್‌ ಎಂಬವರನ್ನು ಬಂಧಿಸಿತ್ತು. ಬಳಿಕ ಈ ಇಬ್ಬರನ್ನು ತೀವ್ರ ವಿಚಾರಣೆ ನಡೆಸಿದ ನಂತರ, ಪ್ರಕರಣವೊಂದರಲ್ಲಿ ಜೈಲಿನಲ್ಲಿರುವ ಮೊಹಮದ್‌ ಸೈಯದ್‌ ಅಲಿನನ್ನು ಬಾಡಿ ವಾರೆಂಟ್‌ ಮೇಲೆ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಈ ಮೂವರು ಇರಾನಿ ತಂಡದ ಸದಸ್ಯರು ಎಂದು ತಿಳಿದು ಬಂದಿದೆ. ಇವರ ಬಂಧನದಿಂದ ಮಹಾರಾಷ್ಟ್ರ ಸೇರಿದಂತೆ ನಗರದ 10 ಠಾಣೆ ವ್ಯಾಪ್ತಿಯಲ್ಲಿ ನಡೆದ ಸರಅಪಹರಣ ಪ್ರಕರಣಗಳು ಪತ್ತೆಯಾಗಿವೆ.

ಈ ಪೈಕಿ ಕರಾರ್‌ ಹುಸೈನ್‌ ಸೈಯದ್‌ ವಿರುದ್ಧ ಮುಂಬೈನ ವಿವಿಧ ಠಾಣೆಗಳಲ್ಲಿ 25ಕ್ಕೂ ಅಧಿಕ ಸರ ಅಪಹರಣ ಪ್ರಕರಣಗಳು ದಾಖಲಾಗಿದ್ದು, ಈತನ ವಿರುದ್ಧ ಮುಂಬೈ ನಗರ ಪೊಲೀಸರು 3 ವರ್ಷಗಳ ಹಿಂದೆ ಮೋಕಾ ಪ್ರಕರಣವನ್ನು ದಾಖಲಿಸಿದ್ದಾರೆ. ಆರೋಪಿಗಳಿಂದ 18 ಸರ, 2 ಬೈಕ್‌ ಸೇರಿದಂತೆ 20 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next