ಲಕ್ನೋ: ಜಮೀನು ವಿವಾದಕ್ಕೆ ಸಂಬಂಧಿಸಿ ನಡೆದ ಗಲಭೆಯಲ್ಲಿ ವ್ಯಕ್ತಿಯೊಬ್ಬ ಒಂದೇ ಕುಟುಂಬದ ಮೂವರು ಸದಸ್ಯರನ್ನು ಗುಂಡಿಕ್ಕಿ ಕೊಂದಿರುವ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ಶುಕ್ರವಾರ ನಡೆದಿದೆ.
ಲಕ್ನೋದ ಮಹಿಲಾಬಾದ್‌ನ ಮೊಹಮ್ಮದ್ ನಗರದಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ಮುನೀರ್ ಅಹ್ಮದ್ ಖಾನ್, ಆತನ ಸೋದರಳಿಯ ಹಂಝಲಾ ಖಾನ್ (17) ಮತ್ತು ಹಂಝಾಳ ತಾಯಿ ಫರ್ಹೀನ್ ಎಂದು ಗುರುತಿಸಲಾಗಿದೆ.
ಘಟನೆ ಕುರಿತು ಮಾಹಿತಿ ನೀಡಿದ ಲಕ್ನೋ ಪೊಲೀಸ್ ಆಯುಕ್ತರು ಜಮೀನು ವಿವಾದಕ್ಕೆ ಸಂಬಂಧಿಸಿ ಎರಡು ಕುಟುಂಬಗಳ ನಡುವೆ ಬಹಳ ದಿನಗಳಿಂದ ಜಗಳಗಳು ನಡೆಯುತ್ತಿತ್ತು. ಈ ವಿವಾದ ನ್ಯಾಯಾಲಯದಲ್ಲೂ ವಜಾ ಗೊಂಡಿತ್ತು ಇದರ ನಡುವೆ ಪೊಲೀಸರಿಗೆ ಮಾಹಿತಿ ನೀಡದೆ ಜಮೀನು ಅಳತೆ ಮಾಡಲು ಲೆಕ್ಕಾಧಿಕಾರಿಯನ್ನು ಕರೆಸಿ ಜಮೀನು ಅಳತೆ ಮಾಡುತ್ತಿದ್ದರು ಈ ವೇಳೆ ಎರಡು ಕುಟುಂಬಗಳ ನಡುವೆ ವಾಗ್ವಾದ ನಡೆದಿದೆ. ಇದಾದ ಬಳಿಕ ಕುಟುಂಬ ಸದಸ್ಯರು ಮನೆಗೆ ತೆರಳಿದ್ದಾರೆ ಅಲ್ಲಿಗೆ ಬಂದ ಒಂದು ಕುಟುಂಬ ಮತ್ತೆ ವಾಗ್ವಾದ ನಡೆಸಿದೆ ಇದು ಉಲ್ಬಣಗೊಂಡು ಸಿರಾಜ್ ಅಹ್ಮದ್ ಖಾನ್ ಅಲಿಯಾಸ್ ಲಲ್ಲನ್ ತನ್ನ ಪರವಾನಗಿ ಪಡೆದ ರೈಫಲ್‌ನಿಂದ ಮುನೀರ್, ಹಂಝಲಾ ಮತ್ತು ಫರ್ಹೀನ್‌ಗೆ ಗುಂಡು ಹಾರಿಸಿದ್ದಾನೆ.
ಅಲ್ಲದೆ ಲಲ್ಲನ್ ಎಂಬ ವ್ಯಕ್ತಿಯ ಮೇಲೆ ಈ ಹಿಂದೆಯೂ ಕ್ರಿಮಿನಲ್ ಕೇಸು ದಾಖಲಾಗಿತ್ತು ಆತನ ವಿರುದ್ಧ ಮಹಿಲಾಬಾದ್‌ನಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: 2012ರಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ… ಬಿಜೆಪಿ ಸಂಸದೆಗೆ 6 ತಿಂಗಳ ಜೈಲು ಶಿಕ್ಷೆ