Advertisement

ಉನ್ನಾವೋ : ವಿಷಾನಿಲ ಸೇವಿಸಿ 3 ಫ್ಯಾಕ್ಟರಿ ಕಾರ್ಮಿಕರ ಸಾವು

07:27 PM Jul 30, 2018 | Team Udayavani |

ಲಕ್ನೋ : ಉತ್ತರ ಪ್ರದೇಶದಲ್ಲಿ ಉನ್ನಾವೋದ ಕಾರ್ಖಾನೆಯೊಂದರಲ್ಲಿ ವಿಷಾನಿಲ ಸೇವಿಸಿ ಮೂವರು ಕಾರ್ಮಿಕರು ಮೃತಪಟ್ಟಿರುವುದಾಗಿ ವರದಿಯಾಗಿದೆ. 

Advertisement

ಡೇರೆಗಳಿಗೆ ಬಣ್ಣ ನೀಡುವ ಕೆಲಸ ನಡೆಯುವ ಉನ್ನಾವೋದ ಸಿಂಗ್ರೋಸಿಯಲ್ಲಿನ ದುರ್ಗಾ ಇಂಟರ್‌ನ್ಯಾಶನಲ್‌ ಫ್ಯಾಕ್ಟರಿಯಲ್ಲಿ  ಈ ದುರ್ಘ‌ಟನೆ ನಡೆಯಿತು. 

ಮೂವರು ಕಾರ್ಮಿಕರು ಬಣ್ಣಗಳನ್ನು ಮಿಶ್ರ ಮಾಡುವ ಟ್ಯಾಕ್‌ನೊಳಗೆ ಇಳಿದು ಅದರ ನೋಝಲ್‌ ದುರಸ್ತಿ ಮಾಡುವಾಗ ಅವರು ಕೊಳಕು ನೀರಿನಿಂದ ಹೊರಟ ವಿಷಾನಿಲದ ಸಂಪರ್ಕಕ್ಕೆ ಬಂದರು. ಅವರ ನೆರವಿಗೆ ಮುಂದಾಗುವ ಮುನ್ನವೇ ಅವರು ವಿಷಾನಿಲ ಸೇವಿಸಿ ಮೃತಪಟ್ಟರೆಂದು ವರದಿಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next