Advertisement

2018ರಿಂದ ತಾಲೀಬಾನ್ ವಶದಲ್ಲಿರುವ ಮೂವರು ಭಾರತೀಯರು ಶೀಘ್ರ ಬಂಧಮುಕ್ತಿ

09:21 AM Oct 07, 2019 | Team Udayavani |

ನವದೆಹಲಿ/ಇಸ್ಲಾಮಾಬಾದ್: ಕಳೆದ ವರ್ಷ ತಾಲೀಬಾನಿಗಳು ತಮ್ಮ ವಶದಲ್ಲಿರಿಸಿಕೊಂಡಿರುವ ಮೂವರು ಭಾರತೀಯ ಎಂಜಿನಿಯರ್ ಗಳನ್ನು ಬಂಧ ವಿಮುಕ್ತಗೊಳಿಸಲು ತಾಲೀಬಾನಿಗಳು ನಿರ್ಧರಿಸಿದ್ದಾರೆ. ಅಫ್ಘಾನಿಸ್ಥಾನಕ್ಕೆ ಅಮೆರಿಕಾದ ವಿಶೇಷ ರಾಯಭಾರಿಯಾಗಿರುವ ಝಲ್ಮೇ ಖಾಲಿಝಾದ್ ಅವರು ತಾಲೀಬಾನ್ ನಾಯಕರನ್ನು ಇಸ್ಲಾಮಾಬಾದ್ ನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಈ ನಿರ್ದಾರ ಹೊರಬಿದ್ದಿದೆ.

Advertisement

ಕಳೆದ ಮೇ 2018ರಲ್ಲಿ ತಾಲೀಬಾನ್ ಉಗ್ರರು ಅಫ್ಘಾನಿಸ್ಥಾನದ ವಿದ್ಯುತ್ ಉತ್ಪಾದಕ ಕೇಂದ್ರ ಒಂದರಲ್ಲಿ ಕೆಲಸ ಮಾಡುತ್ತಿದ್ದ ಏಳು ಜನರನ್ನು ಒತ್ತೆಸೆರೆ ಇರಿಸಿಕೊಂಡಿದ್ದರು. ಅವರಲ್ಲಿ ಒಬ್ಬರನ್ನು ಈ ವರ್ಷದ ಮಾರ್ಚ್ ತಿಂಗಳಲ್ಲಿ ಬಿಡುಗಡೆಗೊಳಿಸಲಾಗಿತ್ತು. ಇವರನ್ನೆಲ್ಲಾ ಅಫ್ಘಾನಿಸ್ಥಾನದ ಉತ್ತರ ಭಾಘ್ಲಾನ್ ಪ್ರಾಂತ್ಯದ ನಗರ ಒಂದರಲ್ಲಿ ಒತ್ತೆಸೆರೆಯಾಗಿರಿಸಲಾಗಿತ್ತು.

ಮೂವರು ಭಾರತೀಯರ ಸಹಿತ ಓರ್ವ ಆಸ್ಟ್ರೇಲಿಯನ್ ಮತ್ತು ಓರ್ವ ಅಮೆರಿಕಾ ಪ್ರಜೆ ಸೇರಿದಂತೆ ತಾಲೀಬಾನ್ ವಶದಲ್ಲಿರುವ ಐವರು ವಿದೇಶಿ ಒತ್ತೆಸೆರೆಯಾಳುಗಳನ್ನು ಬಿಡುಗಡೆಗೊಳಿಸುವಂತೆ ಅಮೆರಿಕಾದ ವಿಶೇಷ ರಾಯಭಾರಿ ತಾಲೀಬಾನ್ ನಾಯಕರ ತಮ್ಮ ಚರ್ಚೆಯ ಸಂದರ್ಭದಲ್ಲಿ ಅಮೆರಿಕಾ ಪರವಾಗಿ ಒತ್ತಡವನ್ನು ಹೇರಿದ್ದರು.

ಅಫ್ಘಾನಿಸ್ಥಾನದಲ್ಲಿ 18 ವರ್ಷಗಳ ಸೇನಾ ಕಾರ್ಯಾಚರಣೆಯನ್ನು ಹಿಂಪಡೆದುಕೊಳ್ಳುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ ಬಳಿಕ ತಾಲೀಬಾನ್ ಮತ್ತು ಅಮೆರಿಕಾ ನಡುವೆ ಶಾಂತಿ ಮಾತುಕತೆಗಳು ವೇಗ ಪಡೆದುಕೊಂಡಿವೆ.

Advertisement

Udayavani is now on Telegram. Click here to join our channel and stay updated with the latest news.

Next