Advertisement

ಮೂರು ಮಿಡತೆಗಳು

09:50 PM Jul 22, 2019 | mahesh |

ಡಾರ್ವಿನ್‌ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದ ದಿನಗಳು. ಮಿಡತೆಗಳ ಬಗ್ಗೆ ಅವನಿಗೆ ಅಪಾರ ಆಸಕ್ತಿ. ಪ್ರಕೃತಿಯ ಗುಟ್ಟುಗಳ ಬೀಗ ಒಡೆಯಲು ಮಿಡತೆಗಳೇ ಕೀಲಿಕೈ ಎಂದು ಆತ ಭಾವಿಸಿದ್ದ. ಕೇಂಬ್ರಿಡ್ಜ್ನ ಪರಿಸರದಲ್ಲಿ ಅದೊಂದು ದಿನ ದೊಡ್ಡ ಮರದ ಕಾಂಡದ ಬಳಿ ಹುಡುಕುತ್ತಿದ್ದಾಗ ಡಾರ್ವಿನ್‌ಗೆ ಒಂದಲ್ಲ ಎರಡು ವಿಶೇಷ ಮಿಡತೆಗಳು ಕಂಡವು. ಅಂಥವನ್ನು ಅವನು ಹಿಂದೆಂದೂ ಕಂಡಿರಲಿಲ್ಲ. ತಕ್ಷಣ ಕಾರ್ಯಪ್ರವೃತ್ತನಾದ ಆತ ತನ್ನ ಎರಡೂ ಕೈಗಳಿಂದ ಅವನ್ನು ಗಬಕ್ಕನೆ ಹಿಡಿದುಬಿಟ್ಟ. ಹೀಗೆ ಎರಡು ಮುಷ್ಟಿಗಳಲ್ಲಿ ಎರಡು ಮಿಡತೆಗಳನ್ನು ಹಿಡಿದು ಇನ್ನೇನು ಎದ್ದುನಿಲ್ಲಬೇಕು ಎಂಬಷ್ಟರಲ್ಲಿ ಅವನಿಗೆ ಮೂರನೆಯ ಜಾತಿಯೊಂದು ಕಾಣಿಸಿಕೊಂಡಿತು. ತನ್ನ ಬಲಗೈಯ ಮುಷ್ಟಿ ತೆರೆದು ಮಿಡತೆಯನ್ನು ಬಾಯೊಳಗೆ ಹಾಕಿಕೊಂಡು ಮೂರನೆಯ ಮಿಡತೆ ಹಿಡಿಯಲು ಹಾರಿದ ಡಾರ್ವಿನ್‌. ಆದರೆ,  ಬಾಯೊಳಗೆ ಬಂಧಿಯಾಗಬೇಕಿದ್ದ  ಮಿಡತೆ ಕೂಡ ಅಷ್ಟೇ ಕ್ಷಿಪ್ರವಾಗಿ ತನ್ನ ಜಾಣ್ಮೆ ತೋರಿಸಿತು. ಡಾರ್ವಿನ್‌ನ ಬಾಯಿಗೆ ತನ್ನ ಕಹಿ ದ್ರಾವಣವನ್ನು ಉಗುಳಿ ಅದು ಮಿಂಚಿನಂತೆ ತಪ್ಪಿಸಿಕೊಂಡಿತು. ಈ ಗಡಿಬಿಡಿಯಲ್ಲಿ ಮೂರನೇ ಮಿಡತೆ ಕೂಡ ತಪ್ಪಿಸಿಕೊಂಡು ಪರಾರಿಯಾಯಿತು.

Advertisement

ರೋಹಿತ್‌ ಚಕ್ರತೀರ್ಥ

Advertisement

Udayavani is now on Telegram. Click here to join our channel and stay updated with the latest news.

Next