Advertisement

ಶಾಲೆಗೆ ಬಣ್ಣ ಬಳಿದ ಮೂರು ತಲೆಮಾರಿನ ವಿದ್ಯಾರ್ಥಿಗಳು

12:07 PM May 20, 2019 | pallavi |

ಬೆಳಗಾವಿ: ಜೈಲು ಶಾಲೆ ಎಂದೇ ಕರೆಯಲ್ಪಡುವ ಇಲ್ಲಿಯ ವಡಗಾವಿಯ 14ನೇ ಸಂಖ್ಯೆಯ ಶಾಲೆ ರವಿವಾರ ವಿಶಿಷ್ಟ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ವಿನೂತನ ಕಾರ್ಯಕ್ರಮ ನಡೆಸಿ ಗಮನ ಸೆಳೆದರು.

Advertisement

ಸುಮಾರು 20 ದಿನದ ಹಿಂದೆ ಅಭಯ ಪಾಟೀಲ ಅವರು ಹಳೆಯ ವಿದ್ಯಾರ್ಥಿಗಳಿಂದ ಶಾಲೆಗೆ ಬಣ್ಣ ಬಳಿಯುವ ಕಾರ್ಯಕ್ರಮ ಇಂದು ಮುಂದುವರಿದು ಮೂರು ತಲೆಮಾರಿನವರು ಮತ್ತು ಒಂದೇ ಮನೆಯ ನಾಲ್ವರು ಪಾಲ್ಗೊಂಡಿದ್ದರು. 1948ರಿಂದ ಇಲ್ಲಿ ಕಲಿತ ಅನೇಕರು ಶಾಲೆಗೆ ಬಂದು ಬಣ್ಣ ಬಳಿಯುವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಒಂದು ಕುಟುಂಬದ ತಂದೆ, ಮಗ, ಮೊಮ್ಮಗ ಮತ್ತು ಮೊಮ್ಮಗಳು ಬಣ್ಣ ಬಳಿಯುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಿತ್ತೂರು ಎಂಬ ಕುಟುಂಬದ 8 ಜನ ಇದೇ ಶಾಲೆಯಲ್ಲಿ ಕಲಿತಿದ್ದು, ಅವರಲ್ಲಿ ನಾಲ್ವರು ಭಾನುವಾರ ಆಗಮಿಸಿ ಬಣ್ಣ ಬಳಿದರು. ಇಂಥದ್ದೊಂದು ವಿಶಿಷ್ಟ ಕಾರ್ಯಕ್ರಮ ಮಾಡುವ ಉದ್ದೇಶ ಬೇರೆ ಕಡೆಗಳಲ್ಲೂ ತಾವು ಕಲಿತ ಶಾಲೆಗಾಗಿ ಜನರು ಏನಾದರೂ ಕೊಡುಗೆ ನೀಡುವ ಪ್ರೇರಣೆ ನೀಡುವುದಾಗಿದೆ. ನಾವು ಬಣ್ಣ ಬಳಿಯುವ ಈ ಅಪರೂಪದ ಕಾರ್ಯಕ್ರಮ ಆರಂಭಿಸಿದ ಬಳಿಕ ದೇಶದ ಬೇರೆ ಬೇರೆ ಭಾಗಗಳಲ್ಲಿಯ ಜನರು ಕರೆ ಮಾಡುತ್ತಿದ್ದಾರೆ. ಅನೇಕ ಕಡೆ ಹಳೆಯ ವಿದ್ಯಾರ್ಥಿಗಳು ಈಗಾಗಲೇ ಬಣ್ಣ ಬಳಿಯಲು ಆರಂಭಿಸಿದ್ದಾರೆ ಎಂದು ಅಭಯ ಪಾಟೀಲ ತಿಳಿಸಿದರು.

20 ದಿನದಿಂದ ಪ್ರತಿ ದಿನ ಬೆಳಗ್ಗೆ 6 ಗಂಟೆಯಿಂದ 8 ಗಂಟೆವರೆಗೆ ಬಣ್ಣ ಬಳಿಯಲಾಗುತ್ತಿದೆ. ಕ್ಷೇತ್ರದ ಸುಮಾರು 60 ಶಾಲೆಗಳಿಗೆ ಬಣ್ಣ ಬಳಿಯಲಾಗುವುದು. ಅನೇಕರು ತಾವಾಗಿಯೇ ಸ್ವಯಂ ಸ್ಫೂರ್ತಿಯಿಂದ ಬಂದು ಪಾಲ್ಗೊಳ್ಳುತ್ತಿದ್ದಾರೆ ಎಂದು ಗಜಾನನ ಗುಂಜೇರಿ ತಿಳಿಸಿದರು. ವಡಗಾವಿ ಭಾಗದ ವೃದ್ಧರು, ಮಹಿಳೆಯರು ಸೇರಿದಂತೆ ನೂರಾರು ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಅಪರೂಪದ ಕಾರ್ಯಕ್ರಮ ನೋಡಿ ಕೆಲವು ಹಿರಿಯರು ಸ್ಥಳದಲ್ಲಿಯೇ ತಮ್ಮ ಬಳಿ ಇದ್ದ ಹಣವನ್ನು ದೇಣಿಗೆ ನೀಡುವ ಮೂಲಕ ಈ ಕಾರ್ಯಕ್ರಮಕ್ಕೆ ಕೈ ಜೋಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next