Advertisement

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು

05:08 PM Sep 25, 2020 | keerthan |

ಮಣಿಪಾಲ:  ಸ್ವರಮಾಣಿಕ್ಯ ಎಸ್ ಪಿಬಿ ಹೆಸರು ಕೇಳಿದಾಕ್ಷಣ, ನಿಮ್ಮ ಮನಸ್ಸಿನಲ್ಲಿ  ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.

Advertisement

ಅನುಶಾ ಶಿವರಾಜ್:  ಪವಡಿಸೂ ಪರಮಾತ್ಮ ಶ್ರೀ ವೆಂಕಟೇಶ.., ನೂರೊಂದು ನೆನಪು ಎದೆಯಾಳದಿಂದ..,  ಆನಂದ ಪರಮಾನಂದ- ಶ್ರೀ ಮಂಜುನಾಥ, ಈ ಸುಂದರ ಬೆಳದಿಂಗಳ..- ಅಮೃತ ವರ್ಷಿಣಿ

ಗಾನಕ್ಕೆ ಸ್ಫೂರ್ತಿ ನೀವು. ಸಂಗೀತಕ್ಕೆ ಇನ್ನೊಂದು ಹೆಸರೇ ನೀವು… ನಿಮಗೆ ನೀವೇ ಸಾಟಿ. ಮರಳಿ ಬನ್ನಿ ಸರ್.

ಶಿವು ಕಡೆಮನಿ: ಅವರು ಹಾಡಿರುವಂತ ಹಾಡುಗಳು ಒಂದು ಎರಡ ಇಷ್ಟ ಪಡದೇ ಇರೋಕೆ ಪ್ರತಿ ಹಾಡುಗಳು ಇಷ್ಟ ಯಾಕೆಂದರೆ ಅವರ ಧ್ವನಿಯಲ್ಲಿ ಇರುವ ಸೆಳೆತದ ಶಕ್ತಿನೆ ಬೆರೆ ಎಂದು ಮರೆಯದ ಮಾಣಿಕ್ಯ ಎಸ್.ಪಿ.ಬಿ

ಮೋಹನ್ ಕರ್ಕೇರ:  ಜೀವ ವೀಣೆ ನೀಡು ಮಿಡಿತದ ಸಂಗೀತ , ನಗುವ ನಯನ ಮಧುರ ಮೌನ , ಕನ್ನಡ ನಾಡಿನ ಜೀವನದಿ ಈ ಕಾವೇರಿ ,ಈ ಭೂಮಿ ಬಣ್ಣದ ಬುಗುರಿ….. ಇತ್ಯಾದಿ

Advertisement

ಅಂಜೆನಿ ಆಶ್ವಿನಿ: ಹಾಡುವ ಕೋಗಿಲೆ ಮೂಕವಾಗಿ ಇಹ ಲೋಕ ತ್ಯಜಿಸಿ ದೈಹಿಕವಾಗಿ ದೂರವಾದರೂ ಅವರ ಕಂಠಸಿರಿಯ ಮಾಧುರ್ಯದಲ್ಲಿ ಅಜರಾಮರವಾದ ಗಾನಗಂಧರ್ವ ನೆಚ್ಚಿನ ಗಾಯಕರಾದ ಎಸ್.ಪಿ.ಬಾಲಸುಬ್ರಹ್ಮಣ್ಯಂ ರವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಮತ್ತೆ ಹುಟ್ಟಿ ಬನ್ನಿ ನಿಮ್ಮ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ.

ಸುಧಾ ಕೊಪ್ಪದ್: ನೂರೊಂದು ನೆನಪು ಎದೆಯಾಳದಿಂದ , ಈ ಭೂಮಿ ಬಣ್ಣದ ಬುಗುರಿ, ಕುಚಿಕು ಕುಚಿಕು ಕುಚಿಕು ನೀನು ಚಡ್ಡಿ ದೋಸ್ತಿ ಕಣೋ ಕುಚಿಕು.

ರೋಹಿಣಿ ಪುರಾಣಿಕ್: ನಗುವ ನಯನ ಮಧುರ ಮೌನ,  ಜೊತೆ ಜೊತೆಯಲ್ಲಿ ಇರುವೆನು, ಜೀವ ವೀಣೆ ನೀಡು ಮಿಡಿತದ ಸಂಗೀತ..ಅಸಂಖ್ಯಾತ ಹಾಡುಗಳು.

ಗಣೇಶ್ ಪೂಜಾರಿ: 97 98 ರ ಇಸವಿಯಲ್ಲಿ ನಾನು ಬೆಳಗಾಮ್ ನಲ್ಲಿ ಇದ್ದೆ ಹೊಸದಾಗಿ ಬರುವ ಭಕ್ತಿಗೀತೆ ಕನ್ನಡ ಚಿತ್ರಗೀತೆಗಳ ಕ್ಯಾಸೆಟ್ಟನ್ನು ಕೊಂಡು ಕೊಡುತ್ತಿದ್ದೆ ಆ ಕ್ಯಾಸೆಟ್ ನಲ್ಲಿ ಎಸ್ಸಿ ಅವರ ಭಾವಚಿತ್ರ ಇದ್ದರೆ ಸಾಕು ಅವರ ಹಾಡುಗಳು ಮರೆಯಲು ಸಾಧ್ಯವಿಲ್ಲ

ದಯಾನಂದ ಕೊಯಿಲಾ:  ಶಂಕರಾ ನಾದ ಶರೀರಾ ಪರಾ., ಗಾನ ವಿನೋದಂ ನಾಟ್ಯ ವಿಲಾಸಂ., ತಾಳಿಕಟ್ಟುವ ಶುಭ ವೇಳೆ ಕೈಯಲ್ಲಿ ಹೂವಿನ ಮಾಲೆ.

ರಾಜೇಶ್ ರಾಜ್:  ನೀನು ನೀನೆ.. ಗಡಿಬಿಡಿ ಗಂಡ

ಮನಸೇ ಬದುಕು… ಅಮೃತವರ್ಷಿಣಿ

ಏನೇ ಕೇಳು ಕೊಡುವೆ.. ಗೀತಾ

Advertisement

Udayavani is now on Telegram. Click here to join our channel and stay updated with the latest news.

Next