Advertisement

ಕಿರಾಣಿ ಖರೀದಿಗೆ ಮೂರು ದಿನ ಅವಕಾಶ

06:26 PM May 26, 2021 | Team Udayavani |

ಧಾರವಾಡ: ಕೊರೊನಾ ನಿಯಂತ್ರಿಸಲು ಕಠಿಣ ಲಾಕ್‌ ಡೌನ್‌ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಜನತೆಗೆ ಕಿರಾಣಿ, ಮಾಂಸದ ಪದಾರ್ಥಗಳನ್ನು ಪೂರೈಸಲು ಮೇ 27 ಗುರುವಾರ, ಮೇ 28 ಶುಕ್ರವಾರ ಹಾಗೂ ಮೇ 29 ಶನಿವಾರ ಬೆಳಗ್ಗೆ 6ರಿಂದ ಮಧ್ಯಾಹ್ನ 12 ಗಂಟೆವರೆಗೆ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ತಿಳಿಸಿದ್ದಾರೆ.

Advertisement

ಹೆಚ್ಚು ಜನದಟ್ಟಣೆಯಾಗಬಾರದು ಎಂಬ ಉದ್ದೇಶದಿಂದ ಕಿರಾಣಿ ಹಾಗೂ ಮಾಂಸ ಮಾರಾಟದ ಸಮಯದ ಅವ ಧಿ ವಿಸ್ತರಿಸಲಾಗಿದೆ. ಹುಬ್ಬಳ್ಳಿ ಹಾಗೂ ಧಾರವಾಡದ ಕಿರಾಣಿ ವರ್ತಕರೊಂದಿಗೆ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜನರು ಏಕಕಾಲಕ್ಕೆ ಅಂಗಡಿಗಳ ಮುಂದೆ ಜನಸಂದಣಿ ಉಂಟು ಮಾಡದೇ ಪ್ರತ್ಯೇಕವಾಗಿ ಬಂದು ಕೋವಿಡ್‌ ಸುರಕ್ಷತಾ ಕ್ರಮಗಳೊಂದಿಗೆ ಕಿರಾಣಿ, ಮಾಂಸದ ಪದಾರ್ಥಗಳನ್ನು ಖರೀದಿಸಬೇಕು.

ಈ ಮೂರು ದಿನಗಳ ಅವಕಾಶದ ನಂತರ ಕಠಿಣ ಲಾಕ್‌ಡೌನ್‌ ಅವ ಧಿ ಪೂರ್ಣಗೊಂಡ ಬಳಿಕ ಅಂದರೆ ಜೂ. 7ರ ನಂತರವೇ ಈ ವಸ್ತುಗಳು ದೊರೆಯಲಿವೆ. ತರಕಾರಿ ಮತ್ತು ಹಾಲು ಮಾರಾಟಕ್ಕೆ ಪ್ರತಿದಿನ ಬೆಳಗ್ಗೆ 6ರಿಂದ 8ರ ವರೆಗೆ ಅವಕಾಶ ಇರುವುದರಿಂದ ಇವುಗಳ ಪೂರೈಕೆ ಎಂದಿನಂತೆಯೇ ಇರುತ್ತದೆ. ಇವುಗಳ ಸಮಯದಲ್ಲಿ ಬದಲಾವಣೆಯಿಲ್ಲ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಮುನ್ನ ಜಿಲ್ಲೆಯಲ್ಲಿ ಕಿರಾಣಿ, ಮಾಂಸ ಖರೀದಿಗೆ ಮೇ 27 ಗುರುವಾರ ಮತ್ತು ಮೇ 28 ಶುಕ್ರವಾರ ಮಾತ್ರ ಅದೂ ಬೆಳಗ್ಗೆ 6ರಿಂದ 10 ಗಂಟೆವರೆಗೆ ಅವಕಾಶ ನೀಡಲಾಗಿತ್ತು. ಇದೀಗ ಜಿಲ್ಲಾಧಿಕಾರಿಗಳು ಪರಿಷ್ಕೃತ ಆದೇಶ ಹೊರಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next