Advertisement

ಕೊಪ್ಪಳ: ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದ ಮೂವರು ಸೋಂಕಿತರು ಇಂದು ಸಾವು

05:24 PM Jul 24, 2020 | keerthan |

ಕೊಪ್ಪಳ: ಜಿಲ್ಲೆಯಲ್ಲಿ ಒಂದೇ ದಿನ ಮೂವರು ಕೋವಿಡ್-19 ಸೋಂಕಿಗೆ ಬಲಿಯಾಗಿದ್ದು, ಜಿಲ್ಲೆಯ ಜನರಲ್ಲಿ ಭಾರಿ ಆತಂಕ ಮೂಡಿಸಿದೆ. ಈ ಮೂಲಕ ಸಾವಿನ ಸಂಖ್ಯೆಯು 17ಕ್ಕೆ ಏರಿಕೆಯಾಗಿದೆ.

Advertisement

ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಇಬ್ಬರು ಸೋಂಕಿನಿಂದ ಬಳಲಿ ಸಾವನ್ನಪ್ಪಿದ್ದರೆ, ಮಧ್ಯಾಹ್ನ ಮತ್ತೋರ್ವ ಸೋಂಕಿಗೆ ಬಲಿಯಾಗಿದೆ.

ಕಾರಟಗಿಯ 70 ವರ್ಷದ ಮಹಿಳೆ, ಕೊಪ್ಪಳದ 49 ವರ್ಷದ ವ್ಯಕ್ತಿ ಹಾಗೂ ಕೊಪ್ಪಳ ತಾಲೂಕಿನ ಕುಣಕೇರಿಯ 60 ವರ್ಷದ ವೃದ್ದ ಸೇರಿ ಮೂವರು ಕೋವಿಡ್ ಸೋಂಕಿಗೆ ಸಾವನ್ನಪ್ಪಿದ್ದಾರೆ‌.

ಅಚ್ಚರಿ ಎಂಬಂದೇ ಈ ಮೂರು ಸೋಂಕಿತರು ನಿನ್ನೆಯಷ್ಟೆ ಆಸ್ಪತ್ರೆಗೆ ದಾಖಲಾಗಿದ್ದರು‌. ಇಂದು ಸಾವನ್ನಪ್ಪಿದ್ದಾರೆ‌. ಇದು ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next