Advertisement

ಗೋವೆಯಲ್ಲಿ ರೇಪ್‌ ಆರೋಪಿ ಪರಾರಿ: ಮೂವರು ಪೊಲೀಸರು ಅಮಾನತು

11:46 AM Dec 11, 2018 | Team Udayavani |

ಪಣಜಿ : ಅತ್ಯಾಚಾರ ಪ್ರಕರಣದಲ್ಲಿ ಅರೆಸ್ಟ್‌ ಆಗಿದ್ದ  ಆರೋಪಿಯೊಬ್ಬ ಪೊಲೀಸ್‌ ಕಸ್ಟಡಿಯಿಂದ ಪರಾರಿಯಾದುದನ್ನು ಅನುಸರಿಸಿ ಮೂವರು ಪೊಲೀಸರನ್ನು ಅಮಾನತುಗೊಳಿಸಲಾಗಿರುವ ಘಟನೆ ಗೋವೆಯಿಂದ ವರದಿಯಾಗಿದೆ.

Advertisement

ಈ ವರ್ಷ ಮೇ ತಿಂಗಳಲ್ಲಿ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಕಾರಣಕ್ಕೆ ಬಂಧಿತನಾಗಿದ್ದ ಆರೋಪಿ, 24ರ ಹರೆಯದ ಈಶ್ವರ್‌ ಮಕ್ವಾನಾ ನನ್ನು ಪೊಲೀಸರು ಹೃದ್ರೋಗ ಮತ್ತು ಟಿಬಿ ಚಿಕಿತ್ಸಾಲಯಕ್ಕೆ ಕರೆತರುತ್ತಿದ್ದಾಗ ಆತ ಪರಾರಿಯಾದ.

ಕರ್ತವ್ಯ ನಿರ್ಲಕ್ಷ್ಯಕ್ಕಾಗಿ ಹೆಡ್‌ ಕಾನ್‌ಸ್ಟೆಬಲ್‌ ರಾಜೇಂದ್ರ ತಾಮ್‌ಶೇ, ಕಾನ್‌ಸ್ಟೆಬಲ್‌ಗ‌ಳಾದ ಲಾದು ರವೂಲ್‌ ಮತ್ತು ಸಂಜಯ್‌ ಖಾಂಡೇಪಾರ್‌ಕರ್‌ ಅವರನ್ನು ಅಮಾನತುಗೊಳಿಸಲಾಯಿತು ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next