Advertisement

ಮೂವರು ಪೊಲೀಸರು ಸೋಂಕಿಗೆ ಬಲಿ

04:31 PM Jul 27, 2020 | Suhan S |

ಮುಂಬಯಿ, ಜು. 26: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್  ಸೋಂಕಿನಿಂದ ಮೂವರು ಪೊಲೀಸರು ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 93ಕ್ಕೆ ತಲುಪಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೂವರಲ್ಲಿ ಒಬ್ಬರು ಮುಂಬಯಿ ಮೂಲದವರಾಗಿದ್ದು, ಈವರೆಗೆ ಮುಂಬಯಿಯಲ್ಲಿ 53 ಮಂದಿ ಪೊಲೀಸರು ಮೃತಪಟ್ಟಿದ್ದಾರೆ.

Advertisement

ಮುಂಬಯಿ, ಥಾಣೆ ಮತ್ತು ಸತಾರಾ ಪೊಲೀಸ್‌ ಕಮಿಷನರೇಟ್‌ ಗಳ ಕಾನ್‌ಸ್ಟಾಬ್ಯುಲರಿಯ ಮೂವರು ಪೊಲೀಸರು ಸೋಂಕಿನಿಂದ ಸಾವನ್ನಪ್ಪಿದ್ದು, ಇವರೆಲ್ಲರೂ 50 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರು ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಸಹಾಯಕ ಪೊಲೀಸ್‌ ಇನ್ಸ್‌ಪೆಕ್ಟರ್‌ ಜನರಲ್‌ ವಿನಾಯಕ್‌ ದೇಶ್ಮುಖ್‌ ಶನಿವಾರ ಖಚಿತಪಡಿಸಿದ್ದಾರೆ.

ಮುಂಬಯಿ ಪೊಲೀಸ್‌ ಇಲಾಖೆಯಲ್ಲಿ 3,600ಕ್ಕೂ ಅಧಿಕ ಕೋವಿಡ್ ಪ್ರಕರಣಗಳು ಕಂಡುಬಂದಿದ್ದು, ಗರಿಷ್ಠ ಪ್ರಕರಣಗಳನ್ನು ಹೊಂದಿದೆ, ಎರಡನೇ ಸ್ಥಾನದಲ್ಲಿ ಥಾಣೆ ಪೊಲೀಸರು ಇದ್ದಾರೆ. ರಾಜ್ಯಾದ್ಯಂತ ಒಟ್ಟು 8,232 ಪೊಲೀಸರು ಸೋಂಕಿಗೆ ಒಳಗಾಗಿದ್ದು, ಇದರಲ್ಲಿ 861 ಅಧಿಕಾರಿಗಳು ಮತ್ತು 7,371 ಕಾನ್‌ಸ್ಟೆಬಲ್‌ಗ‌ಳು ಸೇರಿದ್ದಾರೆ. ಅವರಲ್ಲಿ 6,314 ಮಂದಿ ಚೇತರಿಸಿಕೊಂಡಿಡು, ಕರ್ತವ್ಯಕ್ಕೆ ಮರಲಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ವಿನೋಯ್‌ ಕುಮಾರ್‌ ಚೌಬೆ ಅವರು ಸೋಂಕಿಗೆ ಒಳಗಾದ ಅಧಿಕಾರಿಗಳಲ್ಲಿ ಸೇರಿದ್ದಾರೆ.

ಪೊಲೀಸ್‌ ಪಡೆಯಲ್ಲಿ ಸೋಂಕು ಹರಡುವುದನ್ನು ತಡೆಗಟ್ಟಲು ಪೊಲೀಸ್‌ ಇಲಾಖೆ ಅನೇಕ ಕ್ರಮಗಳನ್ನು ತೆಗೆದುಕೊಂಡಿದ್ದು,ಮರಣ ಪ್ರಮಾಣವನ್ನು ಕಡಿಮೆ ಮಾಡಲು ವಯಸ್ಸಾದ ಪೊಲೀಸರಿಗೆ ಮನೆಯಲ್ಲಿಯೇ ಇರಲು ಅವಕಾಶ ಮಾಡಿಕೊಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next