Advertisement

Vadodara ; ಗಾರ್ಬಾ ಸಂಭ್ರಮಿಸಲು ಹೋಗುತ್ತಿದ್ದ 16 ವರ್ಷದ ಬಾಲಕಿಯ ರೇ*ಪ್!

06:01 PM Oct 07, 2024 | Team Udayavani |

ವಡೋದರಾ: ಗುಜರಾತ್‌ನ ವಡೋದರಾದಲ್ಲಿ 16 ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಘಟನೆ ನಡೆದಿದೆ.

Advertisement

ಕೃತ್ಯ ನಡೆದ 48 ಗಂಟೆಗಳ ಒಳಗೆ ಮೂವರು ಆರೋಪಿಗಳನ್ನು ಬಂಧಿಸಲಾಗಿಗೆ 1,100 ಸಿಸಿಟಿವಿ ಕೆಮರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿ ಕಾರ್ಯಾಚರಣೆಯಲ್ಲಿ ಯಶಸ್ಸು ಸಾಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಬಂಧಿತ ಆರೋಪಿಗಳು ಮೂಲತಃ ಉತ್ತರ ಪ್ರದೇಶಕ್ಕೆ ಸೇರಿದವರಾಗಿದ್ದು, ಹತ್ತು ವರ್ಷಗಳಿಂದ ವಡೋದರಾದಲ್ಲಿ ನೆಲೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅವರನ್ನು ಮುನ್ನಾ ವಂಝಾರ (27), ಮುಮ್ತಾಜ್ ವಂಝಾರ (36) ಮತ್ತು ಶಾರುಖ್ ವಂಝಾರ (36) ಎಂದು ಗುರುತಿಸಲಾಗಿದೆ.

ಮೂವರೂ ವಡೋದರಾ ನಗರದಲ್ಲಿ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ನರಸಿಂಹ ಕೋಮಾರ್ ಸುದ್ದಿಗಾರರಿಗೆ ತಿಳಿಸಿದರು.

ನವರಾತ್ರಿಯ ಸಂಭ್ರಮದ ರಾತ್ರಿ ನಗರದ ಹೊರವಲಯದಲ್ಲಿ ಗರ್ಬಾ ಆಚರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಹೋಗುತ್ತಿದ್ದ ವೇಳೆ  ಹದಿಹರೆಯದ ಹುಡುಗಿ ನಿರ್ಜನ ಪ್ರದೇಶದಲ್ಲಿ ಆಕೆಯ ಸ್ನೇಹಿತನೊಂದಿಗೆ ಹೋಗುತ್ತಿದ್ದಳು. ಈ ವೇಳೆ ಮೂವರು ತಡೆದು ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಪೊಲೀಸರ ಪ್ರಕಾರ, ಎರಡು ಬೈಕ್ ಗಳಲ್ಲಿ ಬಂದ ಐವರು ಹುಡುಗಿ ಮತ್ತು ಆಕೆಯ ಸ್ನೇಹಿತನನ್ನು ತಡೆದಿದ್ದು ಅವರಲ್ಲಿ ಇಬ್ಬರು ಸ್ಥಳದಿಂದ ತೆರಳಿದ್ದರು. ಮೂವರು ಅಪರಾಧ ಎಸಗಿದ್ದ, ಸಂತ್ರಸ್ತೆಯ ಮೊಬೈಲ್ ಫೋನ್ ಅನ್ನು ಕಸಿದುಕೊಂಡು ವಿಚಾರ ಬಹಿರಂಗಪಡಿಸದಂತೆ ಬೆದರಿಕೆ ಹಾಕಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಪ್ರದೇಶವನ್ನು ಸುತ್ತುವರೆದಿದ್ದು, ಶೋಧ ಆರಂಭಿಸಿದ್ದರು. ಈ ಘಟನೆಯು ಭಾರೀ ಕೋಲಾಹಲಕ್ಕೆ ಕಾರಣವಾಗಿದ್ದು, ಕೋಮು ವಿಚಾರವಾಗಿಯೂ ತಿರುಗಿದೆ. ನವರಾತ್ರಿ ಹಬ್ಬವನ್ನು ಆಚರಿಸಲು ರಾತ್ರಿ ವೇಳೆ ಹೊರಗೆ ಹೋಗುವ ಜನರ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನೂ ಹುಟ್ಟುಹಾಕಿದ್ದು ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next