Advertisement

ಅಹ್ಮದಾಬಾದ್‌: ಬೆಂಕಿ ಹೊತ್ತಿಕೊಂಡ ಕಾರು, ಮೂವರು ಸುಟ್ಟು ಕರಕಲು

10:29 AM Mar 08, 2018 | udayavani editorial |

ಅಹ್ಮದಾಬಾದ್‌ : ಇಲ್ಲಿನ ರಿಂಗ್‌ ರೋಡ್‌ನ‌ಲ್ಲಿರುವ  ಭಡಾಜ್‌ ವೃತ್ತದ ಸಮೀಪ ವೇಗವಾಗಿ ಸಾಗುತ್ತಿದ್ದ ಕಾರು ಇನ್ನೊಂದು ಕಾರಿಗೆ ಢಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡು ಉರಿದ ಪರಿಣಾಮವಾಗಿ ಅದರೊಳಗಿದ್ದ ಮೂವರು ಸುಟ್ಟು ಕರಕಲಾದರು; ಇನ್ನಿಬ್ಬರಿಗೆ ತೀವ್ರ ಸುಟ್ಟ ಗಾಯಗಳಾಗಿ ಅವರನ್ನು ಸಮೀಪದ ಆಸ್ಪತ್ರೆಗೆ ಸೇರಿಸಲಾಯಿತು. 

Advertisement

ವರದಿಗಳ ಪ್ರಕಾರ ಫೋಕ್ಸ್‌ವ್ಯಾಗನ್‌ ಕಾರು ರಿಂಗ್‌ ರೋಡ್‌ನ‌ಲ್ಲಿ ಇನ್ನೊಂದು ಕಾರಿಗೆ ಢಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡಿತು. ಅದರೊಳಗಿದ್ದವರ ಪೈಕಿ ಮೂವರು  ಹೊರ ಬರಲಾರದೆ ಸುಟ್ಟು ಕರಕಲಾದರು. ಇನ್ನಿಬ್ಬರಿಗೆ ಹೇಗೋ ಪ್ರಯಾಸದಿಂದ ಕಾರಿನಿಂದ ಹೊರಬರಲು ಸಾಧ್ಯವಾದರೂ ಅವರಿಗೆ ತೀವ್ರ ಸುಟ್ಟ ಗಾಯಗಳಾದವು. 

ಮೃತರನ್ನು ರಾರೋಲ್‌ ಬಾರ್ಡ್‌, ರಾಯಲ್‌ ಪಟ್ವಾ ಮತ್ತು ಢೇರಿ ಪಟೇಲ್‌ ಎಂದು ಗುರುತಿಸಲಾಗಿದೆ. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next