Advertisement

ಮೂರು ಜನ ಬೈಕ್‌ ಕಳ್ಳರ ಬಂಧನ: ಆರು ಬೈಕ್‌ ಜಪ್ತಿ

05:36 PM Sep 03, 2022 | Team Udayavani |

ಮಸ್ಕಿ: ವಿವಿಧೆಡೆಯಲ್ಲಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾದ ಮೂವರು ಆರೋಪಿಗಳನ್ನು ಮಸ್ಕಿ ಪೊಲೀಸರು ಬಂಧಿಸಿದ್ದಾರೆ.

Advertisement

ಕಳೆದ ಒಂದು ತಿಂಗಳಿಂದ ಪಟ್ಟಣ ಸೇರಿ ನಾನಾ ಕಡೆಗಳಲ್ಲಿ ನಿರಂತರ ದ್ವಿಚಕ್ರ ವಾಹನಗಳ ಸರಣಿ ಕಳ್ಳತನ ನಡೆದಿದ್ದವು. ಸುಮಾರು 8-10 ಪ್ರತ್ಯೇಕ ಕೇಸ್‌ ಗಳು ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದವು. ಬೈಕ್‌ ಕಳ್ಳರ ಪತ್ತೆಗೆ ಪಿಎಸ್‌ಐ ಸಿದ್ರಾಮ ಬಿದರಾಣಿ ನೇತೃತ್ವದಲ್ಲಿ ಪೊಲೀಸರ ತಂಡ ರಚನೆ ಮಾಡಲಾಗಿತ್ತು. ತನಿಖೆಯ ಬೆನ್ನು ಹತ್ತಿದ ಪೊಲೀಸರಿಗೆ ಸುರುಪುರ ತಾಲೂಕಿನ ತೋಟವೊಂದರಲ್ಲಿ ಮೂರು ಜನ ಕಳ್ಳರು, ಕದ್ದ ಬೈಕ್‌ಗಳೊಂದಿಗೆ ಸಿಕ್ಕಿಬಿದ್ದಿದ್ದಾರೆ.

ಅಮರೇಶ ಮಸ್ಕಿ, ಬೇಡರ ಕಾರಲಕುಂಟಿ ನಿವಾಸಿ ನಿರಾಪಾದೆಪ್ಪ ಗ್ಯಾನಪ್ಪ ಮತ್ತು ನಿರುಪಾದಿ ಮಲ್ಲಪ್ಪ ಬಂಧಿತ ಆರೋಪಿಗಳು. ವಿಚಾರಣೆ ವೇಳೆ ಇವರು ನಾನಾ ಕಡೆ ಬೈಕ್‌ ಕಳ್ಳತನದಲ್ಲಿ ಭಾಗಿಯಾಗಿದ್ದಾರೆ ಎಂದು ಗೊತ್ತಾಗಿದ್ದು, ಬಂಧಿತರಿಂದ 5.20 ಲಕ್ಷ ರೂ. ಮೌಲ್ಯದ ಆರು ಬೈಕ್‌ ಜಪ್ತಿ ಮಾಡಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next