Advertisement

ಶಕ್ತಿಮಾನ್ ನಂತೆ ಸಾಹಸ ಪ್ರದರ್ಶನ ಮಾಡಲು ಹೋಗಿ ಜೈಲುಪಾಲಾದ ಮೂವರು ಯುವಕರು: ಇಲ್ಲಿದೆ ವಿಡಿಯೋ

09:31 AM May 29, 2022 | Team Udayavani |

ನೋಯ್ಡಾ: ಮೋಟಾರ್ ಬೈಕ್ ನಲ್ಲಿ ಅಪಾಯಕಾರಿ ಸಾಹಸ ಪ್ರದರ್ಶಿಸಿ ಕೃತ್ಯದ ವಿಡಿಯೋ ಚಿತ್ರೀಕರಿಸಿದ ಆರೋಪದ ಮೇಲೆ ಮೂವರು ಯುವಕರನ್ನು ನೋಯ್ಡಾ ಪೊಲೀಸರು ಶನಿವಾರ ಬಂಧಿಸಿದ್ದಾರೆ.

Advertisement

ಈ ಯುವಕರು ಕಾಲ್ಪನಿಕ ಸೂಪರ್ ಹೀರೋ ‘ಶಕ್ತಿಮಾನ್’ನನ್ನು ಅನುಕರಿಸುವ ಸಾಹಸ ಪ್ರದರ್ಶಿನ ಮಾಡಿದ್ದಾರೆ. ಅಲ್ಲದೆ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

ದ್ವಿಚಕ್ರವಾಹನದ ಸ್ಟಂಟ್‌ ನ ವಿಡಿಯೋ ಮಾಡಿದ ಆತನ ಸಹಚರರೊಂದಿಗೆ ಆರೋಪಿಗಳನ್ನು ಬಂಧಿಸಿ ಅವರ ಬೈಕ್ ವಶಪಡಿಸಿಕೊಳ್ಳಲಾಗಿದೆ. ಬಂಧಿತ ಯುವಕರನ್ನು ವಿಕಾಸ್, ಅನಿಲ್ ಮತ್ತು ಮೆಹಕ್ ಎಂದು ಗುರುತಿಸಲಾಗಿದ್ದು, ರಸ್ತೆಗಳಲ್ಲಿ ಅಡ್ಡಿಪಡಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ:ಭಾರತವು ಠಾಕ್ರೆ- ಮೋದಿಗೆ ಸೇರಿದ್ದಲ್ಲ, ಭಾರತವು..: ಅಸಾದುದ್ದೀನ್ ಓವೈಸಿ

ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಗೌತಮ್ ಬುದ್ಧನಗರದ ಪೊಲೀಸ್ ಕಮಿಷನರೇಟ್, “ವಿಕಾಸ್ ಎಂಬ ಯುವಕ ಬೈಕ್‌ನಲ್ಲಿ ಅಪಾಯಕಾರಿ ಸಾಹಸ ಮಾಡುತ್ತಿದ್ದು ಮತ್ತು ವಿಡಿಯೋ ಮಾಡಿದ ಅವನ 2 ಸಹಚರರನ್ನು (ಗೌರವ್, ಸೂರಜ್) ನೋಯ್ಡಾ ಪೊಲೀಸ್ ಠಾಣೆ ಸೆಕ್ಟರ್ -63 ರವರು ಬಂಧಿಸಿದ್ದಾರೆ. ಮತ್ತು ಸ್ಟಂಟ್‌ಗೆ ಬಳಸಿದ ಬೈಕನ್ನು ವಶಪಡಿಸಿಕೊಳ್ಳಲಾಗಿದೆ.” ಎಂದಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next