Advertisement

Threat To Writers: ಒಬ್ಬನಿಂದಲೇ ಸಾಹಿತಿಗಳಿಗೆ ಬೆದರಿಕೆ

03:18 PM Aug 30, 2023 | Team Udayavani |

ಬೆಂಗಳೂರು: ಸಾಹಿತಿಗಳಾದ ಕುಂ. ವೀರಭದ್ರಪ್ಪ, ಮಾಜಿ ಸಚಿವೆ, ಸಾಹಿತಿ ಬಿ.ಟಿ.ಲಲಿತಾ ನಾಯಕ್‌ ಸೇರಿ ಹಿರಿಯ ಸಾಹಿತಿಗಳಿಗೆ ಕೊಲೆ ಬೆದರಿಕೆ ಪತ್ರ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರಿಗೆ, ಎಲ್ಲ ಸಾಹಿತಿ ಗಳಿಗೆ ಒಬ್ಬನೇ ಪತ್ರ ಬರೆದಿರುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.

Advertisement

ದಾವಣಗೆರೆ, ಚಿತ್ರದುರ್ಗ ಅಥವಾ ಉತ್ತರ ಕರ್ನಾಟಕ ಮೂಲದ ಒಬ್ಬನೇ ವ್ಯಕ್ತಿ ಆರೇಳು ಮಂದಿ ಸಾಹಿತಿಗಳಿಗೆ ಕೊಲೆ ಬೆದರಿಕೆ ಪತ್ರ ಬರೆದಿದ್ದಾನೆ ಎಂಬುದು ಪತ್ರಗಳಲ್ಲಿರುವ ಕೈ ಬರಹ ದಿಂದ ದೃಢವಾಗಿದೆ. ಈ ಹಿನ್ನೆಲೆಯಲ್ಲಿ ಒಂದು ತಂಡ ದಾವಣಗೆರೆಯಲ್ಲಿ ಬೀಡುಬಿಟ್ಟಿದ್ದು, ಆರೋಪಿಯ ಪತ್ತೆಗಾಗಿ ಕಾರ್ಯ ನಡೆಸುತ್ತಿದೆ. ಅನಾಮಧೇಯ ವ್ಯಕ್ತಿ ಬೆದರಿಕೆ ಪತ್ರಗಳನ್ನು ಪೋಸ್ಟ್‌ ಬಾಕ್ಸ್‌ಗಳಿಂದ ಪೋಸ್ಟ್‌ ಮಾಡಿದ್ದಾನೆ. ದಾವಣಗೆರೆ ಮಾತ್ರವಲ್ಲದೆ, ಬೇರೆ ಬೇರೆ ಜಿಲ್ಲೆ, ತಾಲೂಕುಗಳಿಗೆ ತೆರಳಿ ಪೋಸ್ಟ್‌ ಮಾಡಿರುವುದು ಪತ್ತೆಯಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ದಾಖಲಾಗಿರುವ ಎಲ್ಲ ಬೆದರಿಕೆ ಪತ್ರ ಪ್ರಕರಣಗಳ ತನಿಖೆಗೆ ಬೆಂಗಳೂರು ಪೊಲೀಸ್‌ ಆಯುಕ್ತರ ನೇತೃತ್ವದಲ್ಲಿ ಸಿಸಿಬಿ ಮುಖ್ಯಸ್ಥರು ನಡೆಸಬೇಕು ಎಂದು ಡಿಜಿಪಿ ಅಲೋಕ್‌ ಮೋಹನ್‌ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next