Advertisement
ಹಳ್ಳಿ ಎಂದರೆ ಕೃಷಿ, ಕೃಷಿ ಸುತ್ತ ವೈವಿಧ್ಯಮಯ ಸಂಸ್ಕೃತಿ ಇದೆ. ಹಳ್ಳಿಯ ಜನ ಗುಳೆ ಹೋಗುವ ಮೂಲಕ ಸಾಂಸ್ಕೃತಿಕ ವೈವಿಧ್ಯತೆಗೆ ಅಪಾಯ ಒದಗಿದೆ. ಹಳ್ಳಿಯ ಜನ ಮಹಾನಗರಗಳಲ್ಲಿ ಕಳೆದು ಹೋಗುತ್ತಿದ್ದಾರೆ. ಅಲ್ಲಿ ಹೊಟ್ಟೆ ಪಾಡೇ ಮುಖ್ಯವಾಗುತ್ತದೆ. ಅಸ್ಮಿತೆ ಮುಖ್ಯವಾಗುವುದಿಲ್ಲ ಎಂದರು.
Related Articles
Advertisement
ಕೃಷಿ ಮಾತ್ರ ನಿಸರ್ಗದ ಜತೆ ಆಪ್ತವಾದ ಸಂಬಂಧ ಹೊಂದಿದ ಉದ್ಯೋಗವಾಗಿದೆ. ನಿಸರ್ಗದೊಂದಿಗೆ ಸಂಬಂಧವಿಲ್ಲದ ಕೆಲಸದ ಕಡೆ ಯುವಕರನ್ನು ಬಂಡವಾಳ ಶಾಹಿಗಳು ಕರೆದೊಯ್ಯುತ್ತಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಿಕೆಇಸಿ ಪ್ರಾಚಾರ್ಯ ಡಾ| ಎಸ್.ಬಿ.ಕಿವಡೆ ಮಾತನಾಡಿ, ವ್ಯವಸ್ಥೆಯ ಲೋಪ ದೋಷಗಳ ಕಡೆಗಣನೆಯಿಂದ ರೈತ ಶೋಷಣೆಗಳಿಗೆ ಒಳಗಾಗುತ್ತಿದ್ದಾನೆ. ವ್ಯವಸ್ಥೆಯ ಅಂಕು ಡೊಂಕು ತಿದ್ದಲು ಚಳವಳಿಗಳು ದಾರಿಯಾಗಿವೆ. ಆದ್ದರಿಂದ ಪ್ರಜ್ಞಾ ಸ್ಥಿತಿಯ ಅಗತ್ಯವಿದೆ ಎಂದರು.
ಪ್ರತಿಷ್ಠಾನದ ನಿರ್ದೇಶಕ ಡಾ| ಭೀಮಾಶಂಕರ ಬಿರಾದಾರ ಮಾತನಾಡಿ, ಕೃಷಿಯೂ ಜಾಗತಿಕರಣ ರೈತರ ಆತ್ಮಹತ್ಯೆ, ಉತ್ಪನ್ನಕ್ಕೆ ನಿಗದಿತ ನ್ಯಾಯ ಬೇಲೆ ಇಲ್ಲದೆ ಇರುವಂತಹ ಅನೇಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಬಹುರಾಷ್ಟ್ರೀಯ ಕಂಪನಿಗಳ ಶೋಷಣೆಗೆ ಒಳಗಾಗಿ ಕೃಷಿಕನ ಸ್ಥಿತಿಯೂ ಅತ್ಯಂತ ಹೀನಾಯ ಸ್ಥಿತಿಗೆ ತಲುಪಿದೆ ಎಂದರು. ಚಂದ್ರಶೇಖರ ಜಮಖಂಡಿ, ಸುಭಾಷ ರಗಟೆ, ಖಾನಸಾಬ್ ಪಠಾಣ, ಸಿದ್ರಾಮ ಬಾಲಕುಂದೆ, ಸಿದ್ದಣ್ಣ ಭೂಶೆಟ್ಟಿ, ಉಪನ್ಯಾಸಕರಾದ ರೇವಣಸಿದಪ್ಪ ದೊರೆಗಳು, ಡಾ|ಅರುಣಕುಮಾರ ಯಲಾಲ್ ದಯಾನಂದ ಶೀಲವಂತ, ಶರಣಬಸಪ್ಪ ಸಾಲಿ, ಸಂತೋಷ ಪಾಟೀಲ ಇದ್ದರು. ಕಾರ್ಯದರ್ಶಿ ದೇವೇಂದ್ರ ಬರಗಾಲೆ ನಿರೂಪಸಿದರು. ಪ್ರೇಮಸಾಗರ ಪಾಟೀಲ ವಂದಿಸಿದರು.