Advertisement

ಸಮಾಜದಲ್ಲಿ ಅಸಮಾಧಾನ ಹೆಚ್ಚುತ್ತಿದೆ. ಹೀಗೆ ಮುಂದುವರಿದರೆ 3ನೇ ಮಹಾಯುದ್ದ ನಡೆಯಬಹುದು: ಭಾಗವತ್

09:42 AM Feb 17, 2020 | Team Udayavani |

ಅಹಮದಾಬಾದ್: ಸಮಾಜದಲ್ಲಿ ಹೆಚ್ಚುತ್ತಿರುವ ‘ಹಿಂಸಾಚಾರ ಮತ್ತು ಅಸಮಾಧಾನ’ದ ಬಗ್ಗೆ ಕಳವಳ ವ್ಯಕ್ತಪಡಿಸಿದ ಆರ್‌ ಎಸ್‌ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮೂರನೇ ಮಹಾಯುದ್ಧದ ಭೀತಿ ಹೆಚ್ಚುತ್ತಿದೆ ಎಂದು ಹೇಳಿದರು.

Advertisement

ಈಗಾಗಲೇ ಎರಡು ವಿಶ್ವ ಯುದ್ಧಗಳು ನಡೆದಿದ್ದು ಮತ್ತು ಮೂರನೆಯ ಯುದ್ಧ ನಡೆಯುವ ಕುರಿತು ಬೆದರಿಕೆಗಳು  ಹೆಚ್ಚಾಗುತ್ತಿದೆ.  ಮೂರನೇ ಯುದ್ದಧ ಹಿಂದೆ ಹಿಂಸೆ ಮತ್ತು ಅಸಮಾಧಾನವಿದೆ. ಮಾಲೀಕರು, ಕಾರ್ಮಿಕರು, ಸರ್ಕಾರ, ಸಾರ್ವಜನಿಕರು, ವಿದ್ಯಾರ್ಥಿಗಳು, ಶಿಕ್ಷಕರು, ಎಲ್ಲರೂ ಆಂದೋಲನ ನಡೆಸುತ್ತಿದ್ದಾರೆ ಎಂದು ಭಾಗವತ್ ಅಹಮದಾಬಾದ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದರು.

ಸಮಾಜದಲ್ಲಿ ಯಾರೂ ಕೂಡ ಸಂತುಷ್ಟರಾಗಿಲ್ಲ. ಮಾಲಿಕರು ಮತ್ತು ಕಾರ್ಮಿಕರು, ಉದ್ಯೋಗದಾತರು ಮತ್ತು ಉದ್ಯೋಗಿಗಳು, ಸರ್ಕಾರ ಮತ್ತು ಸಾರ್ವಜನಿಕರು, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಎಲ್ಲರೂ ಪ್ರತಿಭಟನೆ ನಡೆಸುತ್ತಿದ್ದಾರೆ.

ನಾವೀಗ ಅಭಿವೃದ್ಧಿ ಹೊಂದಿದ ಜಗತ್ತಿನಲ್ಲಿ ನೆಲೆಸಿದ್ದೇವೆ. ದಶಕದ ಹಿಂದೆ ಸಿಗದ ಸೌಲಭ್ಯಗಳೆಲ್ಲಾ ಈಗ ಸಿಗುತ್ತಿವೆ. ಆದರೂ ಆಂದೋಲನಗಳು ನಡೆಯುತ್ತಿವೆ. ಹೀಗಾದರೇ ಮುಂದಿನ 100 ವರ್ಷಗಳಲ್ಲಿ ಆಗುವ ಬದಲಾವಣೆಗಳನ್ನು ಊಹಿಸಲು ಸಾಧ್ಯವಾಗದು. ಪಾಣಿಪತ್ ಕದನದಲ್ಲಿ ಏನಾಯಿತು ? ಮರಾಠರು ಗೆಲುವನ್ನು ಪಡೆದರೆ ಅಥವಾ ಸೋಲನುಭವಿಸಿದರೆ ? ಈ ಸುದ್ದಿ ಪೂನಾವನ್ನು ತಲುಪಲು ಅಂದು ಒಂದು ತಿಂಗಳು ಏಕಾಯಿತು. ಆದರೇ ಈ ಕಾಲದಲ್ಲಿ ಹಾಗಿಲ್ಲ. ಒಂದು ಈ ಮೇಲ್ ಕಳುಹಿಸಿದರೆ ಸೆಕೆಂಡ್ ಗಳಲ್ಲಿ ಉತ್ತರ ಬರುತ್ತದೆ ಎಂದರು.

ಪ್ರಸ್ತುತ ಜಗತ್ತಿನಲ್ಲಿ ಧರ್ಮಾಂಧತೆ, ಹಿಂಸೆ ಮತ್ತು ಭಯೋತ್ಪಾದನೆ ಹೆಚ್ಚುತ್ತಿದೆ. ಮಾನವರು ರೋಬೋಟ್‌ ಗಳಾಗುವುದನ್ನು ತಡೆಯಬೇಕು ಎಂದು ಆರ್‌ಎಸ್‌ಎಸ್ ಮೋಹನ್ ಭಾಗವತ್ ಮುಖ್ಯಸ್ಥರು ಪ್ರತಿಪಾದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next