Advertisement
ಬಂಧಿತ ಸೊಹೇಲ್ ಪಾಷಾ ಎಂಬಾತನಾಗಿದ್ದು, ಈತ ತಾನು ಬರೆದ ಹಾಡೊಂದು ಪ್ರಸಿದ್ಧಿಯಾಗಬೇಕೆಂದು ಬಯಸಿ ಈ ತಂತ್ರ ಬಳಸಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಮುಂಬೈ ಪೊಲೀಸರ ಅಪರಾಧ ವಿಭಾಗವು ರಾಯಚೂರಿನಿಂದ ಸಂದೇಶಗಳು ಬಂದ ಮೊಬೈಲ್ ಸಂಖ್ಯೆಯನ್ನು ಪತ್ತೆಹಚ್ಚಿ ಕಾರ್ಯಾಚರಣೆ ನಡೆಸಿದ್ದಾರೆ. ತಂಡ ರಾಯಚೂರಿಗೆ ಬಂದು ನಂಬರ್ ಹೊಂದಿರುವ ವೆಂಕಟೇಶ್ ನಾರಾಯಣ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ ನಾರಾಯಣ್ ಅವರ ಮೊಬೈಲ್ ಫೋನ್ಗೆ ಇಂಟರ್ನೆಟ್ ಸೌಲಭ್ಯ ಇರಲಿಲ್ಲ.ಫೋನ್ಗೆ ವಾಟ್ಸಾಪ್ ಇನ್ಸ್ಟಾಲೇಶನ್ ಒಟಿಪಿ ಬಂದಿರುವುದನ್ನು ಪೊಲೀಸರು ಪತ್ತೆ ಮಾಡಿದರು. ನವೆಂಬರ್ 3 ರಂದು ಮಾರುಕಟ್ಟೆಯೊಂದರಲ್ಲಿ ಅಪರಿಚಿತರು ತಮ್ಮ ಬಳಿಗೆ ಬಂದು ಕರೆ ಮಾಡಲು ಫೋನ್ ನೀಡಬಹುದೇ ಎಂದು ಕೇಳಿದ್ದರು ಎಂದು ನಾರಾಯಣ್ ಪೊಲೀಸರಿಗೆ ತಿಳಿಸಿದ್ದಾರೆ. ಒಟಿಪಿ ಪಡೆಯಲು ನಾರಾಯಣ್ ಅವರ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ವ್ಯಕ್ತಿ ತನ್ನ ಸ್ವಂತ ಮೊಬೈಲ್ನಲ್ಲಿ ವಾಟ್ಸಾಪ್ ಬಳಸಿಕೊಂಡಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
Related Articles
Advertisement
ಸಲ್ಮಾನ್ ಖಾನ್ ಗೆ ಬೆದರಿಕೆ ಹಾಕಿ ಕರ್ನಾಟಕದಲ್ಲಿ ಬಂಧನಕ್ಕೆ ಒಳಗಾದ ಎರಡನೇ ಆರೋಪಿ ಈತನಾಗಿದ್ದು , ಈ ಹಿಂದೆ ಪ್ರತ್ಯೇಕವಾಗಿ ಬೆದರಿಕೆ ಹಾಕಿದ್ದ ರಾಜಸ್ಥಾನ ಮೂಲದ ಭಿಕಾರಾಂ ಜಲಾರಾಂ ಎಂಬಾತನ ಹಾವೇರಿಯಲ್ಲಿ ಮುಂಬೈ ಪೊಲೀಸರು ಬಂಧನ ಮಾಡಿದ್ದರು.